Composer : Shri Kanakadasaru
ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ |
ನಿಮ್ಮೊಳಗಿಹನ್ಯಾರಮ್ಮಾ || ಪ ||
ಕಮ್ಮಗೋಲನ ವೈರಿ ಸುತನಾದ ಸೊಂಡಿಲ |
ಹೆಮ್ಮಯ್ಯ ಗಣನಾಥನೇ ಕಣಮ್ಮ || ಅ.ಪ ||
ಮೊರೆಕಪ್ಪಿನ ಭಾವ ಮೊರದಗಲದ ಕಿವಿ |
ಕೋರೆದಾಡೆಯನಾರಮ್ಮ |
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ |
ಧೀರ ತಾ ಗಣನಾಥನೇ ಕಣಮ್ಮ ||೧||
ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ |
ದಿಟ್ಟ ತಾನಿವನಾರಮ್ಮ |
ಪಟ್ಟದರಾಣಿ ಪಾರ್ವತಿಯ ಕುಮಾರನು |
ಹೊಟ್ಟೆಯ ಗಣನಾಥನೇ ಕಣಮ್ಮ ||೨||
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ |
ಭಾಷಿಗನಿವನಾರಮ್ಮ |
ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ |
ಕೇಶವ ದಾಸ ಕಣೇ ಅಮ್ಮಯ್ಯ ||೩||
nammamma SAradE umA mahESvarI |
nimmoLagihanyArammA || pa ||
kammagOlana vairi sutanAda soMDila |
hemmayya gaNanAthanE kaNamma || a.pa ||
morekappina BAva moradagalada kivi |
kOredADeyanAramma |
mUru kaNNana suta muridiTTa caMdrana |
dhIra tA gaNanAthanE kaNamma ||1||
uTTadaTTiyu bigiduTTa callaNada |
diTTa tAnivanAramma |
paTTadarANi pArvatiya kumAranu |
hoTTeya gaNanAthanE kaNamma ||2||
rASi vidyeya balla ramaNi haMbalanolla |
BAShiganivanAramma |
lEsAgi janara salahuva kAgineleyAdi |
kESava dAsa kaNE ammayya ||3||
Leave a Reply