-
Padumanabhane palisayya
Composer : Shri Rangesha vittala ಪದುಮನಾಭನೆ ಪಾಲಿಸಯ್ಯ |ತುದಿ ಮೊದಲ್ಲಿಲ್ಲದಂಥ ದೇವನೆ ,ಹದಿನಾಲ್ಕು ಲೊಕಗಲ್ಲೆಲ್ಲವನು ಉದರದೊಳ್ಇಂಬಿಟ್ಟಿಹ ಭೂಪನೆ |ಅ.ಪ| ಆದಿಯಲಿ ಮಧು ಕೈಟಬರನುಸಂಹರಿಸಿದಂಥ ಶೂರನೆ |ವೇದವನು ಕದ್ದೊಯ್ದು ದಾನವನೊಳುಕಾದಿ ಗೆದ್ದ ಧೀರನೆ |೧| ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ |ಕದನಕೊದಗಿದಸುರರನ್ನುಸದೆ ಬಡಿದ ಪ್ರಖ್ಯಾತನೆ |೨| ಸಾಧು ಸಜ್ಜನರ ಸಂತಾಪಕಳೆದ ಮೋದತೀರ್ಥಾರಾಧ್ಯನೆ |ಆದಿದೈವಿಕಾದಿ ಈತಿ ಬಾಧೆಕಳೆಯೊ ರಂಗೇಶ ವಿಠಲನೆ |೩| padumanAbhane pAlisayya |tudi modallilladaMtha dEvane ,hadinAlku lokagallellavanu udaradoLiMbiTTiha bhUpane |a.pa| Adiyali madhu…
