Shri Varamahalakshmi

Composer : Shri Purandara dasaru

Smt.Lakshmi

ಶ್ರೀ ವರಮಹಾಲಕ್ಷ್ಮೀ ಬಣ್ಣಿಸಿ ಕರೆವೇನೆ
ಬರಲಿಕ್ಕೆ ತಾಮಸವೇ ತಾಯೇ |
ಇಂದಿನದಿನ ಇಂದಿನದಿನ ಬಂದೆನ್ನ
ಆನಂದ ಪಡಿಸಮ್ಮ |ಪ|

ಕಾಲಲಂದುಗೆ ಗೆಜ್ಜೆ ಘೆಲು ಘೆಲು ರೆನುತಲಿ
ನಾದವ ತೋರುತಲಿ ಬಾ, ಮೊದವ ಕೊಡುತಲಿ ಬಾ
ಇಂದಿನದಿನ ಇಂದಿನದಿನ ಬಂದೆನ್ನ
ಆನಂದ ಪಡಿಸಮ್ಮ ||೧||

ಎಷ್ಟೆಂದು ಪೇಳಲಿ ಅಷ್ಟಕ್ಕೆ ನಾನೆಲ್ಲ
ಲಕ್ಷ್ಮೀ ನಿನ್ನ ಗುಣವಾ, ವರಲಕ್ಷ್ಮೀ ನಿನ್ನ ಗುಣವ
ಎನ್ನ ಕಷ್ಟವ ಪರಿಹರಿಸಿ ನಿನ್ನ ದೃಷ್ಟಿಲಿ ತೋರಿಸೆ
ಶೃಷ್ಟೇಷ ಪುರಂದರ ವಿಠಲನ ರಾಣಿ ||೨||


shrI varamahAlakShmI baNNisi karevEne
baralikke tAmasavE tAyE |
iMdinadina iMdinadina baMdenna
AnaMda paDisamma |pa|

kAlalaMduge gejje ghelu ghelu renutali
nAdava tOrutali bA, modava koDutali bA
iMdinadina iMdinadina baMdenna
AnaMda paDisamma ||1||

eShTeMdu pELali aShTakke nAnella
lakShmI ninna guNavA, varalakShmI ninna guNava
enna kaShTava pariharisi ninna dRuShTili tOrise
shRuShTESha puraMdara viThalana rANi ||2||

Leave a Reply

Your email address will not be published. Required fields are marked *

You might also like

error: Content is protected !!