Composer : Shri Shyamasundara dasaru
Shri Sripadarajaru: 1404-1502
kAle phalati surudrumaH chintAmaNir api yAchane daataa |
varshati sakalamabhIShTaM darshana mAtrAt shrIpAdarAn muni: ||
Ashrama Gurugalu : Sri Svarnavarna Tirtharu
Ashrama Shishyaru: Sri Hayagreeva Tirtharu
Aradhane : Jyeshta Shukla Chaturdashi
Ankita: Ranga vittala
Vrundavana: Mulabagilu
ಶ್ರೀಪಾದರಾಜ ಗುರುವೆ | ನತಸುರ ತರುವೆ ||ಪ||
ಶ್ರೀಪಾದರಾಜ ನಿನ್ನ ನಾ ಪೊಂದಿದೆನು ತ್ರಯ
ತಾಪಗಳೋಡಿಸಿ | ನೀ ಪಾಲಿಸು ಅನುದಿನ ||ಅ.ಪ||
ಪಂಡಿತಾಗ್ರಣಿ ಕರ್ಣ | ಕುಂಡಲ ಮುಕುಟಾಭರಣ
ಮಂಡಿತವಾಗಿ ಮಾರ್ತಂಡನಂತೆ ಪೊಳೆವ (೧)
ಪವನ ದೇವನ ಶಾಸ್ತ್ರ | ಸುವಿಛಾರ ಭರಿತ ವಾಕ್
ಪವಿಯಾಖ್ಯ ಗ್ರಂಥ ಕೃತ | ಕವಿಕುಲೋತ್ತಂಸ ಹಂಸ (೨)
ಮೃಷ್ಟಾನ್ನ ನಾನಾವಿಧ ಷಷ್ಟಿ ಶಾಕಂಗಳ
ನಿಷ್ಟೀಲಿ ಸದಾ ರಂಗವಿಠಲಗರ್ಪಿಸಿದ (೩)
ಇಳೆಯ ಸುರಗೆ ಹತ್ಯ | ಸಲೆ ಕರುಣದಿ ಶಂಖ
ಜಲವ ಪ್ರೋಕ್ಷಿಸಿ ಕಳೆದು | ಸಲಹಿದ ಸನ್ಮಹಿಮ (೪)
ತಂದೆ ಜರಿಯೆ ವನದಿ | ನಿಂದು ಭಜಿಸಿ ಶ್ಯಾಮ
ಸುಂದರನೊಲಿಸಿ ಸ್ಥಿರಾನಂದ ಪದವಿ ಪಡೆದ (೫)
SrIpAdarAja guruve | natasura taruve ||pa||
SrIpAdarAja ninna nA poMdidenu traya
tApagaLODisi | nI pAlisu anudina ||a.pa||
paMDitAgraNi karNa | kuMDala mukuTABaraNa
maMDitavAgi mArtaMDanaMte poLeva (1)
pavana dEvana SAstra | suviCAra Barita vAk
paviyAKya graMtha kRuta | kavikulOttaMsa haMsa (2)
mRuShTAnna nAnAvidha ShaShTi SAkaMgaLa
niShTIli sadA raMgaviThalagarpisida (3)
iLeya surage hatya | sale karuNadi shaMkha
jalava prOkShisi kaLedu | salahida sanmahima (4)
taMde jariye vanadi | niMdu Bajisi shyAma
suMdaranolisi sthirAnaMda padavi paDeda (5)
Leave a Reply