Composer : Shri Vijayadasaru
ರಾಗ: ಸಾವೇರಿ , ಆದಿತಾಳ
ಸಾಗಿಬಾರಯ್ಯ ಭವ|ರೋಗದ ವೈದ್ಯನೆ |
ಬಾಗುವೆ ನಿನಗೆ ಚೆನ್ನಾಗಿ ತುತಿಸಿ ಇಂದು || ಪ ||
ಭಾಗೀರಥೀಪಿತ ಭಾಗವತರ ಸಂ – |
ಯೋಗ ರಂಗ ಉರಗಗಿರಿ ವೇಂಕಟಾ || ಅ.ಪ ||
ರಥದ ಮಧ್ಯದಲಿಪ್ಪನೆ | ರಥಾಂಡಜವಾಹನ |
ರಥಾಂಗಪಾಣಿಯೆ ದಶ|ರಥನೃಪತಿಪಾಲಿ ಪಾ – |
ರಥಗೆ ವಲಿದವನ | ರಥವ ನಡೆಸಿ ಅತಿ -|
ರಥಮಹಾರಥರ ವಿ|ರಥರ ಮಾಡಿ ಗೆಲಿಸಿದೆ ||
ಪ್ರಥಮ ದೈವವೆ ಮ|ನ್ಮಥಪಿತ ದೈತ್ಯರ -|
ಮಥನ ಭಕ್ತರ ಮನೋ|ರಥವೆ ಸತತ ತಾರಾ – |
ಪಥ ಮಣಿವರ್ಣನೆ | ಕಥಾಶ್ರವಣದಲಿ ಸು – |
ಪಥವ ತೋರಿಸುತಿಪ್ಪ | ಪ್ರಥಮಾಂಗನೊಡಿಯಾ || ೧ ||
ನಿಲ್ಲದೆ ಬರುವುದು | ಪುಲ್ಲಲೋಚನ ಸಿರಿ – |
ವಲ್ಲಭ ಸರ್ವರಿಗೆ | ಬಲ್ಲಿದನೆ ಅಪ್ರತಿ – |
ಮಲ್ಲ ಮುರವಿರೋಧಿ | ಮೆಲ್ಲಮೆಲ್ಲನೆ ಪಾದ -|
ಪಲ್ಲವ ತೋರಿಸುತ್ತ | ಸುಲ್ಲಲಿತವಾಗಿ ||
ಎಲ್ಲಕಾಲದಿ ನಮ್ಮ|ನೆಲ್ಲ ವುದ್ಧರಿಪದು |
ಎಲ್ಲಿ ನಿನಗೆ ಸರಿ|ಯಿಲ್ಲವೊ ನೋಡಲು |
ಸಲ್ಲುವುದೋ ಬಿರು|ದಲ್ಲಿಗಲ್ಲಿಗೆ ಗುಣ |
ಬಲ್ಲವರಾರಿನ್ನು| ಕಲ್ಲಕೊನೆಯಲ್ಲಿಪ್ಪ || ೨ ||
ಬೊಮ್ಮ ಮೊದಲು ಮನುಜೋ|ತ್ತಮ್ಮರು ಕಡೆಯಾಗಿ |
ನಿಮ್ಮ ದಾಸರು ಅವರ | ಸಮ್ಮಂಧಿಗಳ ಪಾದ – |
ನಮ್ಮಿಕೊಂಡಿಪ್ಪ ಅ|ಧಮ್ಮನಾ ಸರ್ವೋ- |
ತ್ತುಮ್ಮನೆ ಅನೇಕ ಮ|ಹಿಮ್ಮ ಸರ್ವಭೂಷಿತ ||
ರಮ್ಮೆ ಧರಣಿದೇವಿ | ಇಮ್ಮಹಿಷೇರ ಗೂಡಿ |
ಸಮ್ಮೊಗವಾಗುತ | ಘಮ್ಮನೆ ಬಾ ಬಾ |
ಹಿಮ್ಮೆಟ್ಟದೆ ಸಿರಿ | ವಿಜಯವಿಟ್ಠಲ ಅನು – |
ಪಮ್ಮ ಚರಿತ ಪರ|ಬೊಮ್ಮ ತಿರುಮಲೇಶ || ೩ ||
ಈ ಕೃತಿಯನ್ನು ರಚಿಸಿದ ಸಂದರ್ಭ :
