Vyasaraya charitre

Composer : Shri Vijaya dasaru

Smt.Nandini Sripad , Blore.

ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ

ವಾರ್ಧಿಕ ಷಟ್ಟದಿ
ರಾಗ ಸಾರಮತಿ, ರೂಪಕತಾಳ

ವ್ಯಾಸರಾಯರ ಸ್ಮರಿಸಿರೋ || ಪ ||
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ |
ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು |
ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ |
ವಾಸವಾಗುವದು ನಿಜ ಭಕುತಿಯಲಿ ಬಿಡದೆ ||ಅ ಪ||

ಪಿತನಿಂದ ನೊಂದು ರತಿಪತಿ ಪಿತನ ಸ್ಮರಿಸುತ |
ಪ್ರತಿಬಂಧಕಗಳಪ್ರತಿಯಾಗಿ ಬಂದಿರಲು |
ಅತಿವೇಗದಿಂದ ಪಾರಂಗತನಾಗಿ ಬಲು |
ಮತಿವಂತನಾಗಿ ಮುದದೀ ||
ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ |
ಸ್ತುತಿಸುತಲಿದ್ದು ಮಿತಿಕಾಲ ಹಿಂಗಳದು |
ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ ಅ -|
ಚ್ಯುತನ ವರದಿಂದ ಬಂದು || ೧ ||

ಅಲ್ಲಿ ತ್ರಿಣಿನೇತ್ರ ಶ್ರೀವಲ್ಲಭನ ಶ್ರೀಪಾದ |
ಪಲ್ಲವಾರುಣ ಚಿತ್ತದಲಿ ಪ್ರತಿದಿವಸದಲಿ |
ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತಿದ್ದು |
ಬಲ್ಲ ಭಕುತಿಂದ ಸತತ ||
ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು |
ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ |
ಎಲ್ಲ ಕಾಲದಿ ಇರುತಿರಲು ನಾರದಮುನಿ |
ಮೆಲ್ಲನೇ ನಡೆತಂದನು || ೨ ||

ಬಂದ ನಾರದಗೆ ಪ್ರಲ್ಹಾದದೇವನು ಎರಗಿ |
ನಿಂದು ಕರಗಳ ಮುಗಿದು ತ್ರಾಹಿ ತ್ರಾಹಿ ಎಂದು |
ಒಂದೊಂದು ಬಗೆಯಲ್ಲಿ ಕೊಂಡಾಡಿ ಬೆಸಗೊಂಡು |
ಇಂದು ನಿಮ್ಮಯ ದರುಶನಾ ||
ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ |
ಬಂದ ವಿಚಾರ ಪೇಳೆಂದು ಬಿನ್ನೈಸಲು |
ವೃಂದಾರಕ ಮುನಿ ನುಡಿದ ಕೃಷ್ಣನ ಮಹಿಮೆ |
ನಂದದಲಿ ಹಾಹಾ ಎನುತಾ || ೩ ||

ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ – |
ಲ್ಹಿಕರಾಯನಾಗಿ ಪುಟ್ಟಿದ ಪ್ರಲ್ಹಾದನು |
ಉಕುತಿಯಿಂದಲಿ ಪೊಗಳಿ ವರವ ಬೇಡಿದನು ವೈ – |
ದಿಕ ಮಾರ್ಗವನ್ನೇ ಧರಿಸಿ ||
ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ – |
ಜಕನಾಗಿಪ್ಪೆನೆಂದು ತಲೆವಾಗಲು |
ಭಕುತಿಗೆ ಮೆಚ್ಚಿ ಸಲೆ ಅಂದ ಮಾತಿಗೆ ಇಂದು |
ಪ್ರಕಟವಾಯಿತು ಧರೆಯೊಳು || ೪ ||

