ಶ್ರೀಗಜಾನನ ಸುಳಾದಿರೂಪ ಸ್ತೋತ್ರ
( ಅಭಿನವ ಪ್ರಾಣೇಶವಿಠಲ ದಾಸರ ರಚನೆ )
ರಾಗ : ರೇವತಿ
ಧ್ರುವತಾಳ
ಕರಿರಾಜ ಕಂಧರ ರಜತಾದ್ರಿ ಮಂದಿರ |
ಉರಗ ಕಟಿಬಂಧನ ಮೂಷಿಕಶ್ಯಂದನ |
ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |
ಕರ ಚತುಷ್ಟಯ ದಶನ ಮೋದಕ ಪಾಶಾಂಕುಶ |
ಧರ ಕುಂಕುಮಾಂಬರ ಲಂಬೋದರ |
ಶೂರ್ಪಕರ್ಣನೆ ಮಂಗಳಾಂಗ ಭಸ್ಮಾಂಗನೆ |
ಧರಿಪ ಭಂಜನ ಖಳ ಪೂರ್ವದೇವತೆಗಳ |
ಹರಿ ವಿಶ್ವ ಅಭಿನವ ಪ್ರಾಣೇಶವಿಠಲನ |
ಚರಣ ವಾರಿಜ ಭೃಂಗ ನತದಯಾಪಾಂಗ || ೧ ||
ಮಟ್ಟತಾಳ
ಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ |
ಚಾರುದೇಷ್ಣನೆಂಬ ನಾಮದಲವತರಿಸಿ |
ಗೌರಿವರನ ವರದಿ ಕೊಬ್ಬಿದ ರಕ್ಕಸರ |
ಕ್ರೂರಿಕರ್ಮಿಗಳನು ಶೌರಿಯಾಜ್ಞೆಯಿಂದ |
ಮಾರಿಗುಣಿಸಿ ಭೂಮಿ ಭಾರವನಿಳುಹಿದ |
ತಾರಕಾರಿ ಅನುಜ ನತಜನ ಸುರ ಭೂಜ |
ಮಾರಪಿತ ಅಭಿನವ ಪ್ರಾಣೇಶವಿಠಲನ |
ಭೂರಿ ಕರುಣಕೆ ಪಾತ್ರ ಶೌರಿ ಹರಿಪುತ್ರ || ೨ ||
ತ್ರಿಪುಟತಾಳ
ಮಾಧವನ ದಯದಿಂದ ಆದಿಪೂಜೆಗೆ ಅರ್ಹ |
ನಾದ ದೇವನು ನೀನು ಮೂರ್ಜಗದಿ |
ಆ ದೇವ ದನುಜ ಮನುಜರೆಲ್ಲರು ನಿನ್ನ |
ಆದಿಯಲ್ಲಿ ನಿನ್ನ ಪೂಜಿಪರು |
ಬಾದರಾಯಣ ಪೇಳ್ದ ಪುರಾಣಂಗಳ ಬರೆದು |
ಸಾಧು ಸಜ್ಜನರಿಗೆ ಮೋದವಿತ್ತೆ |
ಶ್ರೀಧವ ಅಭಿನವ ಪ್ರಾಣೇಶವಿಠಲನ |
ಪಾದ ಭಜನೆಯಿತ್ತು ಮೋದ ಕೊಡು ನಿತ್ಯ || ೩ ||
ಅಟ್ಟತಾಳ
ಶ್ರೀರಾಮಚಂದ್ರನು ಸೇತುಮುಖದಿ ನಿನ್ನ |
ಆರಾಧಿಸಿದನು ಸ್ಥಾಪಿಸಿ ಪೂಜಿಸಿ |
ಆ ರಾವಣಾನುಜ ವಿಭೀಷಣನರ್ಚಿಸೆ |
ಭೂರಿ ಲಂಕಾಪುರ ರಾಜ್ಯವ ಪಡೆದನು |
ಶೌರಿ ಆಜ್ಞದಿ ನಿನ್ನ ಪೂಜಿಸಿ ಧರ್ಮಜ |
ಭಾರತ ಯುದ್ಧದಿ ಜಯಶೀಲನಾದನು |
ಕೌರವೇಂದ್ರನು ನಿನ್ನ ಭಜಿಸದ ಕಾರಣ |
ಪಾರ ಬಂಧುಗಳೊಡನೆ ವಿಲಯವ ಪೊಂದಿದ |
ವಾರಿಧಿಸುತ ನಿನ್ನ ಅಪಹಾಸ್ಯ ಮಾಡಿದ |
ಕಾರಣ ಲೋಕದಿ ಕಳೆಹೀನನಾದನು |
ಆರನೇ ಮಾಸದಿ ಸಿತ ಚತುರ್ಥಿಯ ದಿನ |
ಹೇರಂಬನೇ ನಿನ್ನ ವರ್ಧಂತಿಯುತ್ಸವ |
ಮೂರು ಲೋಕದಿ ಜನಪಾರ ಹರುಷದಿಂದ |
ಆರಾಧಿಸಿ ನಿನ್ನ ಸೇವಿಸಿ ನಲಿವರು |
ಮಾರಮಣನ ದಯ ವೆಂತುಂಟೋ ನಿನ್ನಲ್ಲಿ |
ಪಾರುಗಾಣೆನು ನಿನ್ನ ಮಹಿಮೆಗೆ ನಮೋ ನಮೋ |
ವಾರಿಚೋದರ ತಾನೇ ತತ್ವೇಶರೊಡಗೂಡಿ |
ಸರುವ ಜೀವರೊಳಿದ್ದು ಕಾರ್ಯ ಮಾಡುವನೆಂಬ |
