Composer : Shri Venkatesha vittala
ಭಾರತೀರಮಣ ಸುರವಿನುತ ಚರಣ
ಭಾರತೀರಮಣ ಸುಜನಕುಲ ಕರುಣ ||ಪ||
ನೀರಜಭವಾಂಡದಿ ಸಮೀರ ನಿನ್ನ ಸರಿಯಾದ
ವರಗಾಣೆನೋ ದೇವ ಬಾರಿಬಾರಿಗೆ
ಆರಾಧಿಪ ಬುಧ ಪರಿವಾರ ಸೇವ್ಯನು
ಪಾರುಗಾಣಿಸಯ್ಯ ಭೋಗಪುರದೊಳಗಿರುತಿಪ್ಪ [೧]
ಎಂದಿನಾ ಸುಕೃತವೊ ಕಣ್ಣಿಗೆಂದಿಗೂ ನಿಮ್ಮ
ಪಾದಾರ ವಿಂದ ನೋಡಿದೆ ಜ್ಞಾನಾನಂದ ಚರಿತ
ಮುಂದಾದರಿನ್ನು ಶ್ರೀಮದಾನಂದತೀರ್ಥರ ಮನ
ಪೊಂದಿಸ ಬೇಕೆಂದು ನಿನಗೊಂದಿಸಿ ಬೇಡುವೆನಯ್ಯ [೨]
ದೇಶದೇಶದಿಂದ ಬಂದ ಭೂಸುರತತಿಗೆ
ಮನ ದಾಸೆಯ ಪೂರೈಪೆನೆಂಬೋ ಸೂಸಿನಿಂದಲಿ
ಈ ಸಮಯದಿ ಬಂದು ಪ್ರಾಣೇಶ ನೀ ಪೋಷಿಸಯ್ಯ
ವಾಸವಾದಿವಂದ್ಯ ವೆಂಕಟೇಶವಿಠಲನ ದಾಸ [೩]
BAratIramaNa suravinuta caraNa
BAratIramaNa sujanakula karuNa ||pa||
nIrajaBavAMDadi samIra ninna sariyAda
varagANenO dEva bAribArige
ArAdhipa budha parivAra sEvyanu
pArugANisayya BOgapuradoLagirutippa [1]
eMdinA sukRutavo kaNNigeMdigU nimma
pAdAra viMda nODide j~jAnAnaMda carita
muMdAdarinnu SrImadAnaMdatIrthara mana
poMdisa bEkeMdu ninagoMdisi bEDuvenayya [2]
dESadESadiMda baMda BUsuratatige
mana dAseya pUraipeneMbO sUsiniMdali
I samayadi baMdu prANESa nI pOShisayya
vAsavAdivaMdya veMkaTESaviThalana dAsa [3]
Leave a Reply