Sri Krishna charitra suladi – Shripadarajaru

by Smt. Nandini Sripad

ಶ್ರೀಕೃಷ್ಣ ಚಾರಿತ್ರ ಸುಳಾದಿ

(ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ)

ರಾಗ ಕಾಪಿ

ಧ್ರುವತಾಳ

ಈ ವನದೆಡೆಗಳು ಈ ನದಿ ಪುಲಿನಗ –
ಳೀ ಶಶಿ ಶಿಲೆಗಳು ಈ ಸುರತರುವಿನ ನೆಳಲು
ಈ ತರುಲತೆಗಳು ಈ ಶುಕಪಿಕ ರವ
ಯಾಕೆ ಮಾಧವನ ಮರೆಯಲೀಯವೆ ಕೆಳದಿ
ಆ ಮುಗುಳುನಗೆಯು ಆ ಸೊಬಗಾ
ಆ ಸುರತರು ನೆಳಲಲ್ಲಿ ರತಿಯು
ಈ ಸುರತವ ನರುಹಿದಾ ಅಬಲಿಯರಿಗೆ
ಈ ಸುಗುಣಮಯ ರಂಗವಿಟ್ಠಲನೆ ಕೆಳದಿ ॥ 1 ॥

ಮಟ್ಟತಾಳ

ಇನ್ನು ರಂಗನ ಸಂಗವ
ಇನ್ನೆತ್ತಣದು ಗೋಪಿಯರಿಗೆ
ಮಧುರಾಪುರಿಯ ಮಾನಿನಿಯರ
ಬಲಿಗೆ ಕೃಷ್ಣನೆ ಸಿಲಿಕಿದನಾಗಿ
ರತಿ ವಿದಗ್ಧರಾದ ವಧುಗಳು
ರಸಿಕ ನಮ್ಮ ರಂಗವಿಟ್ಠಲಾ ॥ 2 ॥

ರೂಪಕತಾಳ

ಬಿಡುವಾರು ಅಧಮರರಾ ಗಣಿಕಾ ಸ್ತ್ರೀಯರು ನೆರೆ
ಬಿಡುವವು ವೀತ ಫಲ ತರುಲತೆ ದ್ವಿಜಗಣ
ಬಿಡುವವು ಮೃಗದಾ ದಳ್ಳುರಿಯ ಕಂಡಡವಿಯ
ಬಿಡುವಾನೆ ಜಾರ ಪರಸತಿಯರ ನೆರೆದಿನ್ನು
ಈ ಪರಿ ಕಂಡೆವು ನಮ್ಮ ವಲ್ಲಭನಲ್ಲಿ
ಅಕ್ಕಟ ರಂಗವಿಟ್ಠಲ ಕರುಣಿಯೆ ॥ 3 ॥

ಝಂಪೆತಾಳ

ಹೆತ್ತ ತಾಯಿತಂದೆಯರಾ ನೋಡಲೆಂದು
ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ
ಮತ್ತಾರು ಉಂಟು ವ್ರಜದೊಳು ತನಗೆ ನೆನವರು
ಹತ್ತಿರಿಕೆ ತನ್ನೀವರಲ್ಲಿ ತಾ ಬಿಡುವನೆ
ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ
ಮತ್ತಾಳಿಗೆ ಕುಸುಮದಾನೆ ಹಾದಂತೆ
ರಕ್ತೀ ಎಮ್ಮೊಳಗುಂಟು ರಂಗವಿಟ್ಠಲಗೆ ॥ 4 ॥

ತ್ರಿಪುಟತಾಳ

ಇನ್ಯಾತಕೆ ರಂಗ ಇಲ್ಲಿಗೆ ಬಾಹಾ
ಮಧುಪುರಿಯರ ಅರಸನಾದಾ
ಮಲ್ಲರ ಕೊಂದು ಮಾವನ್ನ ಮರ್ದಿಸಿ
ಮಧುರಾಪುರಿಗೆ ರಂಗ ಅರಸನಾದಾ
ಅವನ ನೆನಹೆ ಸಾಕು ರಂಗವಿಟ್ಠಲನಾ ॥ 5 ॥

ಧ್ರುವತಾಳ

ಕುಂದು ಕುಸುಮ ಶಶಾಂಕ ರಂಜಿತ
ವೃಂದಾವನದಲ್ಲಿಹಾ
ಮಂದಮಾರುತ ಬರಲು ನಲುವನರ –
ವಿಂದನಯನ ಹಾ
ಕಂದಿದೆವು ಕುಂದಿದೆವು ನಾವು
ಕಂದರ್ಪನ ಶರದಟ್ಟೂಳಿಗೆ
ಇಂದುಮುಖಿಯರ ವೃಂದದೊಡನೆ ಕೃಷ್ಣ
ಅಂದು ನಮ್ಮೊಡನಾಡಿದ ಪರಿಯನು ತಾನು
ಇಂದೊಮ್ಮೆಯಾದರು ನೆನೆವನೆ ಹಾ ॥ 6 ॥

ರೂಪಕತಾಳ

ಪೊಂದೇರು ಎಲ್ಲಿಂದ ಬಂದಿದೆ ವ್ರಜದಲ್ಲಿ
ಅಂದನಕ್ರೂರ ತಾ ಮರಳಿ
ಬಂದನು ನಮ್ಮ ಕರದೊಯ್ಯಬೇಕೆನುತ
ಕೊಂದುಕೊಳ್ಳಲಿ ತಮ್ಮ ಹಿರಿಯರನು ಹರಲಿಗೆ
ಅಂದೆಮ್ಮನಗಲಿಸಿದ ರಂಗವಿಟ್ಠಲನಾ
ಅಂದೆಮ್ಮ ಕೊಂದಾ ಇಂದ್ಯಾಕೆ ಕೊಲ್ಲಲಿ ಬಂದಾ ॥ 7 ॥