ದಿಕ್ಕುಗಳಂ ಮರದು ಧಿಗಿಧಿಗನೆ ಚಿಗಿದಾಡುತ್ತ |
ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ -|
ರಕ್ಕಿಯೆಂದದಿ ಪೊಳೆವುತಿರಲು ಮೈಮರೆದು ದೇ – |
ವಕ್ಕಿನಂದನ ನೆನೆದು ||
ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ |
ತರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ |
ಇಕ್ಕೆಲದಲವರು ಸಾಹ ಕೇಳಲಾ ವೃತ್ತಾಂತ |
ಅಕ್ಕಟದ್ಭುತವೇನೆಂಬೆ || ೫ ||

ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ಪರುಶ |
ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ – |
ರನ್ನು ಪಾಲಿಸುವ ಪರಮಾನಂದವುಳ್ಳ |
ಬ್ರಹ್ಮಣ್ಯತೀರ್ಥರ ಕರದಿ ||
ಚೆನ್ನಾಗಿ ಪೋಷಿಸಿಕೊಂಡು ಉಪನೀತನಾಗಿ |
ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ – |
ತ್ಪುಣ್ಯ ಶ್ರೀಪಾದರಾಯರಲ್ಲಿ ವಿದ್ಯವನೋದಿ |
ಧನ್ಯ ಕೀರ್ತಿಯಲಿ ಮೆರೆದಾ || ೬ ||

ರಾಯ ಗದ್ದುಗೆನೇರಿ ಅವನಿಗೆ ಬಂದ ಮಹಾ |
ಕುಹಯೋಗವ ನೂಕಿ ರಾಜ್ಯದೊಳಗೆ ಇದ್ದ |
ಮಾಯಿಗಳ ಮರ್ದಿಸಿ ಮುದದಿಂದ ಸುವರ್ನ |
ಛಾಯದಂತೆ ಕಾಂತಿಲೀ ||
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಎಂಬ |
ನ್ಯಾಯ ಗ್ರಂಥವ ರಚಿಸಿ ದೇಹ ಹಂಬಲ ತ್ಯಜಿಸಿ |
ಶ್ರೀಯರಸನೊಲಿಸಿ ನಾನಾ ವಿಧದಿ ಪೂಜಿಸಿ |
ಸ್ಥಾಯವಾದರು ಪೊಂಪದಿ || ೭ ||

ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ |
ಸಂತ ವಾದಿರಾಜಗೊಲಿದು ಪುರಂದರ |
ಇಂತು ಶಿಷ್ಯರನ್ನು ಪಡೆದು ಉಪದೇಶಿಸಿ |
ಮಂತ್ರ ಸಿದ್ಧಿಯನೆ ಕೊಟ್ಟು ||
ಭ್ರಾಂತಗೊಳಿಸುವ ಮಹಾ ಅನ್ಯಾಯಮತವೆಂಬ |
ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು |
ಶಾಂತ ನಿಸ್ಸೀಮನೆನಿಸಿ ಯತಿಶಿರೋರನ್ನ |
ಚಿಂತಿತಾ ಫಲದಾಯಕ || ೮ ||

ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು |
ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ |
ಚಿದ್ವಾಕ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ |
ಸದ್ವೀರ ವೈಷ್ಣವರಿಗೆ ||
ಪದ್ಧತಿಯನು ಪೇಳಿ ತವಕದಿಂದಲಿ ತಾವು |
ಸದ್ವೈಷ್ಣವ ಲೋಕ ಸಿರಿಮರಳೈದಿದರು |
ಮಧ್ವವಲ್ಲಭ ನಮ್ಮ ವಿಜಯವಿಠ್ಠಲನ |
ಪಾದದ್ವಯವ ಭಜಿಸುವವರೂ ಕೇಳಿ || ೯ ||


