Krishna nindastuti suladi – Yakelavo nigamamani

Composer : Shri Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿ
ರಾಗ: ಕಲ್ಯಾಣಿ

ಝಂಪೆತಾಳ

ಯಾಕೆಲವೋ ನಿಗಮಮಣಿ ಈ ಕುಟಿಲತನವೇನೋ
ಜೋಕೆ ಮಾಡುವದು ನಿನ್ನಿಂದ ಆಗದೇ
ಸಾಕೆ ಸಾಕುವ ಬಿರಿದು ಭಕುತ ವತ್ಸಲನೆಂಬ
ವಾಕು ಬೇಕಾಗಿಲ್ಲವೇನೋ ಪೇಳೋ
ಏಕಮೇವಾನೆಂದು ಸ್ತುತಿಸಿದರೆ ನಿನ್ನ ಮೊಗ –
ವಾಕಾಶ ನೋಡುತಿದೆ ಗರ್ವದಲಿ
ಬಾ ಕುಳ್ಳಿರಿಲ್ಲಿ ನಿನ್ನ ದೇವ ದೈವತನವೇನೋ
ಆಕಳನು ಕಾಯಿದಿ ಪೋಕತನದ –
ಲ್ಲೇಕಿಕನಾಗಿ ಆರಿಸಿದ ಹಣ್ಣು ಹಂಪಲೆ
ನಾಕ ಜನ ನೋಡುತಿರೆ ಮೆಲಲಿಲ್ಲವೇ
ಈ ಕಥೆಯನಾರಾದರರಿಯದವರೇ ಇಲ್ಲ
ನಾ ಕಠಿಣ ಉತ್ತರ ಪೇಳಲೇಕೆ
ಪ್ರಕಾಶಾತ್ಮ ನಾಮ ವಿಜಯವಿಟ್ಠಲ ಎನ್ನ
ವಾಕ ಬರದದ್ದು ನೀನು ಬಿಡಿಸಲಾಪೆಲೋ ದೇವ || ೧ ||

ಮಟ್ಟತಾಳ

ಭೂತ ಭೂತವೆಂದು ಭೀತಿಗೊಂಡರೆ ಆ –
ಭೂತವೆ ಮಹದೊಡ್ಡ ಭೂತವಾಗಿ ತೋರಿ
ಆತುಮದೊಡನೆ ಸಂಗಾತ ತಿರುಗಿದಂತೇ
ತಾ ತೊಡಕಿಕೊಂಡು ಭೀತಿಗೊಳಿಸುವದು
ಭೂತ ನಾಮಕ ದೇವಾ ವಿಜಯವಿಟ್ಠಲ ನಿನಗೆ
ಸೋತೆ ವೆಂದವರಿಗೆ ಭೂತನಾಗಿ ನಿಲುವೆ || ೨ ||

ತ್ರಿವಿಡಿತಾಳ

ಎದೆ ಮೇಲೊದದು ಅಂಜದಲೆ ನುಡಿಸಿದವನ
ಮುದದಿಂದಲರ್ಚಿಸಿ ಒದಗಿ ಬಿನ್ನೈಸಿದೆ
ಹುದುಗಿ ಗದಗದ ನದರಿ ಬೆದರಿ ನಿಂದವನಿಗೆ
ಬಧಿರನಂತೆ ಮಂದನಾಗಿ ಕೇಳದಲಿಪ್ಪೆ
ಪದೋಪದಿಗೆ ನಿನ್ನ ಪದಗಳ ನೆರೆನಂಬಿ
ಕದಲದಲೆ ನಿತ್ಯ ಹೃದಯದೊಳು
ಮೃದುವಾದ ಮನದಲ್ಲಿ ವಂದಿಸಿ ಕೊಂಡಾಡೆ
ಚದರಿ ದೂರಾಗಿ ಪೋಗುವದು ಏನೋ
ಎದುರಿಲಿ ನಿಂದು ತಿರುಗದ ಭಕ್ತರಿಗೆಲ್ಲಾ
ವದನದಿಂದಲಿ ಸೋಲಬಾರದ ಮುನ್ನ
ಬದಿಯಲಿ ನಿಂದು ಪರಿಪಾಲಿಸಿ ತೊಲಗದೆ
ಮದುವೆ ತೆತ್ತಿಗನಂತೆ ಇರಳು ಹಗಲು
ಪದುಮನಾಭನೆ ನಮ್ಮ ವಿಜಯವಿಟ್ಠಲ ಸ –
ರ್ವದ ನಿನ್ನ ನೆನೆದವಗೆ ವಿಧಿ ನಿಷೇಧವಿಲ್ಲಾ || ೩ ||

ಅಟ್ಟತಾಳ

ಬಿಟ್ಟರೆ ಸಿಗನೆಂಬೊ ದಿಟ್ಟತನವೇನೋ
ಇಟ್ಟಣಿಸಿ ನಿನ್ನ ಅಟ್ಟುಳಿಂದಲಿ ಬೆ –
ನ್ನಟ್ಟಿ ಬಿಡದೆ ಬಂದು ಉಟ್ಟ ಪೀತಾಂಬರ
ದಟ್ಟಿಯ ಶರಗನು ದಟ್ಟಡಿಯಿಂದಲಿ ನಿನ್ನ
ಮುಟ್ಟಿ ಪಿಡಿದು ಒಳಗಿಟ್ಟು ಕೊಂಡು ಜಗ –
ಜಟ್ಟಿ ಚಿತ್ತದಲ್ಲಿ ಕಟ್ಟಿಹಾಕುವವೆನು
ಅಟ್ಟಹಾಸದಲ್ಲಿ ರಟ್ಟು ಮಾಡಿಬಿಡುವೆ
ಇಷ್ಟದೈವವೆ ವಿಜಯವಿಟ್ಠಲರೇಯನೇ
ಪುಟ್ಟದಂತೆ ಪಾಪ ನಷ್ಟವ ಮಾಡೋ || ೪ ||

