Composer : Shri Kanakadasaru
ಪರಮ ಪದವೀವ ನಮ್ಮ ಮುಖ್ಯಪ್ರಾಣ |
ಧರೆಯೊಳಗುಳ್ಳ ದಾಸರು ಭಜಿಸಿರಣ್ಣಾ || ಪ ||
ಅಂದು ತ್ರೇತಾಯುಗದಿ ಹನುಮಂತನಾಗವತರಿಸಿ |
ಬಂದು ದಾಶರಥಿಯ ಪಾದಕ್ಕೆರಗಿ |
ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವ |
ವೃಂದಪುರ ದಹಿಸಿ ಚೂಡಾಮಣಿಯ ತಂದವನು || ೧ ||
ದ್ವಾಪರ ಯುಗದಲಿ ಭೀಮಸೇನನಾಗಿ |
ಶ್ರೀಪತಿಯಲಿ ಕಡು ಭಕುತಿಯಿಂದಾ |
ಕೋಪಾವೇಶವತಾಳಿ ದುಃಶಾಸನನು ಸೀಳಿ |
ಭೂಪರ ರಣದೊಳಗ ಕರಕರದು ಜರಿವವನು || ೨ ||
ಕಲಿಯುಗದೊಳು ತುರ್ಯಾಶ್ರಮವನೆ ಧರಿಸಿ |
ಕಲುಷ ಮಾಯವಾದ ಮಾಯಿಗಳ ಸೋಲಿಸಿ |
ಶೀಲವಾದ ಮಧ್ವ ಮತವಾ ನೀ –
ಗಣನೆಗೆ ತಂದುಕೊಂಡು | ಕಾಗಿ |
ನೆಲೆಯಾದಿ ಕೇಶವನ ಪರದೈವವೆನಿಸುವನು || ೩ ||
parama padavIva namma muKyaprANa |
dhareyoLaguLLa dAsaru BajisiraNNA || pa ||
aMdu trEtAyugadi hanumaMtanAgavatarisi |
baMdu dASarathiya pAdakkeragi |
siMdhuvanu dATi mudrikeyittu dAnava |
vRuMdapura dahisi cUDAmaNiya taMdavanu || 1 ||
dvApara yugadali BImasEnanAgi |
SrIpatiyali kaDu BakutiyiMdA |
kOpAvESavatALi duHSAsananu sILi |
BUpara raNadoLaga karakaradu jarivavanu || 2 ||
kaliyugadoLu turyASramavane dharisi |
kaluSha mAyavAda mAyigaLa sOlisi |
SIlavAda madhva matavA nI –
gaNanege taMdukoMDu | kAgi |
neleyAdi kESavana paradaivavenisuvanu || 3 ||
Leave a Reply