-
Nille nille kolhapura devi
Composer : Shri Harapanahalli Bheemavva ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ |ಅ.ಪ|ಗೆಜ್ಜೆ ಘಿಲ್ಲೆನುತ ಗೆಜ್ಜೆ ಘಿಲ್-ಘಿಲ್ಲೆನುತ ಕರುಣಸಾಗರ ಹರಿ ತರುಣಿಯೆ ನೀ ಕೋಟಿತರಣಿ ಕಿರಣ ರತ್ನಾಭರಣವಿಟ್ಟುಮಣಿ ಕೌಸ್ತುಭ ವಕ್ಷ ಸ್ಥಳದಲ್ ಹೊಳೆಯುತಸುಪರಣ ವಾಹನಾ ಲಕ್ಷ್ಮಿ ಶರಣರೊಂದಿತಳೆ ||೧|| ಪಂಕಜಾಕ್ಷಿ ಪಂಕಜೋದ್ಭವ ಜನನಿಪಂಕಜಮುಖಿ ಪಾಲಿಸೆ ಎನ್ನಪಂಕಜನಾಭನ ಅಂಕದಲ್ಲೊಪ್ಪುವಪಂಕಜೆ ನಿನ್ನ ಪಾದಪಂಕಜಕೆರಗುವೆ ||೨|| ಮುಗುಳುನಗೆಯ ಮುತ್ತುಗಳುದಿರಿಸುತ ಕ-ರ್ಣಗಲ ವಾಲೆ ಕದಪಿನಲ್ ಹೊಳೆಯೆಬಗೆ ಬಗೆ ಸರ ಬಂಗಾರವನಿಟ್ಟು ಮೂ-ರ್ಜಗವ ಮೋಹಿಸುವ ಜಗದಾಧಿಪನ ರಾಣಿ ||೩|| ಸಾಗರದೊಳಗ್ ಹುಟ್ಟಿ…
