Composer : Shri Varada vittala
Shri Guru Jagannatha dasaru:
1837 – 1918, Aradhane – Ashwija bahula Paadya
ಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |
ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |
गुरुपूर्व जगन्नाथदासस्यामित तेजस: ।
तस्यपादाब्ज संभूता: रजांसि शिरसावहे ।
gurupoorva jagannaathadaasasyaamita tEjasa: |
tasyapaadaabja sambhootaa: rajaamsi shirasaavahE |
ತೆರಳಿ ಪೊದರು ಗುರುಜಗನ್ನಾಥ-
ವಿಠಲಾಂಕಿತ ಗುರುವರ್ಯರು || ಪ ||
ಪರಮ ಭಕ್ತರಿಗೆಲ್ಲ ಗುರು
ರಾಘವೇಂದ್ರರ ಇರುವು ತೋರುತ || ಅ.ಪ ||
ದುರುಳ ಜನರಿಗೆ ಮರುಳುಗೊಳಿಸುತ |
ವರಳನೆಳೆದ ಗೋಪಾಲಮೂರ್ತಿಯ |
ಪರಮ ಭವಾಬ್ಧಿಯುಳ್ಳ ಭಾಗವತನು | ಅತಿ |
ವಿರಳದಲಿ ತಿಳಿಸುವ ಜ್ಞಾನಿವರ್ಯನು || ೧ ||
ಬರೆದೋದದಲೆ ಶ್ರೀ ಗುರುವರ್ಯನ |
ಕರುಣ ಕಟಾಕ್ಷದಿ ಪರಿ |
ಪರಿ ಶಾಸ್ತ್ರದ ಮರ್ಮವನರಿದು ||
ಚರಿಸಿದರು ಬಲು ದೇಶದಲಿ |
ಸರಿಯಿಲ್ಲವೆಂಬ ಪೆಸರಿನಲಿ || ೨ ||
ಕಲಿಯುಗದ ಜನರಿಗೆ
ಕಲುಷಿತರಂತೆ ತೋರುತ |
ಕಳೆದು ಹೋದರು
ಪ್ರಾರಬ್ಧ ನಿಮಿತ್ತದಿ |
ಕಾಲಯುಕ್ತ ಸಂವತ್ಸರ
ದಾಶ್ವಯುಜ ಪಾಡ್ಯ ರವಿವಾರ |
ಹೇಳಿ ಕೇಳುತಲಿ ಶ್ರೀ ವರದವಿಠ್ಠಲನ
ಪುರವ ಪೊಂದಿದರು || ೩ ||
teraLi podaru gurujagannAtha-
viThalAMkita guruvaryaru || pa ||
parama Baktarigella guru
rAGavEMdrara iruvu tOruta || a.pa ||
duruLa janarige maruLugoLisuta |
varaLaneLeda gOpAlamUrtiya |
parama BavAbdhiyuLLa BAgavatanu | ati |
viraLadali tiLisuva j~jAnivaryanu || 1 ||
baredOdadale SrI guruvaryana |
karuNa kaTAkShadi pari |
pari SAstrada marmavanaridu ||
carisidaru balu dESadali |
sariyillaveMba pesarinali || 2 ||
kaliyugada janarige
kaluShitaraMte tOruta |
kaLedu hOdaru
prArabdha nimittadi |
kAlayukta saMvatsara
dASvayuja pADya ravivAra |
hELi kELutali SrI varadaviThThalana
purava poMdidaru || 3 ||
Leave a Reply