Krishnanna Balu

Composer : Shri Vijaya dasaru

By Smt.Nandini Sripad , Blore

ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿ – |
ಶಿಷ್ಟನ್ನ ತುತಿಸಿ ತುಷ್ಟನ್ನ || ಪ ||

ಗೋಪಳ್ಳಿಯೊಳಗಂದು ನಿಂದನ್ನ |
ಬಲುಗೋಪಿಯರ ಕೂಡ ನಂದನ್ನ ||
ಗೋಪಿಚಂದನದಿಂದ ಬಂದನ್ನ ನಮ್ಮ |
ಗೋಪಾಲ ವಿಷ್ಣು ಗೋವಿಂದನ್ನ || ೧ ||

ಅಪಾರ ಮಹಿಮನು ಎನಿಸುವನ |
ಭಕುತಗಾಪತ್ತು ಬರಲು ಮಾಣಿಸುವನ ||
ತಾಪಸಿಗಳಿಗೆ ಕಾಣಿಸುವನ |
ದಶರೂಪವ ಧರಿಸಿ ಜನಿಸುವನ || ೨ ||

ರಜತಪೀಠ ಪುರವಾಸನ್ನ ಮಹ – |
ರಜನೀಚರರ ವಿನಾಶನ್ನ ||
ತ್ರಿಜಗದೊಳಗೆ ಪ್ರಕಾಶನ್ನ ನಮ್ಮ |
ವಿಜಯವಿಠ್ಠಲ ಮಾನಿಸೆನ್ನ || ೩ ||


kRuShNanna balu utkRuShTanna vi – |
SiShTanna tutisi tuShTanna || pa ||

gOpaLLiyoLagaMdu niMdanna |
balugOpiyara kUDa naMdanna ||
gOpicaMdanadiMda baMdanna namma |
gOpAla viShNu gOviMdanna || 1 ||

apAra mahimanu enisuvana |
BakutagApattu baralu mANisuvana ||
tApasigaLige kANisuvana |
daSarUpava dharisi janisuvana || 2 ||

rajatapITha puravAsanna maha – |
rajanIcarara vinASanna ||
trijagadoLage prakASanna namma |
vijayaviThThala mAnisenna || 3 ||

Leave a Reply

Your email address will not be published. Required fields are marked *

You might also like

error: Content is protected !!