Varadendra Prarthana Suladi – Abhinava Pranesha vittala

Composer : Shri Abhinava Pranesha vittala

By Smt.Nandini Sripad

ಶ್ರೀ ವರದೇಂದ್ರರ ಪ್ರಾರ್ಥನಾ ಸುಳಾದಿ ,
ಅಭಿನವ ಪ್ರಾಣೇಶವಿಠಲ ದಾಸರ ರಚನೆ , ರಾಗ: ಕಲ್ಯಾಣಿ

ಧ್ರುವತಾಳ
ವಂದಿಸುವೆನು ಭವ ಮಂದಧಿ ತಾರಕ
ಸಿಂಧು ಶಯನ ರಾಮಚಂದ್ರನಾರ್ಚಕ ವಸು –
ಧೇಂದ್ರರಾಯರ ಕರ ಮಂದಜೋದ್ಭವ ವರ –
ದೇಂದ್ರರಾಯನೆ ಯತಿ ಚಂದಿರನೆ
ಇಂದು ಪ್ರಾರ್ಥಿಪೆ ಕರ್ಮಂದಿಗಳರಸನೆ
ಕಂದರ್ಪಜಿತ ಶರ್ಮ ವೃಂದ ಸೇವ್ಯ
ಬೆಂದು ಭವದಿ ಬಹು ನೊಂದಿರುವೆನೋ ಸ್ವಾಮಿ
ಮುಂದಾರಿಗಾಣದೆ ಕುಂದಿರುವೆ
ಬಂದು ಬೇಗನೆ ದಯದಿಂದ ಪಿಡಿಯೋ ಕೈಯ
ತಂದೆ ಅಭಿನವ ಪ್ರಾಣೇಶವಿಠಲ ಪ್ರಿಯ || ೧ ||

ಮಟ್ಟತಾಳ
ಕೋಲಜಕೂಲದ ಆಲಯವಾಸರಿಂ –
ದೇಳನೆ ಯತಿ ಎನಿಸಿ ಕಾಲರಾಮರಾಜ್ಯ
ಪಾಲಿಸಿ ವಿಭವದಲಿ ಮೂಲರಾಮ ಚರಣ
ಊಳಿಗವನು ಗೈದ ಶೀಲ ಸುಗುಣಮಣಿಯೇ
ಕಾಲಭಿನವ ಪ್ರಾಣೇಶವಿಠಲ ಪಾದ
ಕೀಲಾಲಜ ಮಧುಪ ಲಾಲಿಸು ಬಿನ್ನಪ || ೨ ||

ತ್ರಿಪುಟತಾಳ

ಭೂತಳದೊಳು ಮಹಾಪಾತಕಿ ನಾನಯ್ಯ
ಘಾತಕನು ಇತ್ತ ಮಾತು ತಪ್ಪುವನಯ್ಯ
ಆತುಮ ಭವ ಶಿವರಾತ್ಯೆ ಶರದಿಂದ
ನೀತಿ ತೊರೆದು ವಂಶಖ್ಯಾತಿ ಮರೆದು
ಸೀತಾಂಶು ಮುಖಿಯರ ಪ್ರೀತಿ ಚಿಂತನೆಯಲ್ಲಿ
ಬಾತುಕೋಳಿಯ ತೆರ ತಿರುಗಿದೆನು ದೇವ
ಮಾತು ಮಾತಿಗೆ ಎನ್ನ ಪೊಗಳಿಕೆ ಪೇಳುತ
ಖ್ಯಾತಿ ಕಾಮುಕನಾಗಿ ಕಾರ್ಯ ಮಾಡುವೆನಯ್ಯಾ
ಈ ತೆರವಾಗಿದೆ ಎನ್ನಯ ಸ್ಥಿತಿಗತಿ
ಭೀತನಾಗಿರುವೆನು ಕರುಣಿಸಯ್ಯ
ಸೀತಾಧವಭಿನವ ಪ್ರಾಣೇಶವಿಠಲನ
ದೂತಾಗ್ರಣಿ ಎನ್ನ ಮಾತು ಲಾಲಿಸು ಜೀಯಾ || ೩ ||

ಅಟ್ಟತಾಳ
ಭರಿತ ಕ್ರೋಧದಿಂದ ಪರವಶನಾಗುತ
ಥರ ಥರ ನಡುಗುತ ಜರಿವೆನು ಸುಜನರ
ಪರಮ ವೈಷ್ಣವರ ಧರಣಿ ದೇವತೆಗಳ
ಹರಿದಾಸರ ನಿಂದ್ಯ ನಿರುತದಿಗೈಯುತ
ಖರನಂತೆ ಭುವಿಯೊಳು ಚರಿಸುತಿರುವೆನಯ್ಯ
ಉರುತರವಾದಂಥ ದುರಿತರಾಶಿಯು ಬಾಯ್
ತೆರೆದು ಬರುತಲಿದೆ ಉರಿಯ ನಾಲಿಗೆ ಚಾಚಿ
ಬರುತಲಿದೆ ನೋಡು ಕರಿಮೋರೆ ಕೆಂಜೆಡೆ
ಧರಿಸಿ ಬರುತಲಿದೆ ಭರದಿಂದ ಬರುತಿದೆ
ಪರಿಹಾರೋಪಾಯವನ್ನರಿಯದೆ ಬಳಲುವೆ
ವರಲುವೆ ಹಾಯೆಂದು ಚೀರುವೆ ಭೋರೆಂದು
ಪೊರೆವರನ್ಯರ ಕಾಣೆ ಕರಗಳ ಜೋಡಿಸಿ
ಶರಣು ಬಂದಿರುವೆನು ಗುರುರಾಜ ರಕ್ಷಿಸು
ಶರಣನ ಪಿಡಿಕೈಯ ವರದೇಂದ್ರ ಗುರುರಾಯ
ಮುರಗೇಡಿಯಭಿನವ ಪ್ರಾಣೇಶವಿಠಲನ
ಚರಣವಾರಿಜ ಭೃಂಗನತದಯಾಪಾಂಗಾ || ೪ ||