ಆದಿತಾಳ

ತಿಲವನ್ನು ಕರತಳದಲ್ಲಿ ಇಟ್ಟುಕೊಳ್ಳಲು
ಸುಲಭತನದಿಂದಲಿ ತೈಲ ಫಲಿಸೋದೆ ಎಲೋ ದೇವಾ
ಸಲಿಗೆಯಿಂದಲಿ ನಿನಗೆ ಪಲ್ಲುದೆರೆದು ಬೇಡಿದರೆ
ಒಲಿದು ಕೊಡುವದು ಗುಣಾವಳಿಗಳು ನಿನ್ನವಲ್ಲ
ಒಳಗೆ ನಿಲಿಸಿಕೊಂಡು ಸಲೆ ಭಕುತಿಲಿಂದ
ಕೆಲಸಕ್ಕೆ ಪೋಗಗೊಡದಲೆ ಸಿಗಿಸಿಕೊಂಡು
ಚಲುವ ಕ್ಷೇತ್ರಜ್ಞ ವಿಜಯವಿಟ್ಠಲ ನಿನಗೆ
ಬಲವಂತ ನಾಗದಲೆ ಅಳಿಯವು ಪಾಪಾ || ೫ ||

ಜತೆ

ನಾ ಮುಂದೆ ನೀ ಹಿಂದೆ ಗರುವಿಕೆ ನಿನಗೇಕೋ
ಸಾಮಗ ವಿಜಯವಿಟ್ಠಲನೆ ಎನ್ನಾಧೀನಾ ||


SrIvijayadAsArya viracita
SrIkRuShNa niMdAstuti suLAdi
rAga: kalyANi

JaMpetALa

yAkelavO nigamamaNi I kuTilatanavEnO
jOke mADuvadu ninniMda AgadE
sAke sAkuva biridu Bakuta vatsalaneMba
vAku bEkAgillavEnO pELO
EkamEvAneMdu stutisidare ninna moga –
vAkASa nODutide garvadali
bA kuLLirilli ninna dEva daivatanavEnO
AkaLanu kAyidi pOkatanada –
llEkikanAgi Arisida haNNu haMpale
nAka jana nODutire melalillavE
I katheyanArAdarariyadavarE illa
nA kaThiNa uttara pELalEke
prakASAtma nAma vijayaviTThala enna
vAka baradaddu nInu biDisalApelO dEva || 1 ||

maTTatALa

BUta BUtaveMdu BItigoMDare A –
BUtave mahadoDDa BUtavAgi tOri
AtumadoDane saMgAta tirugidaMtE
tA toDakikoMDu BItigoLisuvadu
BUta nAmaka dEvA vijayaviTThala ninage
sOte veMdavarige BUtanAgi niluve || 2 ||

triviDitALa

ede mElodadu aMjadale nuDisidavana
mudadiMdalarcisi odagi binnaiside
hudugi gadagada nadari bedari niMdavanige
badhiranaMte maMdanAgi kELadalippe
padOpadige ninna padagaLa nerenaMbi
kadaladale nitya hRudayadoLu
mRuduvAda manadalli vaMdisi koMDADe
cadari dUrAgi pOguvadu EnO
edurili niMdu tirugada BaktarigellA
vadanadiMdali sOlabArada munna
badiyali niMdu paripAlisi tolagade
maduve tettiganaMte iraLu hagalu
padumanABane namma vijayaviTThala sa –
rvada ninna nenedavage vidhi niShEdhavillA || 3 ||

aTTatALa

biTTare siganeMbo diTTatanavEnO
iTTaNisi ninna aTTuLiMdali be –
nnaTTi biDade baMdu uTTa pItAMbara
daTTiya Saraganu daTTaDiyiMdali ninna
muTTi piDidu oLagiTTu koMDu jaga –
jaTTi cittadalli kaTTihAkuvavenu
aTTahAsadalli raTTu mADibiDuve
iShTadaivave vijayaviTThalarEyanE
puTTadaMte pApa naShTava mADO || 4 ||

AditALa

tilavannu karataLadalli iTTukoLLalu
sulaBatanadiMdali taila PalisOde elO dEvA
saligeyiMdali ninage palluderedu bEDidare
olidu koDuvadu guNAvaLigaLu ninnavalla
oLage nilisikoMDu sale BakutiliMda
kelasakke pOgagoDadale sigisikoMDu
caluva kShEtraj~ja vijayaviTThala ninage
balavaMta nAgadale aLiyavu pApA || 5 ||

jate

nA muMde nI hiMde garuvike ninagEkO
sAmaga vijayaviTThalane ennAdhInA ||

Leave a Reply

Your email address will not be published. Required fields are marked *

You might also like

error: Content is protected !!