SrI vyAsarAyara saMkShEpa caritre

vArdhika ShaTTadi
rAga sAramati, rUpakatALa

vyAsarAyara smarisirO || pa ||
vyAsarAyara smarisi Esu janmada pApa |
nASavAguvadu nimmASe siddhisuvadu |
lEsAgi suKisi AnaMda vaikuMThadali |
vAsavAguvadu nija Bakutiyali biDade ||a pa||

pitaniMda noMdu ratipati pitana smarisuta |
pratibaMdhakagaLapratiyAgi baMdiralu |
ativEgadiMda pAraMgatanAgi balu |
mativaMtanAgi mudadI ||
kShitiya BArava vohisi kRutaBuja munISvarana |
stutisutaliddu mitikAla hiMgaLadu |
sutage rAjyavanittu kRutakAryanAgi a -|
cyutana varadiMda baMdu || 1 ||

alli triNinEtra SrIvallaBana SrIpAda |
pallavAruNa cittadali pratidivasadali |
nillisi nigamArthadiMda pUjisutiddu |
balla BakutiMda satata ||
Kullanali puTTida pralhAda dEvanu |
ballidAnAgelli saMsAranuttarisi |
ella kAladi irutiralu nAradamuni |
mellanE naDetaMdanu || 2 ||

baMda nAradage pralhAdadEvanu eragi |
niMdu karagaLa mugidu trAhi trAhi eMdu |
oMdoMdu bageyalli koMDADi besagoMDu |
iMdu nimmaya daruSanA ||
CaMdavAyitenagettaliMda baMdiri itta |
baMda vicAra pELeMdu binnaisalu |
vRuMdAraka muni nuDida kRuShNana mahime |
naMdadali hAhA enutA || 3 ||

vRukOdaraniMda noMdu dEhavanu biDuvAga bA – |
lhikarAyanAgi puTTida pralhAdanu |
ukutiyiMdali pogaLi varava bEDidanu vai – |
dika mArgavannE dharisi ||
ukutiyanE sAdhisi kaliyoLage nimma pU – |
jakanAgippeneMdu talevAgalu |
Bakutige mecci sale aMda mAtige iMdu |
prakaTavAyitu dhareyoLu || 4 ||

dikkugaLaM maradu dhigidhigane cigidADutta |
ukkidavu kaNNiMda aSru jaladhAre tA -|
rakkiyeMdadi poLevutiralu maimaredu dE – |
vakkinaMdana nenedu ||
nakku kilikili rAhasyagaLanuccarisutA |
tarkaisi tiLupidanu muMdaNAgamavella |
ikkeladalavaru sAha kELalA vRuttAMta |
akkaTadButavEneMbe || 5 ||

bannUru grAmadali janisidanu BUsparuSa |
munnilladE beLedu muni subrAhmaNa – |
rannu pAlisuva paramAnaMdavuLLa |
brahmaNyatIrthara karadi ||
cennAgi pOShisikoMDu upanItanAgi |
sanyAsi paTTavane dharisi dharmadali sa – |
tpuNya SrIpAdarAyaralli vidyavanOdi |
dhanya kIrtiyali meredA || 6 ||

rAya gaddugenEri avanige baMda mahA |
kuhayOgava nUki rAjyadoLage idda |
mAyigaLa mardisi mudadiMda suvarna |
CAyadaMte kAMtilI ||
nyAyAmRuta tarkatAMDava caMdrike eMba |
nyAya graMthava racisi dEha haMbala tyajisi |
SrIyarasanolisi nAnA vidhadi pUjisi |
sthAyavAdaru poMpadi || 7 ||

yaMtrOddhArakana pratiShThisi vijayIMdra |
saMta vAdirAjagolidu puraMdara |
iMtu SiShyarannu paDedu upadESisi |
maMtra siddhiyane koTTu ||
BrAMtagoLisuva mahA anyAyamataveMba |
kAMtAra pAvakane vyAsAbdhiyanu bigidu |
SAMta nissImanenisi yatiSirOranna |
ciMtitA PaladAyaka || 8 ||

madhvamataveMba dugdhAbdhige pUrNEMdu |
hRudvanajadoLagirisi kRuShNana padAMbujava |
cidvAkyadali nilisi kAvyadali koMDADi |
sadvIra vaiShNavarige ||
paddhatiyanu pELi tavakadiMdali tAvu |
sadvaiShNava lOka sirimaraLaididaru |
madhvavallaBa namma vijayaviThThalana |
pAdadvayava BajisuvavarU kELi || 9 ||

Leave a Reply

Your email address will not be published. Required fields are marked *

You might also like

error: Content is protected !!