Composer : Shri Aja vittala
ನೋಡಿದೆ ಇಂದು ಗುರುರಾಜರಾ
ನಾಡಿನೊಳಗೆ ಪ್ರಖ್ಯಾತರಾದರ [ಪ]
ಪ್ರಹಲ್ಲಾದ ರಾಜರ ಅವತಾರ
ಅಹಲ್ಲಾದವನು ನೀಡುವರ
ಮೋಹಿನಿ ರೂಪವ ನೋಡಿದರ
ಮೋಹ ಭವಂಗಳ ನೀಗಿದರ [೧]
ಮಂಚಾಲೆಯಲಿ ನೆಲೆಸಿದರಾ
ಸಂಚಿತಾಗಮಗಳ ತಿಳಿದವರಾ
ವಂಚಿಸದೆ ಫಲ ನೀಡುವರಾ
ಪಂಚೇಂದ್ರಿಯಂಗಳ ಜೈಸಿದರಾ [೨]
ಸಿರಿ ಅಜವಿಠಲನ ಜಪಿಸಿದರ
ನರಹರಿ ರೂಪವ ನೋಡಿದರ
ಕರದಲಿ ಜಪಮಣಿ ಎಣಿಸುವರ
ಮರುಕದಿ ಶರಣರಿಗೊಲಿಯುವರ [೩]
nODide iMdu gururAjarA
nADinoLage praKyAtarAdara [pa]
prahallAda rAjara avatAra
ahallAdavanu nIDuvara
mOhini rUpava nODidara
mOha BavaMgaLa nIgidara [1]
maMcAleyali nelesidarA
saMcitAgamagaLa tiLidavarA
vaMcisade Pala nIDuvarA
paMcEMdriyaMgaLa jaisidarA [2]
siri ajaviThalana japisidara
narahari rUpava nODidara
karadali japamaNi eNisuvara
marukadi SaraNarigoliyuvara [3]
Leave a Reply