Composer : Shri Purandara dasaru
ಬಂದಾಳು ಮಹಾಲಕುಮಿ, ನಮ್ಮ ಮನೆಗೆ
ಸಂದೇಹ ವಿಲ್ಲದಂತೆ [ಪ]
ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿ
ನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ]
ಹೆಜ್ಜೆ ಮೇಲೆ ಹೆಜ್ಜೆ ನಿಕ್ಕುತ
ಗೆಜ್ಜೆಯ ಕಾಲ ಘಲು ಘಲು ಘಲುರೆನುತಾ |
ಮೂರ್ಜಗವ ಮೋಹಿಸುತಾ ಮುಕುಂದನ ರಾಣಿಯು
ಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ [೧]
ಮಾಸ ಶ್ರಾವಣ ಶುಕ್ಲ ಶುಕ್ರವಾರ
ಪೌರ್ಣಿಮೆ ದಿನದಂದು |
ಭೂಸುರರು ಎಲ್ಲಾ ಕೂಡಿ ಸಾಸಿರ ನಾಮವ ಪಾಡಿ
ವಾಸವಾಗಿರಲಿಕ್ಕೆ ವಾಸುದೇವನ ರಾಣಿ [೨]
ಕನಕವಾಯಿತು ಮಂದಿರ ಜನನಿ ಬರಲು
ಜಯ ಜಯ ಜಯ ಎನ್ನಿರೆ |
ಸನಕಾದಿ ಮುನಿಗಳ ಸೇವೆಯನ್ನು ಸ್ವೀಕರಿಸಿ
ಕನಕವಲ್ಲಿಯು ತನ್ನ ಕಾಂತನ ಕರೆದುಕೊಂಡು [೩]
ಉಟ್ಟ ಪೀತಾಂಬರ, ಹೊಳೆಯುತ
ಕರದಲ್ಲಿ ಕಂಕಣ ಹಿಡಿಯುತ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡಲಿಕ್ಕೆ [೪]
baMdALu mahAlakumi, namma manege
saMdEha villadaMte [pa]
baMdALu namma manege niMtALu gRuhadalli
naMda kaMdana rANi iMdire namma manege [a.pa]
hejje mEle hejje nikkuta
gejjeya kAla Galu Galu GalurenutA |
mUrjagava mOhisutA mukuMdana rANiyu
saMpattu koDalikke veMkaTESana sahita [1]
mAsa SrAvaNa Sukla SukravAra
paurNime dinadaMdu |
BUsuraru ellA kUDi sAsira nAmava pADi
vAsavAgiralikke vAsudEvana rANi [2]
kanakavAyitu maMdira janani baralu
jaya jaya jaya ennire |
sanakAdi munigaLa sEveyannu svIkarisi
kanakavalliyu tanna kAMtana karedukoMDu [3]
uTTa pItAMbara, hoLeyuta
karadalli kaMkaNa hiDiyuta
sRuShTigoDeya namma puraMdaraviThalanna
paTTadarasi namage iShTArtha koDalikke [4]
Leave a Reply