Kande kande kandenamma

Composer : Shri Purandara dasaru

By Smt.Shubhalakshmi Rao

ಕಂಡೆ ಕಂಡೆ ಕಂಡೆ ನಮ್ಮ |
ಕಂಗಳ ಧೇನುವ ಕಂಡೆ || ಪ ||
ಮಂಗಳಮೂರುತಿ ಮನ್ನಾರ ಕೃಷ್ಣನ || ಅ.ಪ ||

ಉಟ್ಟ ಪೀತಾಂಬರ ತೊಟ್ಟ ವಜ್ರಾಂಗಿಯ |
ಪುಟ್ಟ ಪಾದದ ರತ್ನ ಮನ್ನಾರ ಕೃಷ್ಣನ || ೧ ||

ಒರಳನೆಳೆವನ ಬೆರಳ ಚೀಪುವನ |
ಧರೆಯೊಳು ಮೆರೆಯುವ ಮನ್ನಾರ ಕೃಷ್ಣನ || ೨ ||

ಕರದ ಕಂಕಣ ಬೆರಳ ಮುದ್ರಿಕೆ |
ತರಳ ಉಡುಪಿಯ ಮನ್ನಾರ ಕೃಷ್ಣನ || ೩ |

ಅಲವಬೋಧರಿಗೆ ಒಲಿದು ಬಂದ ಮಹ |
ಚೆಲುವ ಸ್ಮರನಪಿತ ಮನ್ನಾರ ಕೃಷ್ಣನ || ೪ ||

ಶೇಷಶಯನನ ಭಾಸುರರೂಪನ |
ಶ್ರೀಶ ಪುರಂದರವಿಠಲರಾಯನ || ೫ ||


kaMDe kaMDe kaMDe namma |
kaMgaLa dhEnuva kaMDe || pa ||
maMgaLamUruti mannAra kRuShNana || a.pa ||

uTTa pItAMbara toTTa vajrAMgiya |
puTTa pAdada ratna mannAra kRuShNana || 1 ||

oraLaneLevana beraLa cIpuvana |
dhareyoLu mereyuva mannAra kRuShNana || 2 ||

karada kaMkaNa beraLa mudrike |
taraLa uDupiya mannAra kRuShNana || 3 |

alavabOdharige olidu baMda maha |
celuva smaranapita mannAra kRuShNana || 4 ||

SEShaSayanana BAsurarUpana |
SrISa puraMdaraviThalarAyana || 5 ||

Leave a Reply

Your email address will not be published. Required fields are marked *

You might also like

error: Content is protected !!