Composer : Shri Harapanahalli Bheemavva
ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ |ಅ.ಪ|
ಕರುಣಸಾಗರ ಹರಿ ತರುಣಿಯೆ ನೀ ಕೋಟಿ
ತರಣಿ ಕಿರಣ ರತ್ನಾಭರಣವಿಟ್ಟು
ಮಣಿ ಕೌಸ್ತುಭ ವಕ್ಷ ಸ್ಥಳದಲ್ ಹೊಳೆಯುತ
ಸುಪರಣ ವಾಹನಾ ಲಕ್ಷ್ಮಿ ಶರಣರೊಂದಿತಳೆ ||೧||
ಪಂಕಜಾಕ್ಷಿ ಪಂಕಜೋದ್ಭವ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲ್ಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಕೆರಗುವೆ ||೨||
ಮುಗುಳುನಗೆಯ ಮುತ್ತುಗಳುದಿರಿಸುತ ಕ-
ರ್ಣಗಲ ವಾಲೆ ಕದಪಿನಲ್ ಹೊಳೆಯೆ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸುವ ಜಗದಾಧಿಪನ ರಾಣಿ ||೩||
ಸಾಗರದೊಳಗ್ ಹುಟ್ಟಿ ಆಗ ಶ್ರೀನಾಥನ
ಬ್ಯಾಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ-
ರ್ಧಾಂಗಿ ಎನಿಸಿದಂಥ ಮಹಿಮಳೆ ||೪||
ಶೇಷಗಿರಿಯ ಶ್ರೀನಿವಾಸನ ಎದೆಯಲಿ
ವಾಸವಾಗಿರಲತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣನ ನಿಜ ದಾಸರಿಗ್ ವರವೀಯೆ ||೫||
nille nille kolhApuradEvi
ille bAre gejje Gillenuta |a.pa|
karuNasAgara hari taruNiye nI kOTi
taraNi kiraNa ratnABaraNaviTTu
maNi kaustuBa vakSha sthaLadal hoLeyuta
suparaNa vAhanA lakShmi SaraNaroMditaLe ||1||
paMkajAkShi paMkajOdBava janani
paMkajamuKi pAlise enna
paMkajanABana aMkadalloppuva
paMkaje ninna pAdapaMkajakeraguve ||2||
muguLunageya muttugaLudirisuta ka-
rNagala vAle kadapinal hoLeye
bage bage sara baMgAravaniTTu mU-
rjagava mOhisuva jagadAdhipana rANi ||3||
sAgaradoLag huTTi Aga SrInAthana
byAga nODi paramOtsavadi
nAgaSayana nAgArivAhanana-
rdhAMgi enisidaMtha mahimaLe ||4||
SEShagiriya SrInivAsana edeyali
vAsavAgiralati prEmadali
ISa nArada brahmAsuraroDeya BI-
mESakRuShNana nija dAsarig varavIye ||5||
Leave a Reply