Parama harushavayitu

Composer : Shri Mohana dasaru

By Smt.Shubhalakshmi Rao

ಪರಮ ಹರುಷವಾಯಿತು ವಿಜಯರಾಯ
ಗುರುಗಳಂಘ್ರಿಯನೆ ಕಂಡು ||ಪ||

ಪರಿಪರಿ ಜನುಮದ ಥರಥರದಘಗಳು
ತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ||ಅ.ಪ||

ಕಾನನದೊಳು ತಿರುಗಿ ತನ್ನ ಮಾತಿ-
ಯಾನು ಕಾಣದೆ ಚಿಂತಿಸಿ |
ಧೇನಿಸಿ ಅರಸಲಾಕ್ಷಣ-
ದೊಳಗವಳ ವತ್ಸತಾನು ಕೂಗಲು
ಕಾಮಧೇನು ಒದಗಿದಂತೆ ||೧||

ತರಣಿಯ ಕಿರಣದಿಂದ ತಪಿಸಿನೆರ
ಬಾಯ ಬಿಡುವುತ ಬಪ್ಪರನ |
ಕರವ ಪಿಡಿದು ಸುರ
ತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆ
ದಿವ್ಯ ಸರಸಿಯನಿತ್ತಂತೆ ||೨||

ಧನವ ಪೋಗಾಡಿ ಕೊಂಡು ನರನು
ಬಲುಮನ ಕ್ಲೇಶದಿಂದಿರಲು |
ಘನ ಮಹಿಮನೆ ನಮ್ಮ ಮೋಹನ
ವಿಠಲ-ವನ ಕೈಯ್ಯೊಳಗ
ಚಿಂತಾಮಣಿಯನಿತ್ತಂತೆ ||೩||


parama haruShavAyitu vijayarAya
gurugaLaMGriyane kaMDu ||pa||

paripari janumada tharatharadaGagaLu
tirugi nODadalEve teraLi pOdavu yiMdu ||a.pa||

kAnanadoLu tirugi tanna mAti-
yAnu kANade ciMtisi |
dhEnisi arasalAkShaNa-
doLagavaLa vatsatAnu kUgalu
kAmadhEnu odagidaMte ||1||

taraNiya kiraNadiMda tapisinera
bAya biDuvuta bapparana |
karava piDidu sura
taruvinaDiyalli ku-LLirisi kuDiye
divya sarasiyanittaMte ||2||

dhanava pOgADi koMDu naranu
balumana klESadiMdiralu |
Gana mahimane namma mOhana
viThala-vana kaiyyoLaga
ciMtAmaNiyanittaMte ||3||

Leave a Reply

Your email address will not be published. Required fields are marked *

You might also like

error: Content is protected !!