Composer : Shri Vijayadasaru
ಶಾರದೆಯೇ ಕರುಣಾ ವಾರಿಧಿಯೇ ||ಪ||
ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||ಅ.ಪ||
ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನ
ಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||೧||
ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆ
ಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||೨||
ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿ
ವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ ||೩||
SAradeyE karuNA vAridhiyE ||pa||
sArAMSa vacanakoTTu salahu ennanu tAye ||a.pa||
caMdra kiraNa pOlvaLe jagadaMbe nAnu ninna
kaMda ennamatige sAkAravAgiru eMbe ||1||
sarasIruhadaLa nEtre sAmajakke samayAtre
paramapAvana caritre nI gati jagake mitre ||2||
ajana paTTada rANi abuja pallava pANi
vijayaviThThalana sose mudduvANiye ||3||
Leave a Reply