Composer : Shri Harapanahalli Bheemavva
ಭೂಮ ಇಡು ಬಾರೆ ದೃಪದ ರಾಯನರಸಿ
ಭೀಮ ಧರ್ಮಾರ್ಜುನ ನಕುಲ ಸಹದೇವ
ದ್ರೌಪದಿ ಕುಳಿತ ಎಲೇಗೆ ||ಪ||
ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ
ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು ||೧||
ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ
ಬಟ್ಟಲೋಳ್ ತುಂಬಿಟ್ಟು ಪರಡಿ ಪಾಯಸ ಘೃತ ಸಕ್ಕರೆಯು ||೨||
ಕುಂದಣದ್ ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು
ಬಂದು ಭೀಮೇಶ ಕೃಷ್ಣನ ಸಖರ್ ಹೊಂದಿ ಕುಳಿತರು ಕೃಷ್ಣೆ ಸಹಿತ ||೩||
bhUma iDu bAre dRupada rAyanarasi
bhIma dharmArjuna nakula sahadEva
draupadi kuLita elEge ||pa||
maMDige guLLOrigeyu buMdya cakkuli karjikAyi
ceMdada shAlyAnna shAvige phENigaLu eNNOrigeyu ||1||
happaLa saMDigeyu shAvige baTTavimAlatiyu gauli
baTTalOL tuMbiTTu paraDi pAyasa ghRuta sakkareyu ||2||
kuMdaNad harivANa piDidu kusumamallige muDidu naDedu
baMdu bheemEsha kRuShNana sakhar hoMdi kuLitaru kRuShNe sahita ||3||
Leave a Reply