Composer : Shri Vyasa Vittala [Kalluru Subbanacharya]
ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |
ದಾಸರಾಯನಾ ದಯವ ಸೂಸಿ ಪಡೆದನಾ
ದೋಷರಹಿತನಾ ಸಂತೋಷಭರಿತನಾ ||೧||
ಜ್ಞಾನಾವಂತನ ಬಲು ನಿಧಾನಿ ಶಾಂತನ
ಮಾನ್ಯವಂತನ ಬಹುವದಾನ್ಯದಾತನ ||೨||
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||
ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದ ಮರೆತನ ||೪||
ಇವರ ನಂಬಿದ ಜನಕೇ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು ||೫||
ಪಾಪಕೋಟಿಯ ರಾಶಿ ಲೇಪವಾಗದೋ
ತಾಪ ಕಳೆವನು ಬಲು ದಯಾ ಪಯೋನಿಧಿ ||೬||
ಕವನರೂಪದಿ ಹರಿಯ ಸ್ತವನ ಮಾಡಿದಾ
ಭುವನ ಬೇಡಿದಾ ಮಾಧವನ ನೋಡಿದ ||೭||
ರಂಗನೆಂದನಾ ಭವವು ಹಿಂಗಿತೆಂದನಾ
ಮಂಗಳಾಂಗನಾ ಅಂತರಂಗವರಿತನಾ ||೮||
ಕಾಶಿನಗರದಲ್ಲಿದ್ದ ವ್ಯಾಸ ದೇವನಾ
ದಯವ ಸೂಸಿ ಪಡೇದನಾ ಉಲ್ಲಾಸತನದಲಿ ||೯||
ಚಿಂತೇ ಬ್ಯಾಡಿರೋ ನಿಶ್ಚಿಂತರಾಗಿರೋ
ಶಾಂತ ಗುರುಗಳ ಪಾದವಾಂತು ನಂಬಿರೋ ||೧೦||
ಖೇದವಾಗದೋ ನಿಮಗೆ ಮೋದವಾಹುದೋ
ಆದಿದೆವನಾ ಸುಪ್ರಸಾದವಾಹುದೋ ||೧೧||
ತಾಪ ತಡೆವನೋ ಬಂದ ಪಾಪ ಕಡಿವನೋ
ಶ್ರೀಪತೀಶನ ಪದ ಸಮೀಪವಿಡುವನೋ ||೧೨||
ಗಂಗೆ ಮಿಂದರೆ ಮಲವು ಹಿಂಗಿತಲ್ಲದೇ
ರಂಗನೊಲಿಯನೊ ಭಕ್ತರ ಸಂಗ ದೊರಯದೇ ||೧೩||
ವೇದ ಓದಲು ಬರಿದೆ ವಾದ ಮಾಡಲೂ
ಹಾದಿ ಯಾಗದೋ ಬುಧರ ಪಾದ ನಂಬದೇ ||೧೪||
ಲೆಕ್ಕವಿಲ್ಲದಾ ದೆಶತುಕ್ಕಿ ಬಂದರೂ
ದುಃಖವಿಲ್ಲದೆ ಲೇಶ ಭಕ್ತಿ ದೊರೆಯದೋ ||೧೫||
ದಾನ ಮಾಡಲು ದಿವ್ಯಗಾನ ಪಾಡಲು
ಜ್ಞಾನ ದೊರೆಯದೋ ಇವರಧೀನವಾಗದೇ ||೧೬||
ಇಷ್ಠೆ ಯಾತಕೇ ಕಂಡ ಕಷ್ಟವ್ಯಾತಕೇ
ದಿಟ್ಟ ಗುರುಗಲಾ ಪಾದ ಮುಟ್ಟಿ ಭಜಿಸಿರೋ ||೧೭||
ಪೂಜೆ ಮಾಡಲೂ ಕಂಡ ಗೋಜು ಬೀಳಲೂ
ಬೀಜ ಮಾತಿನಾ ಫಲ ಸಹಜ ದೊರಕದು ||೧೮||
ಸುರರು ಎಲ್ಲರೂ ಇವರ ಕರವ ಪಿಡಿವರು
ತರಲರಂದದೀ ಹಿಂದೆ ತಿರುಗುತಿಪ್ಪರು ||೧೯||
ಗ್ರಹಗಲೆಲ್ಲವೂ ಇವರ್ಗೆ ಸಹಾಯ ಮಾಡುತಾ
ಅಹೊರಾತ್ರಿಲೀ ಸುಖದ ನಿವಹ ಕೊಡುವವು ||೨೦||
ವ್ಯಾಧಿ ಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದವಾಹುದೋ ||೨೧||
ಪತಿತಪಾಮರ ಮಂದಮತಿಯು ನಾ ಬಲೂ
ತುತಿಸಲಾಪನೇ ಇವರ ಅತಿಶಯಂಗಳಾ ||೨೨||
ಕರುಣದಿಂದಲೀ ಯೆಮ್ಮ ಪೊರೆವನಲ್ಲದೇ
ದುರಿತ ಕೋಟಿಯಾ ಬ್ಯಾಗ ತರಿವ ದಯದಲೀ ||೨೩||
ಮಂದಮತಿಗಳೂ ಇವರ ಚಂದವರಿಯದೇ
ನಿಂದಿಸುವರು ಭವದ ಬಂಧ ತಪ್ಪದೋ ||೨೪||
ಇಂದಿರಾಪತೀ ಇವರ ಮುಂದೆ ಕುಣಿವನೋ
ಅಂದ ವಚನವಾ ನಿಜಕೆ ತಂದು ತೋರ್ಪನು ||೨೫||
ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ ||೨೬||
ಸಟೆ ಇದೆಲ್ಲವೋ ವ್ಯಾಸವಿಠಲ ಬಲ್ಲನೂ
ಪಠಿಸಬಹುದಿದೂ ಕೇಳಿ ಕುಟಿಲರಹಿತರು ||೨೭||
smarisi badukiro divya charaNakeragiro
durita taridu poreva vijaya gurugaleMbarA |
dAsarAyanA dayava sUsi paDedanA
dOSharahitanA saMtOShabharitanA ||1||