ವಿಳಂಬಿ ಸಂವತ್ಸರದ ಆಶ್ವಯುಜಮಾಸ , ತಿರುಪತಿಯಲ್ಲಿ ಶ್ರೀಶ್ರೀನಿವಾಸನ ಬ್ರಹ್ಮೋತ್ಸವದ ವಿಜಯದಶಮಿಯ ದಿನ. ಅಂದು ಶ್ರೀಶ್ರೀನಿವಾಸನ ಉತ್ಸವಪ್ರತಿಮೆಯನ್ನು ಮುಹೂರ್ತಕ್ಕೆ ಸರಿಯಾಗಿ ರಥಕ್ಕೆ ವಾದ್ಯವೈಭವದೊಡನೆ ಕರೆತಂದಿದ್ದಾರೆ. ಮಹಂತರು ರಥವನ್ನೆಳೆಯುವ ಮುಹೂರ್ತ ನಿರೀಕ್ಷಣೆ ಮಾಡುತ್ತಲಿದ್ದು , ಕಾಲಕ್ಕೆ ಸರಿಯಾಗಿ ರಥವನ್ನೆಳೆಯಲು ಭಕ್ತವೃಂದಕ್ಕೆ ಸೂಚಿಸಿದರು. ಗೋವಿಂದಾ ಗೋವಿಂದಾ!! ಎನ್ನುವ ಧ್ವನಿಯು ಭೊರ್ಗರೆಯುತ್ತಿದ್ದು , ಶ್ರೀಶ್ರೀನಿವಾಸನಿಗೆ ಮಂಗಳಾರತಿ ಮಾಡಿದ ನಂತರ ರಥವನ್ನು ಎಳೆಯಲು ಪ್ರಾರಂಭಿಸಿದರು. ಆದರೆ , ರಥ ಒಂದು ಅಂಗುಲವೂ ಜರುಗಲಿಲ್ಲ ! ಮಹಂತರು ಕಾರಣ ತಿಳಿಯದೆ , ಶ್ರೀನಾಥನನ್ನು ಪ್ರಾರ್ಥಿಸಿದರು. ಯಾರಾದರೂ ಭಕ್ತರು ಹರಕೆ ಹೊತ್ತಿದ್ದು , ಹರಕೆ ಸಲ್ಲಿಸಲು ಮರೆತಿದ್ದರೆ , ಅಪರಾಧ ಕಾಣಿಕೆಯೊಡನೆ ಹರಕೆ ಸಲ್ಲಿಸಿರಿ ಎಂದು ಭಕ್ತರಲ್ಲಿ ವಿಜ್ಞಾಪಿಸಿದರು. ಆ ಹೊತ್ತಿಗೆ ಸರಿಯಾಗಿ , ಬಾಲಕನೊಬ್ಬನ ಮೇಲೆ ಆವೇಶ ಬಂದದ್ದು ಕಂಡಿತು – ’ ಗುಡಿಯ ಒಳಗೆ ಇರುವ ಭಕ್ತನೊಬ್ಬನು ತನ್ನ ಹೃದಯಕಮಲಕರ್ಣಿಕೆಯಲ್ಲಿ ಕಟ್ಟಿಹಾಕಿದ್ದಾನೆ! ಅವನು ನನ್ನನ್ನು ಬಿಟ್ಟುಕೊಟ್ಟರೆ ನಾನಿಲ್ಲಿ ಬರುವುದು , ರಥ ಮುಂದೆ ಸಾಗುವುದು ’ ಎಂದು ಬಾಲಕನು ಕೂಗಲಾರಂಭಿಸಿದನು. ಮಹಂತರಿಗೆ ಆಶ್ಚರ್ಯವಾಗಿ , ದೇವಸ್ಥಾನದ ಬೀಗಮುದ್ರೆಗಳನ್ನು ತೆಗೆಸಿ ಹುಡುಕಲು , ಶ್ರೀನರಸಿಂಹನ ಗುಡಿಯ ಬಲಭಾಗದ ಕೊಠಡಿಯಲ್ಲಿ ಶ್ರೀಪುರಂದರದಾಸರು ನಿತ್ಯ ಜಪಕ್ಕೆ ಕೂಡುತ್ತಿದ್ದ ಸ್ಥಳದಲ್ಲಿ ಶ್ರೀವಿಜಯದಾಸರು ಧ್ಯಾನಾಸಕ್ತರಾಗಿ ಕುಳಿತಿದ್ದರು! ಶ್ರೀದಾಸರನ್ನು ಎಚ್ಚರಿಸಿ , ವಾದ್ಯವೈಭವದೊಡನೆ ರಥದ ಸಮೀಪಕ್ಕೆ ತಂದು ನಿಲ್ಲಿಸಿ , ’ ಶ್ರೀನಾಥನ ರಥವನ್ನು ಮುಂದೆ ಸಾಗುವಂತೆ ಮಾಡಲು ’ ವಿಜ್ಞಾಪಿಸಿದರು.