ಆದಿತಾಳ
ಆ ಮಹಾಮದದಿಂದ ಭ್ರಾಮಕ ತ್ರಯದಿಂದ
ಸೀಮೆ ಗಾಣದ ಲೋಭ ಮತ್ಸರದಂಭದಿಂದ
ತಾಮಸಿವರನಾದ ಪಾಮರ ನಾನಯ್ಯ
ಭಾಮಾ ಕಾಂಚನ ಮೇಣ್ ಭೂಮಿಯ ಚಿಂತನ
ಯಾಮ ದಿವಸ ಕಾಲ ಹೋಮವಾಯಿತು ಸ್ವಾಮಿ
ಭೀಮ ಪ್ರಿಯಭಿನವ ಪ್ರಾಣೇಶವಿಠಲನ
ನೇಮದಲರ್ಚಿಪ ಧೀಮಂತನತಿಶಾಂತನೇ || ೫ ||

ಜತೆ
ದುರಿತಗಳೋಡಿಸು ಹರಿಕಥಾಮೃತವುಣಿಸು
ದರಧರ ಅಭಿನವ ಪ್ರಾಣೇಶವಿಠಲನ ದೂತ ||


SrI varadEMdrara prArthanA suLAdi ,
aBinava prANESaviThala dAsara racane , rAga: kalyANi

dhruvatALa
vaMdisuvenu Bava maMdadhi tAraka
siMdhu Sayana rAmacaMdranArcaka vasu –
dhEMdrarAyara kara maMdajOdBava vara –
dEMdrarAyane yati caMdirane
iMdu prArthipe karmaMdigaLarasane
kaMdarpajita Sarma vRuMda sEvya
beMdu Bavadi bahu noMdiruvenO svAmi
muMdArigANade kuMdiruve
baMdu bEgane dayadiMda piDiyO kaiya
taMde aBinava prANESaviThala priya || 1 ||

maTTatALa
kOlajakUlada AlayavAsariM –
dELane yati enisi kAlarAmarAjya
pAlisi viBavadali mUlarAma caraNa
ULigavanu gaida SIla suguNamaNiyE
kAlaBinava prANESaviThala pAda
kIlAlaja madhupa lAlisu binnapa || 2 ||

tripuTatALa

BUtaLadoLu mahApAtaki nAnayya
GAtakanu itta mAtu tappuvanayya
Atuma Bava SivarAtye SaradiMda
nIti toredu vaMSaKyAti maredu
sItAMSu muKiyara prIti ciMtaneyalli
bAtukOLiya tera tirugidenu dEva
mAtu mAtige enna pogaLike pELuta
KyAti kAmukanAgi kArya mADuvenayyA
I teravAgide ennaya sthitigati
BItanAgiruvenu karuNisayya
sItAdhavaBinava prANESaviThalana
dUtAgraNi enna mAtu lAlisu jIyA || 3 ||

aTTatALa
Barita krOdhadiMda paravaSanAguta
thara thara naDuguta jarivenu sujanara
parama vaiShNavara dharaNi dEvategaLa
haridAsara niMdya nirutadigaiyuta
KaranaMte BuviyoLu carisutiruvenayya
urutaravAdaMtha duritarASiyu bAy
teredu barutalide uriya nAlige cAci
barutalide nODu karimOre keMjeDe
dharisi barutalide BaradiMda barutide
parihArOpAyavannariyade baLaluve
varaluve hAyeMdu cIruve BOreMdu
porevaranyara kANe karagaLa jODisi
SaraNu baMdiruvenu gururAja rakShisu
SaraNana piDikaiya varadEMdra gururAya
muragEDiyaBinava prANESaviThalana
caraNavArija BRuMganatadayApAMgA || 4 ||

AditALa
A mahAmadadiMda BrAmaka trayadiMda
sIme gANada lOBa matsaradaMBadiMda
tAmasivaranAda pAmara nAnayya
BAmA kAMcana mEN BUmiya ciMtana
yAma divasa kAla hOmavAyitu svAmi
BIma priyaBinava prANESaviThalana
nEmadalarcipa dhImaMtanatiSAMtanE || 5 ||

jate
duritagaLODisu harikathAmRutavuNisu
daradhara aBinava prANESaviThalana dUta ||

Leave a Reply

Your email address will not be published. Required fields are marked *

You might also like

error: Content is protected !!