” ಭೀಮಸೇನನೆ ಪೂರ್ಣಕಾಮನೆ ಸುರಸಾರ್ವಭೌಮನೆ ” ,
ಶ್ರೀ ಭೀಮಾವತಾರ ಸುಳಾದಿ ,
ಶ್ರೀ ವಿಜಯದಾಸರ ರಚನೆ , ರಾಗ: ನಾಟ
ಧ್ರುವತಾಳ
ಭೀಮಸೇನನೆ ಪೂರ್ಣಕಾಮನೆ ಸುರಸಾರ್ವ –
ಭೌಮನೆ ಸತತ ಭೂಮಿಭಾರವ ಹರಣಾ
ಸೀಮಾರಹಿತ ಗುಣ ಮಹೋದಧಿಯೇ ನಿ –
ಷ್ಕಾಮ ಫಲವನೀವ ಭಾವಿ ಬೊಮ್ಮ
ಭೀಮಾವತಾರ ಸ್ಮೇರಾನನ
ರಾಮ ರಾಜೇಶ್ವರ ರಣರಂಗ ಧೀರ
ಕೋಮಲ ಕಾಯ ಮೂಲಾವತಾರ ಭಿನ್ನ
ಸೋಮ ಕುಲೋದುಭವ ಪಾಂಡು ಕುವರ
ರೋಮ ರೋಮಾನಂತ ಸಿಂಹ ಸತ್ವಧಿಕ ಉ –
ತ್ತಮಾಂಗ ಮರುತ ಮರಕತ ಮಕುಟಧರಾ
ಕಾಮಿನಿಗೆ ಸೌಗಂಧಿಕ ಕುಸುಮವನಿತ್ತ
ಸಾಮ ವಿಖ್ಯಾತರಿಪು ಸಾಮಜ ಬಲವ –
ಯೋಮಕ್ಕೆ ತೆಗಿದಿಟ್ಟ ಎಲ್ಲರೊಳಗೆ ಧಿಟ್ಟ
ಶ್ರೀ ಮರುತನ ದ್ವಾಪರದ ಚರಿತ
ತಾಮಸ ಖಳರ ಗದೆಯಿಂದಪ್ಪಳಿಸಿ
ತಾಮಸ ಲೋಕಕ್ಕೆ ಕೆಡಹುವ ವೀರ್ಯಾ
ಕುಮತಿ ಕೀಚಕ ಕಿರ್ಮೀರ ಬಕ ಹಿಡಿಂ –
ಬ ಮಣಿಯ ಮಾಗಧ ವೈರಿ
ಮಾಮನೋವಲ್ಲಭ ವಿಜಯವಿಠ್ಠಲ ಕೃಷ್ಣನ
ನಾಮವನೆನಿಪ ಪೂರ್ಣಾನಂದ ಮಹಿಮಾ ॥ 1 ॥
ಮಟ್ಟತಾಳ
ಗುರುವೆ ಮೂಲ ಗುರುವೆ, ಗುರುವೆ ಪರಮ ಗುರುವೆ
ಗುರುವೆ ಜಗದ್ಗುರುವೆ, ಗುರು ವಿಶ್ವ ಗುರುವೆ
ಗುರುವೆ ನಿತ್ಯ ಗುರುವೆ ಗುರುವೆ ಲಕ್ಷಣ ಗುರುವೆ
ಗುರುವೆ ಶಾಂತ ಗುರುವೆ ಗುರುವೆ ಎನ್ನ ಗುರುವೆ
ಗುರುಗಳಿಗೆ ಗುರುವೆ ಗುರುರಾಜವರ್ಯಾ
ಗುರುಕುಲೋತ್ತಂಗ ಗುರುಶಿರೋಮಣಿ
ಗುರುದಾತ ನಮ್ಮ ವಿಜಯವಿಠ್ಠಲನ್ನ
ಗುರುಲಘು ಮೂರ್ತಿಯ ಗುರು ಎಣಿಪ ಗುರುವೇ ॥ 2 ॥
ತ್ರಿವಿಡಿತಾಳ
ವಿಷದ ಲಡ್ಡಿಗಿ ಸವಿದು ದಕ್ಕಿಸಿಕೊಂಡ ಮಹಬಲ ಎನ್ನ
ವಶವೇ ಪೊಗಳಲು ನಿನ್ನ ಅಸಮಶೌರ್ಯ
ವಸುಧಿಯೊಳಗೆ ನಿನ್ನ ಪೆಸರೇ ಅನ್ಯರಿಗೆ ಕ –
ರ್ಕಶವಾಗಿದೆ ನೋಡ ಅಸಂಗ ದೈವಾ
ಕುಶಲ ಮತಿಯಲಿ ಅರ್ಚಿಸಿದ ಜನಕೆ ಪೀ –
ಯುಷ ಪಾನವಧಿಕ ಸಂತಸವಾಗೋದು
ಬೆಸಸ ಬಲ್ಲೆನೆ ರಕ್ಕಸರೆದೆ ಶೂಲನೇ
ಹಸನಾಗಿ ಎನ್ನ ಪಾಲಿಪ ಬೇಕೋ ಜೀವೇಶ
ಅಸುರಧ್ವಂಸಿ ನಮ್ಮ ವಿಜಯವಿಠಲನಂಘ್ರಿ
ಎಸಳು ಬಿಡದೆ ನೆನೆಯುವ ವೃಕೋದರಾ ॥ 3 ॥
ಅಟ್ಟತಾಳ
ರೋಷದಿಂದಲಿ ದುಃಶ್ಶಾಸನ್ನ ಸಂಗಡ
ನೀ ಸಮರದಿ ವೀರ ವೇಷವ ಧರಿಸಿ ದು –
ರ್ದೋಷ ಗುಣ ಕುಲನಾಶಿಕ ಕರ್ಮಿಯಾ
ಬೀಸಿ ಗದೆಯಿಂದ ಲೇಸಾಗಿ ಹೊಡೆದಪ್ಪ –
ಳೀಸಿ ನೆಲಕೆ ಬೀಳಲೀಸಿದ ಈಗವನ ಭಂ –
ಗಿಸಿ ಮುಂದುರವಣಿಸಿ ಅಂದಿನ ಮಾತೆ –
ಣಿಸಿ ಕೋಪಗಡಿ ಸಂತೋಷದ ಕೇಳಿಕೆ
ಈ ಸಮಸ್ತರು ಒಪ್ಪಿಸಿ ಕೊಟ್ಟರು ನಿನ್ನ
ಬೀಸರಕ್ಕೆ ಒಬ್ಬ ಆಶೆಯಾಗುವನಲ್ಲ
ದೇಶವೆಲ್ಲಿದೊ ರಾಣಿವಾಸವೆಲ್ಲಿದೊ ಬಹು
ಕೋಶವೆಲ್ಲಿದೊ ವಾದ್ಯಘೋಷವೆಲ್ಲಿದೊ ಇಂದು
ದ್ವೇಷಿಗ ಮಾರಿಗೆ ಗ್ರಾಸವಾಗು ಪೋಗು