ತಕ್ಷಣ ಗೆಜ್ಜೆಕಾಲಿಗೆ ಕಟ್ಟಿ , ತಂಬೂರಿ ಮೀಟುತ್ತಾ , ಚಿಟಿಕೆಯನ್ನು ಹಿಡಿದು , ಶ್ರೀಶ್ರೀನಿವಾಸನ ಎದುರಿಗೆ ನಿಂತು ಈ ಪದವನ್ನು ಶ್ರೀದಾಸರಾಯರು ಆನಂದಬಾಷ್ಪ ಪರಿಪೂರಿತ ಕಂಗಳಿಂದ ಕೂಡಿ ಹಾಡಿ ನಲಿದಾಡಿದರು . ಭಕ್ತರು ರಥವನ್ನು ಸೆಳೆಯಲಾರಂಭಿಸಿದರು , ರಥವು ಸುಗಮವಾಗಿ ಮುಂದೆ ಸಾಗಿತು.
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
rAga: sAvEri , AditALa
sAgibArayya Bava|rOgada vaidyane |
bAguve ninage cennAgi tutisi iMdu || pa ||
BAgIrathIpita BAgavatara saM – |
yOga raMga uragagiri vEMkaTA || a.pa ||
rathada madhyadalippane | rathAMDajavAhana |
rathAMgapANiye daSa|rathanRupatipAli pA – |
rathage validavana | rathava naDesi ati -|
rathamahArathara vi|rathara mADi geliside ||
prathama daivave ma|nmathapita daityara -|
mathana Baktara manO|rathave satata tArA – |
patha maNivarNane | kathASravaNadali su – |
pathava tOrisutippa | prathamAMganoDiyA || 1 ||
nillade baruvudu | pullalOcana siri – |
vallaBa sarvarige | ballidane aprati – |
malla muravirOdhi | mellamellane pAda -|
pallava tOrisutta | sullalitavAgi ||
ellakAladi namma|nella vuddharipadu |
elli ninage sari|yillavo nODalu |
salluvudO biru|dalligallige guNa |
ballavarArinnu| kallakoneyallippa || 2 ||
bomma modalu manujO|ttammaru kaDeyAgi |
nimma dAsaru avara | sammaMdhigaLa pAda – |
nammikoMDippa a|dhammanA sarvO- |
ttummane anEka ma|himma sarvaBUShita ||
ramme dharaNidEvi | immahiShEra gUDi |
sammogavAguta | Gammane bA bA |
himmeTTade siri | vijayaviTThala anu – |
pamma carita para|bomma tirumalESa || 3 ||
I kRutiyannu racisida saMdarBa :
viLaMbi saMvatsarada ASvayujamAsa , tirupatiyalli SrISrInivAsana brahmOtsavada vijayadaSamiya dina. aMdu SrISrInivAsana utsavapratimeyannu muhUrtakke sariyAgi rathakke vAdyavaiBavadoDane karetaMdiddAre. mahaMtaru rathavanneLeyuva muhUrta nirIkShaNe mADuttaliddu , kAlakke sariyAgi rathavanneLeyalu BaktavRuMdakke sUcisidaru. gOviMdA gOviMdA!! ennuva dhvaniyu Borgareyuttiddu , SrISrInivAsanige maMgaLArati mADida naMtara rathavannu eLeyalu prAraMBisidaru. Adare , ratha oMdu aMgulavU jarugalilla ! mahaMtaru kAraNa tiLiyade , SrInAthanannu prArthisidaru. yArAdarU Baktaru harake hottiddu , harake sallisalu maretiddare , aparAdha kANikeyoDane harake sallisiri eMdu Baktaralli vij~jApisidaru. A hottige sariyAgi , bAlakanobbana mEle AvESa baMdaddu kaMDitu – ‘ guDiya oLage iruva Baktanobbanu tanna hRudayakamalakarNikeyalli kaTTihAkiddAne! avanu nannannu biTTukoTTare nAnilli baruvudu , ratha muMde sAguvudu ‘ eMdu bAlakanu kUgalAraMBisidanu. mahaMtarige AScaryavAgi , dEvasthAnada bIgamudregaLannu tegesi huDukalu , SrInarasiMhana guDiya balaBAgada koThaDiyalli SrIpuraMdaradAsaru nitya japakke kUDuttidda sthaLadalli SrIvijayadAsaru dhyAnAsaktarAgi kuLitiddaru! SrIdAsarannu eccarisi , vAdyavaiBavadoDane rathada samIpakke taMdu nillisi , ‘ SrInAthana rathavannu muMde sAguvaMte mADalu ‘ vij~jApisidaru.
takShaNa gejjekAlige kaTTi , taMbUri mITuttA , ciTikeyannu hiDidu , SrISrInivAsana edurige niMtu I padavannu SrIdAsarAyaru AnaMdabAShpa paripUrita kaMgaLiMda kUDi hADi nalidADidaru . Baktaru rathavannu seLeyalAraMBisidaru , rathavu sugamavAgi muMde sAgitu.
vivaraNe :
haridAsaratnaM SrIgOpAladAsaru
Leave a Reply