ಚಾರು ಸುಜ್ಞಾನವ ಕರುಣಿಸು ಪಾಲಿಸು |
ಬೇರೊಂದು ಬಯಸೇನು ಬಿಜ್ಜೋದರ ನಿನ್ನ |
ವಾರಿಜಾಕ್ಷಭಿನವ ಪ್ರಾಣೇಶವಿಠಲನ |
ಚಾರು ಚರಣಗಳಲ್ಲಿ ಮನವ ನಿಲ್ಲಿಸು ಜೀಯಾ || ೪ ||
ಆದಿತಾಳ
ಸಿದ್ಧಿವಿನಾಯಕ ವಿದ್ಯಪ್ರದಾಯಕ |
ಸದ್ಯೋಜಾತನ ಮುದ್ದು ಮೋಹದಸುತ |
ಬದ್ಧವಿಷಯದಿಹ ಬುದ್ಧಿಮನಗಳನು |
ತಿದ್ದಿ ಜ್ಞಾನ ಭಕುತಿಗಳಿತ್ತು ಹರಿಪದ |
ಪದ್ಮಯುಗದಿ ಸದಾ ಮಗ್ನವಾಗಿರಿಸಯ್ಯ |
ಬದ್ಧಾಂಜಲಿಯಾಗಿ ಪ್ರಾರ್ಥಿಪೆ ಗಗನೇಶಾ |
ಮಧ್ವಾಂತರ್ಗತ ಹರಿ ಗುಣ ಗಾಯನ |
ಪದ್ಯ ಸುಳಾದಿಗಳಿಂದ ಮಾಡಿ ಪಾಡುತ |
ಮಧ್ವಪನೊಲಿಸಿದ ದಧಿಶಿಲೆ ನಿಲಯನೆ |
ಮಧ್ವಪತಿ ಅಭಿನವ ಪ್ರಾಣೇಶವಿಠಲನ |
ಪದಪದ್ಮಗಳಲ್ಲಿ ದೃಢಭಕ್ತಿ ನೀಡು || ೫ ||
ಜತೆ
ಮೀನಾಂಕಜಿತನೆ ಸುಜ್ಞಾನ ಪಾಲಿಸು ಜೀಯಾ |
ಮಾನದಭಿನವ ಪ್ರಾಣೇಶವಿಠಲನ ಪ್ರೀಯಾ ||
SrIgajAnana suLAdirUpa stOtra
( aBinava prANESaviThala dAsara racane )
rAga : rEvati
dhruvatALa
karirAja kaMdhara rajatAdri maMdira |
uraga kaTibaMdhana mUShikaSyaMdana |
girirAja sute pArvati tanumRudBava |
kara catuShTaya daSana mOdaka pASAMkuSa |
dhara kuMkumAMbara laMbOdara |
SUrpakarNane maMgaLAMga BasmAMgane |
dharipa BaMjana KaLa pUrvadEvategaLa |
hari viSva aBinava prANESaviThalana |
caraNa vArija BRuMga natadayApAMga || 1 ||
maTTatALa
mUranE yugadalli rukmiNi dEviyali |
cArudEShNaneMba nAmadalavatarisi |
gaurivarana varadi kobbida rakkasara |
krUrikarmigaLanu SauriyAj~jeyiMda |
mAriguNisi BUmi BAravaniLuhida |
tArakAri anuja natajana sura BUja |
mArapita aBinava prANESaviThalana |
BUri karuNake pAtra Sauri hariputra || 2 ||
tripuTatALa
mAdhavana dayadiMda AdipUjege arha |
nAda dEvanu nInu mUrjagadi |
A dEva danuja manujarellaru ninna |
Adiyalli ninna pUjiparu |
