Bit hyage iralin ee charana

Composer : Shri Amba bai

By Smt.Shubhalakshmi Rao

ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ [ಪ.]
ವಿಠ್ಠಲನಾ ಪುಟ್ಟ ಚರಣ
ಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತ
ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ [ಅ.ಪ.]

ಭಕ್ತರಿಗೊಲಿಯುವ ಚರಣಾ | ವೇದ
ಉಕ್ತಿಗೆ ನಿಲುಕದ ಚರಣಾ
ಹತ್ತಿ ಪಾರ್ಥನ ರಥ ಮತ್ತೆ
ಭೀಷ್ಮನಿಗೊಲಿದು ಹಸ್ತದಿ ಚಕ್ರವ
ಪಿಡಿದು ಬಂದಾ ಚರಣ (೧)

ಬಲಿಯನ್ನು ತುಳಿದಂಥ ಚರಣಾ | ಮೂರು
ಇಳೆಯನಳೆದ ಪುಟ್ಟ ಚರಣ
ಕುಲಕೋಟಿ ಉದ್ಧಾರಗೈವಂಥ ಗಂಗೆಯ
ಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ (೨)

ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿ
ವತ್ತುವೋ ಮೃದುತಳ ಚರಣಾ
ಚಿತ್ತದಿ ಚಿಂತಿಪ ಭಕ್ತರ ಮನದೈವ
ತೆತ್ತಿಗನಾಗಿ ಐವರ ಪೊರೆದಾ ಚರಣ (೩)

ಭೀಮ ತೀರಾ ವಾಸ ಚರಣಾ | ಭಕ್ತ
ರಾಮಯ ಹರಿಸುವ ಚರಣಾ
ಕಾಮಜನಕ ಪಾಂಡುರಂಗವಿಠ್ಠಲನೆಂದು
ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣಾ (೪)

ಬಿಟ್ಟಿರಲಾರೆ ನೀ ಚರಣ | ಮನದಿ
ಕಟ್ಟಿ ಹಾಕೂವೆ ನಾ ನೀ ಚರಣ
ದಿಟ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಚರಣ
ಇಟ್ಟು ಹೃತ್ಕಮಲದಿ ಪೂಜಿಪೆ ನೀ ಚರಣ (೫)


biT~hyAge iralinnI caraNa | raMga [pa.]
viThThalanA puTTa caraNa
biTTu gOkula puMDalIkanigoliyuta
iTTige mElhoMdi niMtaMtha caraNa [a.pa.]

Baktarigoliyuva caraNA | vEda
uktige nilukada caraNA
hatti pArthana ratha matte
BIShmanigolidu hastadi cakrava
piDidu baMdA caraNa (1)

baliyannu tuLidaMtha caraNA | mUru
iLeyanaLeda puTTa caraNa
kulakOTi uddhAragaivaMtha gaMgeya
caluva uMguTadalli paDeda kOmala caraNa (2)

hasti kareye baMda caraNA | lakShmi
vattuvO mRudutaLa caraNA
cittadi ciMtipa Baktara manadaiva
tettiganAgi aivara poredA caraNa (3)

BIma tIrA vAsa caraNA | Bakta
rAmaya harisuva caraNA
kAmajanaka pAMDuraMgaviThThalaneMdu
prEmadiM BajanegoMbuva svAmi caraNA (4)

biTTiralAre nI caraNa | manadi
kaTTi hAkUve nA nI caraNa
diTTa SrI gOpAlakRuShNaviThThala caraNa
iTTu hRutkamaladi pUjipe nI caraNa (5)

Leave a Reply

You might also like

error: Content is protected !!