Composer : Shri Gurugovinda dasaru
ಹಯವದನಾ ಪಾಲಿಸೋ | ಹಯ ದೈತ್ಯ ನಿಧನಾ ||ಪ||
ಭಯಕೃತು ಭಯಹರ | ದಯದೃಶ ತೋರಯ್ಯ ||ಅ.ಪ.||
ಅಜ ಜನಕನೆ ಹರಿ | ದ್ವಿಜವರ ವಂದ್ಯನೆ
ನಿಜಪದ ಹೃದಯಾಂ | ಬುಜದಲಿ ತೋರುತ (೧)
ವಾದೀಭ ಮೃಗರಾಜ | ವರ ವಾದಿರಾಜರ
ಕರ ಆದರದಲಿ ಪಿಡಿ | ದಾದರಿಸಿದನೇ (೨)
ಅರಿದರ ವರ ಗ್ರಂಥ ಜಪಸರ
ಧರವರ ಉರಗಾತಪ | ಧರಿಸಿಹೆ ಶಿರಿಯನು (೩)
ಶತಾನಂದ ಕೌಸ್ತುಭ | ಶತ ಪತ್ರಾಸನ
ಶತ ಪತ್ರ ಕರ ಪಾದ | ಶತ ಪತ್ರ ನೇತ್ರಾ (೪)
ಭಾವಕೆ ಒಲಿವನೆ | ಭಾವದೊಳಗೆ ನಿಲ್ಲು
ಗೋವಿದಾಂಪತಿ ಗುರು | ಗೋವಿಂದ ವಿಠಲಾ (೫)
hayavadanA pAlisO | haya daitya nidhanA ||pa||
BayakRutu Bayahara | dayadRuSa tOrayya ||a.pa.||
aja janakane hari | dvijavara vaMdyane
nijapada hRudayAM | bujadali tOruta (1)
vAdIBa mRugarAja | vara vAdirAjara
kara Adaradali piDi | dAdarisidanE (2)
aridara vara graMtha japasara
dharavara uragAtapa | dharisihe Siriyanu (3)
SatAnaMda kaustuBa | Sata patrAsana
Sata patra kara pAda | Sata patra nEtrA (4)
BAvake olivane | BAvadoLage nillu
gOvidAMpati guru | gOviMda viThalA (5)
Leave a Reply