bAdarAyaNa pELda purANaMgaLa baredu |
sAdhu sajjanarige mOdavitte |
SrIdhava aBinava prANESaviThalana |
pAda Bajaneyittu mOda koDu nitya || 3 ||
aTTatALa
SrIrAmacaMdranu sEtumuKadi ninna |
ArAdhisidanu sthApisi pUjisi |
A rAvaNAnuja viBIShaNanarcise |
BUri laMkApura rAjyava paDedanu |
Sauri Aj~jadi ninna pUjisi dharmaja |
BArata yuddhadi jayaSIlanAdanu |
kauravEMdranu ninna Bajisada kAraNa |
pAra baMdhugaLoDane vilayava poMdida |
vAridhisuta ninna apahAsya mADida |
kAraNa lOkadi kaLehInanAdanu |
AranE mAsadi sita caturthiya dina |
hEraMbanE ninna vardhaMtiyutsava |
mUru lOkadi janapAra haruShadiMda |
ArAdhisi ninna sEvisi nalivaru |
mAramaNana daya veMtuMTO ninnalli |
pArugANenu ninna mahimege namO namO |
vAricOdara tAnE tatvESaroDagUDi |
saruva jIvaroLiddu kArya mADuvaneMba |
cAru suj~jAnava karuNisu pAlisu |
bEroMdu bayasEnu bijjOdara ninna |
vArijAkShaBinava prANESaviThalana |
cAru caraNagaLalli manava nillisu jIyA || 4 ||
AditALa
siddhivinAyaka vidyapradAyaka |
sadyOjAtana muddu mOhadasuta |
baddhaviShayadiha buddhimanagaLanu |
tiddi j~jAna BakutigaLittu haripada |
padmayugadi sadA magnavAgirisayya |
baddhAMjaliyAgi prArthipe gaganESA |
madhvAMtargata hari guNa gAyana |
padya suLAdigaLiMda mADi pADuta |
madhvapanolisida dadhiSile nilayane |
madhvapati aBinava prANESaviThalana |
padapadmagaLalli dRuDhaBakti nIDu || 5 ||
jate
mInAMkajitane suj~jAna pAlisu jIyA |
mAnadaBinava prANESaviThalana prIyA ||
Leave a Reply