Composer : Shri Tande Venkatesha vittala
ವಿಜಯ ಗುರುಗಳಂಘ್ರಿ ಕಮಲ ಭಜನೆ ಮಾಡಿರೊ
ಸುಜನಕೃತ ಜ್ಞಾನಾಧ್ವರ ಋತ್ವಿಜರ ಪಾಡಿರೊ [ಪ]
ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿ
ಅಜ್ಞಾನೋಗ್ರ ತಿಮಿರಾರ್ಕನುದ್-ವಿಘ್ನ ಮುನಿಮಣಿ
ಯಜ್ಞಮಗ್ನಾಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿ
ವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞಾವರದಾನಿ [೧]
ಅಂಭೋರುಹ ಸಂಭವೊದ್ಭವಂಭೋಜ ಭ್ರುಂಗ
ಶಂಭು ಸರ್ವೋತ್ತಮಾ ಶಂಕಾರಂಭ ಮಾತಂಗ
ಕಂಬುಗದಾ ಅಂಬುಜಾರಿ ಬಿಂಬ ಚಿನ್ಹಾಂಗ
ಬಿಂಬ ಕ್ರಿಯಾಭಾವಜ್ಞಾತ ಗುಂಭಾಂತರಂಗ [೨]
ವಿಪ್ರಜಾತಿ ವಿಪುಳಖ್ಯಾತಿ ಕ್ಷಿಪ್ರ ಫಲದಾತ
ಸುಪ್ರಾಸಾದವಾಣಿ ಅಮಿತ ಪ್ರಮತಿ ಅತಿ ಹಿತ
ಅಪ್ರತೀಕಾಲಂಬ ಶ್ರೀಶ ಸ್ವಾಪರೋಕ್ಷಿತ
ಅಪ್ರ ಬುದ್ಧ ಪಾಲ ಕಾರುಣ್ಯಾ ಪ್ರಾಕಾಶಿತ [೩]
ಕೀರ್ತಿತವ್ಯ ಕಾವ್ಯಾಚಾರ್ಯ ಸ್ಫೂರ್ತಿದಾಯಕ
ತೀರ್ಥ ಕ್ಷೇತ್ರಾದ್ಯಟನ ಶೀಲ ಸಾರ್ಥ ಕಾಯಕ
ಕಾರ್ತ ಸ್ವರೇತ್ಯಾದಿ ಕಾಷ್ಟ ಕೃಷ್ಣವರ್ತ್ಮಕ
ಪಾರ್ಥಮಿತ್ರ ಸ್ತೋತ್ರರತಿ ಪುಷ್ಪಸಾಯಕ [೪]
ದ್ವಂದಾತೀತ ಬಂಧುರಾತ್ಮ ನಂದ ತುಂದಿಲ
ಸಂದರ್ಶನ ದೇವ ಪುನಂತಿ ವಿಗತ ವಿಹ್ವಲ
ಮಂದಾತ್ಮನಾಗಿರಲೇನಿವರ ನಂಬಲನುಗಾಲ
ಮುಂದೆ ಕುಣಿವ ತಂದೆ ವೆಂಕಟೇಶವಿಠ್ಠಲ [೫]
vijaya gurugaLaMGri kamala Bajane mADiro
sujanakRuta j~jAnAdhvara Rutvijara pADiro [pa]
vij~jAnaprada j~jAtavya suj~jAnaKaNi
aj~jAnOgra timirArkanud-vighna munimaNi
yaj~jamagnABij~ja SrIsarvaj~ja priyavANi
viGnakaLedalpaj~jara pAlipa prAj~jAvaradAni [1]
aMBOruha saMBavodBavaMBOja BruMga
SaMBu sarvOttamA SaMkAraMBa mAtaMga
kaMbugadA aMbujAri biMba cinhAMga
biMba kriyABAvaj~jAta guMBAMtaraMga [2]
viprajAti vipuLaKyAti kShipra PaladAta
suprAsAdavANi amita pramati ati hita
apratIkAlaMba SrISa svAparOkShita
apra buddha pAla kAruNyA prAkASita [3]
kIrtitavya kAvyAcArya sPUrtidAyaka
tIrtha kShEtrAdyaTana SIla sArtha kAyaka
kArta svarEtyAdi kAShTa kRuShNavartmaka
pArthamitra stOtrarati puShpasAyaka [4]
dvaMdAtIta baMdhurAtma naMda tuMdila
saMdarSana dEva punaMti vigata vihvala
maMdAtmanAgiralEnivara naMbalanugAla
muMde kuNiva taMde veMkaTESaviThThala [5]
Leave a Reply