Seeteya bhumi

Composer : Shri Vijaya dasaru

By Smt.Shubhalakshmi Rao

ಸೀತೆಯ ಭೂಮಿಜಾತೆಯ ಜಗ-|
ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪ||

ಕ್ಷೀರ ವಾರಿಧಿಯ ಕುಮಾರಿಯ ತನ್ನ |
ಸೇರಿದವರ ಭಯಹಾರಿಯ ||
ತೋರುವಳು ಮುಕ್ತಿಹಾರಿಯ ಸರ್ವ |
ಸಾರ ಸುಂದರ ಶ್ರೀನಾರಿಯ ||೧||

ಈಶಕೋಟಿಯೊಳ್ ಗಣನೆಯ ಸ್ವಪ್ರ-|
ಕಾಶವಾದ ಗುಣಶ್ರೇಣಿಯ ||
ಈಶಾದ್ಯರ ಪೆತ್ತ ಕರುಣಿಯ ನಿ-|
ರ್ದೋಷ ವಾರಿಧಿ ಕಲ್ಯಾಣಿಯ||೨||

ವಿಜಯವಿಠ್ಠಲನ್ನ ರಾಣಿಯ ಪಂ-|
ಕಜಮಾಲೆ ಪಿಡಿದ ಪಾಣಿಯ ||
ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |
ಸುಜನ ವಂದಿತೆ ಅಹಿವೇಣಿಯ ||೩||


sIteya BUmijAteya jaga-|
nmAteya smarisi viKyAteya ||pa||

kShIra vAridhiya kumAriya tanna |
sEridavara BayahAriya ||
tOruvaLu muktihAriya sarva |
sAra suMdara SrInAriya ||1||

ISakOTiyoL gaNaneya svapra-|
kASavAda guNaSrENiya ||
ISAdyara petta karuNiya ni-|
rdOSha vAridhi kalyANiya||2||

vijayaviThThalanna rANiya paM-|
kajamAle piDida pANiya ||
vijayalakShmi gajagamaneya nitya |
sujana vaMdite ahivENiya ||3||

Leave a Reply

You might also like

error: Content is protected !!