Composer : Shri Karpara Narahari dasaru
ಬೆಳಗಿರೆ ಆರತಿಯ ಶ್ರೀ ತುಳಸಿಗೆ ||ಪ||
ಬೆಳಗಿರೆ ಆರತಿ ತುಳಸಿದೇವಿಗೆ ನಿತ್ಯ
ಲಲನೆಯರೆಲ್ಲ ಮಂಗಳವೆಂದು ಪಾಡುತ ||ಅ.ಪ||
ಸುಧೆಯ ಕಲಶದೊಳು ಮಧುವೈರಿ ನಯನದ
ಮುದ ಜಲಬೀಳಲು ಉದುಭವಿಸಿದಳೆಂದು [೧]
ದರುಶನ ಮಾತ್ರದಿ ದುರಿತಗಳೋಡಿಸಿ
ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು [೨]
ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ
ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ [೩]
beLagire Aratiya SrI tuLasige ||pa||
beLagire Arati tuLasidEvige nitya
lalaneyarella maMgaLaveMdu pADuta ||a.pa||
sudheya kalaSadoLu madhuvairi nayanada
muda jalabILalu uduBavisidaLeMdu [1]
daruSana mAtradi duritagaLODisi
sthiravAda sauBAgya karuNisuvaLeMdu [2]
iLeyoLu kArpara nilaya SrInarahari
olumeya paDeda SrI tuLasidEvige bEga [3]
Leave a Reply