Composer : Shri Helavanakatte Giriyamma
ತಾರಮ್ಮ ಶ್ರೀ ರಂಗಧಾಮನ ತಂದು
ತೋರಮ್ಮ ಎನ್ನೊಳು ಪ್ರೇಮನ |
ವಾರಿಜಸನ ಶತಕೋಟಿ ತೇಜ ಸುಮುಖ
ತೋರಲೊಲ್ಲೆ ಹೊಂತಕಾರಿಯು ಸಾರಿ [ಪ]
ವೃಂದಾವನದೊಳಗಾಡುವ ಶ್ರೀ-
ಗಂಧವ ಮೈಯೊಳು ತೀಡುವ |
ಚಂದದಿ ಕೊಳಲೂದಿ ಪಾಡುವ ನಮ್ಮ
ಕಂದರ್ಪ ಜಲ ಕ್ರೀಡೆಯಾಡುವ |
ನಂದನ ಕಂದ ಮುಕುಂದನ ಕಾಣದೆ
ಒಂದು ನಿಮಿಷ ಯುಗವಾಗಿದೆ ಸಖಿಯೇ [೧]
ಉಡುವ ಸೀರೆಯ ಸೆಳೆದೋಡುವ ದೊಡ್ಡ
ಕಡಹದ ಮರವೇರಿ ನೋಡುವ |
ಕೊಡಲೊಲ್ಲದೆ ಬಲು ಕಾಡುವ ಲಜ್ಜೆ-
ಗೆಡಿಸಿ ಮಾನಿನಿಯರ ಕೂಡುವ |
ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ
ಒಡೆಯನ ಕರತಾರೆ ಅಡಿಗೆರಗುವೆ [೨]
ನೀಲವರ್ಣನ ನಿಜರೂಪನ ಶ್ರೀ-
ಲೋಲ ಹೆಳವನಕಟ್ಟೆವಾಸನ
ಜಾಲಿಹಾಳ ವೆಂಕಟೇಶನ
ಮೂರು ಲೋಕ ಪಾಲಕ ಭಕ್ತ ಪೋಷನ
ಆಲಸ್ಯವ್ಯಾತಕೆ ಇನಿಯನ ಕರೆತಾರೆ
ಬಾರೆ ನಿನಗೆ ನಾ ಮುತ್ತಿನ ಒಲೆಯ ಕೊಡುವೆ [೩]
tAramma SrI raMgadhAmana taMdu
tOramma ennoLu prEmana |
vArijasana SatakOTi tEja sumukha
tOralolle hoMtakAriyu sAri [pa]
vRuMdAvanadoLagADuva SrI-
gaMdhava maiyoLu tIDuva |
caMdadi koLalUdi pADuva namma
kaMdarpa jala krIDeyADuva |
naMdana kaMda mukuMdana kANade
oMdu nimiSha yugavAgide sakhiyE [1]
uDuva sIreya seLedODuva doDDa
kaDahada maravEri nODuva |
koDalollade balu kADuva lajje-
geDisi mAniniyara kUDuva |
taDavyAtakke saKi tavakadiMdali pOgi
oDeyana karatAre aDigeraguve [2]
nIlavarNana nijarUpana SrI-
lOla heLavanakaTTevAsana
jAlihALa veMkaTESana
mUru lOka pAlaka Bakta pOShana
AlasyavyAtake iniyana karetAre
bAre ninage nA muttina oleya koDuve [3]
Leave a Reply