Composer : Shri Vidyaprasanna Tirtharu
ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವ
ನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ||
ಜೀವನ ಚರಿತೆಯ ಕೇಳಿ ಮಹಾತ್ಮರ
ಜೀವನ ಮಾದರಿ ಎಮಗಿರಲಿ
ಜೀವನದಲಿ ಬೇಸರ ಪಡ ಬೇಡಿರಿ
ಜೀವೊತ್ತಮರೆ ರಕ್ಷಿಸಲಿ ||೧||
ಎಮ್ಮ ಮತಕೆ ಸಮ ಮತವಿಲ್ಲವು,
ಪರಬೊಮ್ಮನ ಸಮ ದೇವತೆ ಇಲ್ಲ
ಎಮ್ಮ ನುಡಿಗೆ ಸಮ ಹಿತ ನುಡಿ ಇಲ್ಲವು
ಹಮ್ಮಿನಲಿ ಪರಿ ಬೋಧಿಸುವ ||೨||
ನಿನ್ನಯ ವಿಷಯವ ವರ್ಣಿಪುದೆಲ್ಲ
ಪ್ರಸನ್ನ ಹೃದಯದಲಿ ಧೈರ್ಯದಲಿ
ಇನ್ನು ವೀರ ವೈಷ್ಣವನಾಗುವೆ
ಎನ್ನುವ ವಚನ ಕುಸುಮವೆರಚಿ ||೩||
AnaMda tIrthara ArAdhane idu AnaMda pUrita mahOtsava
nAviMdu nirmala mAnasadiMda gOviMda bhakutara pUjisuva ||pa||
jIvana cariteya kELi mahAtmara
jIvana mAdari emagirali
jIvanadali bEsara paDa bEDiri
jIvottamare rakShisali ||1||
emma matake sama matavillavu,
parabommana sama dEvate illa
emma nuDige sama hita nuDi illavu
hamminali pari bOdhisuva ||2||
ninnaya viShayava varNipudella
prasanna hRudayadali dhairyadali
innu vIra vaiShNavanAguve
ennuva vacana kusumaveraci ||3||
Leave a Reply