ಅಟ್ಟತಾಳ

ಪರಮ ಸುಖದಾಸೆಯು ಬೇರೆಯಿಲ್ಲವೆಂದು
ವರದಳು ಪಿಂಗಳೆ ಜನರಿಗೆ ಹಿತವನು
ಪರಮ ಸುಖದಾಸೆ ಈತನ ಸೇವೆ ಎಲ್ಲವೆ
ಅರಿದರಿದು ಬಿಡುವ ನಾವು ನರಪಶುಗಳಲ್ಲವೆ
ಸಿರಿರಮಣಿ ಬಿಡಲು ನಮ್ಮ ರಂಗವಿಟ್ಠಲನಾ ॥ 8 ॥

ಏಕತಾಳ

ಎಮ್ಮ ತನುಮನ ತನ್ನಾಧೀನ ಮೇಲೆ
ಅನ್ಯವನರಿಯವು ತಾನರಿದಂತೆ ಮಾಡಲಿ
ಉನ್ನಂತ ಗುಣನಿಧಿಯೆಂದು ಮೊರೆಹೊಕ್ಕೆನು
ಅನ್ಯವನರಿಯವು ತಾನರಿದಂತೆ ಮಾಡಲಿ
ಚೆನ್ನ ರಂಗವಿಟ್ಠಲಗೆ ಸಲ್ಲೆ
ಮಾರುಹೋದೆನು ಅನ್ಯವನರಿಯೆ ॥ 9 ॥

ಜತೆ

ಅವನ ಹಂಬಲವೆನಗೆ ಜೀವನವವ್ವಾ
ಭುವನಮೋಹನ ರಂಗವಿಟ್ಠಲ ದೇವರದೇವ ॥


SrIkRuShNa cAritra suLAdi

(SrIkRuShNa cAritra , gOpikA viraha)

rAga kApi

dhruvatALa

I vanadeDegaLu I nadi pulinaga –
LI SaSi SilegaLu I surataruvina neLalu
I tarulategaLu I Sukapika rava
yAke mAdhavana mareyalIyave keLadi
A muguLunageyu A sobagA
A surataru neLalalli ratiyu
I suratava naruhidA abaliyarige
I suguNamaya raMgaviTThalane keLadi || 1 ||

maTTatALa

innu raMgana saMgava
innettaNadu gOpiyarige
madhurApuriya mAniniyara
balige kRuShNane silikidanAgi
rati vidagdharAda vadhugaLu
rasika namma raMgaviTThalA || 2 ||

rUpakatALa

biDuvAru adhamararA gaNikA strIyaru nere
biDuvavu vIta Pala tarulate dvijagaNa
biDuvavu mRugadA daLLuriya kaMDaDaviya
biDuvAne jAra parasatiyara neredinnu
I pari kaMDevu namma vallaBanalli
akkaTa raMgaviTThala karuNiye || 3 ||

JaMpetALa

hetta tAyitaMdeyarA nODaleMdu
ittalaTTidane uddhava ninna gOvaLA
mattAru uMTu vrajadoLu tanage nenavaru
hattirike tannIvaralli tA biDuvane
arthakRuta snEha nammoDane mADida kRuShNa
mattALige kusumadAne hAdaMte
raktI emmoLaguMTu raMgaviTThalage || 4 ||

tripuTatALa

inyAtake raMga illige bAhA
madhupuriyara arasanAdA
mallara koMdu mAvanna mardisi
madhurApurige raMga arasanAdA
avana nenahe sAku raMgaviTThalanA || 5 ||

dhruvatALa

kuMdu kusuma SaSAMka raMjita
vRuMdAvanadallihA
maMdamAruta baralu naluvanara –
viMdanayana hA
kaMdidevu kuMdidevu nAvu
kaMdarpana SaradaTTULige
iMdumuKiyara vRuMdadoDane kRuShNa
aMdu nammoDanADida pariyanu tAnu
iMdommeyAdaru nenevane hA || 6 ||

rUpakatALa

poMdEru elliMda baMdide vrajadalli
aMdanakrUra tA maraLi
baMdanu namma karadoyyabEkenuta
koMdukoLLali tamma hiriyaranu haralige
aMdemmanagalisida raMgaviTThalanA
aMdemma koMdA iMdyAke kollali baMdA || 7 ||

aTTatALa

parama suKadAseyu bEreyillaveMdu
varadaLu piMgaLe janarige hitavanu
parama suKadAse Itana sEve ellave
aridaridu biDuva nAvu narapaSugaLallave
siriramaNi biDalu namma raMgaviTThalanA || 8 ||

EkatALa

emma tanumana tannAdhIna mEle
anyavanariyavu tAnaridaMte mADali
unnaMta guNanidhiyeMdu morehokkenu
anyavanariyavu tAnaridaMte mADali
cenna raMgaviTThalage salle
mAruhOdenu anyavanariye || 9 ||

jate

avana haMbalavenage jIvanavavvA
BuvanamOhana raMgaviTThala dEvaradEva ||

Leave a Reply

Your email address will not be published. Required fields are marked *

You might also like

error: Content is protected !!