j~jAnAvaMtana balu nidhAni shAMtana
mAnyavaMtana bahuvadAnyadAtana ||2||
hariya bhajisuva narahariya yajisuva
durita tyajisuva janake haruSha surisuva ||3||
mOdabharitana paMchabhEdavaritana
sAdhucharitana manaviShAda maretana ||4||
ivara naMbida janakE bhavavideMbudu
havaNavAgadO nammavara matavidu ||5||
pApakOTiya rAshi lEpavAgadO
tApa kaLevanu balu dayA payOnidhi ||6||
kavanarUpadi hariya stavana mADidA
bhuvana bEDidA mAdhavana nODida ||7||
raMganeMdanA bhavavu hiMgiteMdanA
maMgaLAMganA aMtaraMgavaritanA ||8||
kAshinagaradallidda vyAsa dEvanA
dayava sUsi paDEdanA ullAsatanadali ||9||
chiMtE byADirO nishchiMtarAgirO
shAMta gurugaLa pAdavAMtu naMbirO ||10||
khEdavAgadO nimage mOdavAhudO
AdidevanA suprasAdavAhudO ||11||
tApa taDevanO baMda pApa kaDivanO
shrIpatIshana pada samIpaviDuvanO ||12||
gaMge miMdare malavu hiMgitalladE
raMganoliyano bhaktara saMga dorayadE ||13||
vEda Odalu baride vAda mADalU
hAdi yaagadO budhara pAda naMbadE ||14||
lekkavilladA deshatukki baMdarU
duHkhavillade lEsha bhakti doreyadO ||15||
dAna mADalu divyagAna pADalu
j~jAna doreyadO ivaradhInavAgadE ||16||
iShThe yAtakE kaMDa kaShTavyAtakE
diTTa gurugalA pAda muTTi bhajisirO ||17||
pUje mADalU kaMDa gOju beeLalU
bIja mAtinA phala sahaja dorakadu ||18||
suraru ellarU ivara karava piDivaru
taralaraMdadI hiMde tirugutipparu ||19||
grahagalellavU ivarge sahAya mADutA
ahorAtrilee sukhada nivaha koDuvavu ||20||
vyAdhi bAradO dEha bAdhe taTTadO
AdidEvanA suprasAdavAhudO ||21||
patitapAmara maMdamatiyu nA balU
tutisalApanE ivara atishayaMgaLA ||22||
karuNadiMdalee yemma porevanalladE
durita kOTiyA byAga tariva dayadalee ||23||
maMdamatigaLU ivara chaMdavariyadE
niMdisuvaru bhavada baMdha tappadO ||24||
iMdirApatI ivara muMde kuNivanO
aMda vachanavA nijake taMdu tOrpanu ||25||
udayakAladi I padava paThisalU
madaDanAdarU j~jAna udayavAhudO ||26||
saTe idellavO vyAsaviThala ballanU
paThisabahudidU kELi kuTilarahitaru ||27||
Leave a Reply