Padumanabhane palisayya

Composer : Shri Rangesha vittala

By Smt.Shubhalakshmi Rao

ಪದುಮನಾಭನೆ ಪಾಲಿಸಯ್ಯ |
ತುದಿ ಮೊದಲ್ಲಿಲ್ಲದಂಥ ದೇವನೆ ,
ಹದಿನಾಲ್ಕು ಲೊಕಗಲ್ಲೆಲ್ಲವನು ಉದರದೊಳ್
ಇಂಬಿಟ್ಟಿಹ ಭೂಪನೆ |ಅ.ಪ|

ಆದಿಯಲಿ ಮಧು ಕೈಟಬರನು
ಸಂಹರಿಸಿದಂಥ ಶೂರನೆ |
ವೇದವನು ಕದ್ದೊಯ್ದು ದಾನವನೊಳು
ಕಾದಿ ಗೆದ್ದ ಧೀರನೆ |೧|

ಹದಿನಾರು ಸಾವಿರ ಗೋಪಿಯ
ನಾಳಿದಾಮಿತ ಬಲವಂತನೆ |
ಕದನಕೊದಗಿದಸುರರನ್ನು
ಸದೆ ಬಡಿದ ಪ್ರಖ್ಯಾತನೆ |೨|

ಸಾಧು ಸಜ್ಜನರ ಸಂತಾಪ
ಕಳೆದ ಮೋದತೀರ್ಥಾರಾಧ್ಯನೆ |
ಆದಿದೈವಿಕಾದಿ ಈತಿ ಬಾಧೆ
ಕಳೆಯೊ ರಂಗೇಶ ವಿಠಲನೆ |೩|


padumanAbhane pAlisayya |
tudi modallilladaMtha dEvane ,
hadinAlku lokagallellavanu udaradoL
iMbiTTiha bhUpane |a.pa|

Adiyali madhu kaiTabaranu
saMharisidaMtha shUrane |
vEdavanu kaddoydu dAnavanoLu
kAdi gedda dheerane |1|

hadinAru sAvira gOpiya
nALidAmita balavaMtane |
kadanakodagidasurarannu
sade baDida prakhyAtane |2|

sAdhu sajjanara saMtApa
kaLeda mOdatIrthArAdhyane |
AdidaivikAdi eeti bAdhe
kaLeyo raMgEsha viThalane |3|

Leave a Reply

Your email address will not be published. Required fields are marked *

You might also like

error: Content is protected !!