ಈ ಸಮಯದಲ್ಲಿ ಬಿಡಿಸುವರಾರೆಂತೊ
ವಾಸುದೇವ ಕೃಷ್ಣ ವಿಜಯವಿಠ್ಠಲನಂಘ್ರಿ
ದಾಸನು ಅವನ ಆಭಾಸ ಮಾಡುತಲಿಪ್ಪ ॥ 4 ॥
ಆದಿತಾಳ
ಪದತಳದಿಂದ ಒರೆಸಿ ಕದನದಲ್ಲಿ ವೈರಿಯ
ಬದಿ ಬಗಲನು ತಿವಿದು ವದನದೊಳಗೆ ಉಗಳಿ
ರದನವ ಮುರಿದು ಕುಟ್ಟಿ ಮ್ಯಾಲೊದದು ಅಟ್ಟಹಾಸದಲಿ
ಎದಿಯ ಮೇಲೆ ಕುಣಿದು ಉದರವನ್ನೇ ಬಗೆದು
ಮಿದಡು ಕರಳು ತೆಗೆದು ಭೂಮಿಗೆ ಈಡಾ –
ಡಿದನು ಅರ್ಥಿಯಲ್ಲಿ ಸುದತೆ ನೋಡುತಿರೆ
ಅದುಭುತ ಚರಿತ ಅವನ ರುಧಿರವ ಪಿಡಿದು ಸು –
ರಿದ ಸರ್ವರು ನೋಡಲು ಸದಮಲ ದೇವಿಯ
ಹೃದಯ ತಾಪವೆ ಕಳೆದು ಪದೋಪದಿಗಾನಂದ
ಉದಧಿಯೊಳಗೆ ಸೂಸೆ ಎದಿರಾರೀತಗೆ
ತ್ರಿದಶರೊಳಗೆ ಇಲ್ಲ ಕದನ ಮಧ್ಯದಲ್ಲಿ ಮೌ –
ನದಲ್ಲಿ ಎಲ್ಲರೂ ಇರೆ ಹೃದಯನಿರ್ಮಳ
ನಮ್ಮ ವಿಜಯವಿಠ್ಠಲ ಗರ್ಪಿ –
ಸಿದ ತನ್ನ ಸಹಸದ ಮುದದಿಂದ ನಲಿಯುತಾ ॥ 5 ॥
ಜತೆ
ಅರಿ ಭಯಂಕರ ಭೀಮ ವಿಜಯವಿಠ್ಠಲ
ನರಹರಿ ಮನಮೆಚ್ಚಿ ನಡೆದಾ ಭೀಮಾವತಾರಾ ॥
SrI BImAvatAra suLAdi ,
SrI vijayadAsara racane , rAga: nATa
dhruvatALa
BImasEnane pUrNakAmane surasArva –
Baumane satata BUmiBArava haraNA
sImArahita guNa mahOdadhiyE ni –
ShkAma PalavanIva BAvi bomma
BImAvatAra smErAnana
rAma rAjESvara raNaraMga dhIra
kOmala kAya mUlAvatAra Binna
sOma kulOduBava pAMDu kuvara
rOma rOmAnaMta siMha satvadhika u –
ttamAMga maruta marakata makuTadharA
kAminige saugaMdhika kusumavanitta
sAma viKyAtaripu sAmaja balava –
yOmakke tegidiTTa ellaroLage dhiTTa
SrI marutana dvAparada carita
tAmasa KaLara gadeyiMdappaLisi
tAmasa lOkakke keDahuva vIryA
kumati kIcaka kirmIra baka hiDiM –
ba maNiya mAgadha vairi
mAmanOvallaBa vijayaviThThala kRuShNana
nAmavanenipa pUrNAnaMda mahimA || 1 ||
maTTatALa
guruve mUla guruve, guruve parama guruve
guruve jagadguruve, guru viSva guruve
guruve nitya guruve guruve lakShaNa guruve
guruve SAMta guruve guruve enna guruve
gurugaLige guruve gururAjavaryA
gurukulOttaMga guruSirOmaNi
gurudAta namma vijayaviThThalanna
