Sindhoora vadanaaravinda

Composer : Shri Prasannavenkata dasaru

By Smt.Shubhalakshmi Rao

ಸಿಂಧೂರ ವದನಾರವಿಂದ ನಿಲಯೆ [ಪ]
ಇಂದಿರಾದೇವಿ ಇಂದೆನ್ನ ಪೊರೆಯೆ [ಅ.ಪ]

ಸಾಗರದ ತಳವಡೆದು ಸಾಗಿ ಬರುತೆ ಲಕುಮಿ |
ನಾಗಶಯನನ ವರಿಸಿದಿ ನಾಕದರಸಿ |
ನಿಗಮ ವೇದ್ಯಳೆ ನಿತ್ಯ ಬಹುತತ್ವಕಭಿಮಾನಿ
ಭಾಗೀರಥಿ ಜನನಿ ಭಗವತ್ ಸ್ವರೂಪಿಣಿ [೧]

ಸದಮಲಾನಂದ ಪದ ಸೇವಿಸುವ ಸೌಭಾಗ್ಯ |
ಮುದದಿ ಒದಗಿಸಿ ಪೊರೆಯೆ ಮುಕ್ಕುಂದ ಪ್ರೀಯೆ |
ಛದ್ಮವೇಷನ ಬುಧಜನ ಗೇಯ ಹರಿ |
ಹೃದಯ ಗೆದ್ದಾನಂತ ಪದ್ಮ ಸನ್ನಿಧಿಯೆ [೨]

ಪುನ್ನರವ ಮಾಳವ ಸಿರಿ ಪುರಂದರರಾದಿ |
ಚೆನ್ನದೋರಿ ದಾಸರಿಗೆ ಮನೆದೈವವಾದಿ |
ಘನ್ನ ಸಿರಿ ಪರಸನ್ನವೆಂಕಟನ ಸಹಿತಾಗಿ |
ಆನೆಗಂವರ ಪುರದಿ ನೆಲೆಸಿ ಹೆಸರಾದಿ [೩]


siMdhUra vadanAraviMda nilaye [pa]
iMdirAdEvi iMdenna poreye [a.pa]

sAgarada taLavaDedu sAgi barute lakumi |
nAgaSayanana varisidi nAkadarasi |
nigama vEdyaLe nitya bahutatvakaBimAni
BAgIrathi janani Bagavat svarUpiNi [1]

sadamalAnaMda pada sEvisuva sauBAgya |
mudadi odagisi poreye mukkuMda prIye |
CadmavEShana budhajana gEya hari |
hRudaya geddAnaMta padma sannidhiye [2]

punnarava mALava siri puraMdararAdi |
cennadOri dAsarige manedaivavAdi |
Ganna siri parasannaveMkaTana sahitAgi |
AnegaMvara puradi nelesi hesarAdi [3]

Leave a Reply

Your email address will not be published. Required fields are marked *

You might also like

error: Content is protected !!