Composer : Shri Pranesha dasaru
Shri Madhava Tirtharu – 1333-1349 AD –
Direct desciple of Shri Acharya Madhwaru..
sAdhitAkhilasattattvam bAdhitAkhiladurmatam |
bodhitAkhilasanmArgaM mAdhavAkhyayatiM bhaje ||
ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ |
ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ |
साधिताखिलसत्तत्वम् बाधिताखिलदुर्मतम्।
बोधिताखिलसन्मार्गं माधवाख्ययतिं भजे॥
VRINDAVANA – MANURU (near Gulbarga)
Aradhane : BHADRAPADA AMAVASYA
ನೋಡಿದೆ ನಾ ಧನ್ಯನಿಂದಿಗೆ |
ನೋಡಿದೆ ಗುರು ಮಾಧವತೀರ್ಥರ
ವೃಂದಾವನವನು || ಪ ||
ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ |
ಪಿಂಗಳಗೇನು ಜ್ಞಾನಿಗಳಗೇನು |
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ |
ಹಿಂಗಿಸಬೇಕೆಂಬುದಲ್ಲದೇ ಮನವೇ || ೧ ||
ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ |
ಕರ ಪೂಜಿತಾರವಿಂದನಾಭರಲ್ಲಿ |
” ಧರಾಧರಜ ” ತೀರದಿ ಸತ್ಯ ಮುನಿಗಳಿಂದ |
ನಿರುತಾರಾಧನೆ ಕೊಳುತಿರ್ಪರು ಮನವೇ || ೨ ||
ಏನು ಇವರ ಬಣ್ಣಿಸಲಿ ಎನ್ನಿಂದೊಶವಲ್ಲ |
ಆನತ ಜನರಿಗೆ ಕರುಣಿಸಿ |
ಪ್ರಾಣೇಶವಿಠ್ಠಲನ ಧಾಮ ತೋರಿಸುವರು |
ಕ್ಷೋಣಿಯೊಳಗಪ್ರತಿಮ ಮಹಿಮರು || ೩ ||
nODide nA dhanyaniMdige |
nODide guru mAdhavatIrthara
vRuMdAvanavanu || pa ||
gaMgegEnu prayOjana viLeyoLage bAhadake |
piMgaLagEnu j~jAnigaLagEnu |
tuMga mahimeyiMda aj~ja janara pApa |
hiMgisabEkeMbudalladE manavE || 1 ||
narahari guru suta varada akShOByamuni |
kara pUjitAraviMdanABaralli |
” dharAdharaja ” tIradi satya munigaLiMda |
nirutArAdhane koLutirparu manavE || 2 ||
Enu ivara baNNisali enniMdoSavalla |
Anata janarige karuNisi |
prANESaviThThalana dhAma tOrisuvaru |
kShONiyoLagapratima mahimaru || 3 ||
Leave a Reply