gurulaGu mUrtiya guru eNipa guruvE || 2 ||
triviDitALa
viShada laDDigi savidu dakkisikoMDa mahabala enna
vaSavE pogaLalu ninna asamaSaurya
vasudhiyoLage ninna pesarE anyarige ka –
rkaSavAgide nODa asaMga daivA
kuSala matiyali arcisida janake pI –
yuSha pAnavadhika saMtasavAgOdu
besasa ballene rakkasarede SUlanE
hasanAgi enna pAlipa bEkO jIvESa
asuradhvaMsi namma vijayaviThalanaMGri
esaLu biDade neneyuva vRukOdarA || 3 ||
aTTatALa
rOShadiMdali duHSSAsanna saMgaDa
nI samaradi vIra vEShava dharisi du –
rdOSha guNa kulanASika karmiyA
bIsi gadeyiMda lEsAgi hoDedappa –
LIsi nelake bILalIsida Igavana BaM –
gisi muMduravaNisi aMdina mAte –
Nisi kOpagaDi saMtOShada kELike
I samastaru oppisi koTTaru ninna
bIsarakke obba ASeyAguvanalla
dESavellido rANivAsavellido bahu
kOSavellido vAdyaGOShavellido iMdu
dvEShiga mArige grAsavAgu pOgu
I samayadalli biDisuvarAreMto
vAsudEva kRuShNa vijayaviThThalanaMGri
dAsanu avana ABAsa mADutalippa || 4 ||
AditALa
padataLadiMda oresi kadanadalli vairiya
badi bagalanu tividu vadanadoLage ugaLi
radanava muridu kuTTi myAlodadu aTTahAsadali
ediya mEle kuNidu udaravannE bagedu
midaDu karaLu tegedu BUmige IDA –
Didanu arthiyalli sudate nODutire
aduButa carita avana rudhirava piDidu su –
rida sarvaru nODalu sadamala dEviya
hRudaya tApave kaLedu padOpadigAnaMda
udadhiyoLage sUse edirArItage
tridaSaroLage illa kadana madhyadalli mau –
nadalli ellarU ire hRudayanirmaLa
namma vijayaviThThala garpi –
sida tanna sahasada mudadiMda naliyutA || 5 ||
jate
ari BayaMkara BIma vijayaviThThala
narahari manamecci naDedA BImAvatArA ||
Leave a Reply