Composer : Shri Purandara dasaru
ಸುಂದರ ಮೂರುತಿ ಮುಖ್ಯಪ್ರಾಣ,
ಬಂದ ನಮ್ಮ ಮನೆಗೆ |
ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆ
ಮುಖ್ಯ ಪ್ರಾಣ ಬಂದ ಮನೆಗೆ ,
ಶ್ರೀರಾಮ ನಾಮ ಧ್ವನಿಗೆ |ಪ|
ಕಣಕಾಲಂದುಗೆ ಗೆಜ್ಜೆ ಝಣಝಣರೆನುತ,
ಜಣಕು ಜಣಕು ಎಂದು ಕುಣಿಕುಣಿದಾಡುತ |
ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆ,
ಮುಖ್ಯ ಪ್ರಾಣ ಬಂದ ಮನೆಗೆ ,
ಶ್ರೀರಾಮ ನಾಮ ಧ್ವನಿಗೆ |೧|
ತುಂಬುರು ನಾರದ ವೀಣೆ ಬಾರಿಸುತ,
ರಾಮನಾಮ ಪಾಡುತ, ರಾಮನಾಮ ಪಾಡುತ |
ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆ,
ಮುಖ್ಯ ಪ್ರಾಣ ಬಂದ ಮನೆಗೆ ,
ಶ್ರೀರಾಮ ನಾಮ ಧ್ವನಿಗೆ |೨|
ಪುರಂದರವಿಠಲನ ನೆನೆದು ಪಾಡುತಲಿ,
ಆಲಿಂಗನ ಮಾಡುತಲಿ, ಆಲಿಂಗನ ಮಾಡುತಲಿ |
ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆ
ಮುಖ್ಯ ಪ್ರಾಣ ಬಂದ ಮನೆಗೆ ,
ಶ್ರೀರಾಮ ನಾಮ ಧ್ವನಿಗೆ |೩|
suMdara mUruti muKyaprANa,
baMda namma manege |
prANa baMda manege , SrIrAma nAma dhvanige
mukhya prANa baMda manege ,
SrIrAma nAma dhvanige |pa|
kaNakAlaMduge gejje JaNaJaNarenuta,
jaNaku jaNaku eMdu kuNikuNidADuta |
prANa baMda manege , SrIrAma nAma dhvanige,
mukhya prANa baMda manege ,
SrIrAma nAma dhvanige |1|
tuMburu nArada vINe bArisuta,
rAmanAma pADuta, rAmanAma pADuta |
prANa baMda manege , SrIrAma nAma dhvanige,
mukhya prANa baMda manege ,
SrIrAma nAma dhvanige |2|
puraMdaraviThalana nenedu pADutali,
AliMgana mADutali, AliMgana mADutali |
prANa baMda manege , SrIrAma nAma dhvanige
mukhya prANa baMda manege ,
SrIrAma nAma dhvanige |3|
Leave a Reply