Composer : Shri Purandara dasaru
ಮಹದಾದಿದೇವ ನಮೋ
ಮಹಾ ಮಹಿಮನೆ ನಮೋ
ಪ್ರಹಲ್ಲಾದವರದ ಅಹೋಬಲ ನಾರಸಿಂಹ ||ಪ.||
ನಾರಸಿಂಹ ನಾರಸಿಂಹ
ತರಣಿಗುಬ್ಬಸವಾಗೆ ತಾರಾಪತವು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು |
ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆ
ನಾರಸಿಂಹ ನಾರಸಿಂಹ ||೧||
ಸಿಡಿಲಂತೆ ಗರ್ಜಿಸುತ ಕುಡಿಯ ನಾಲಿಗೆ ಚಾಚಿ
ಅಡಿಗಡಿಗೆ ಲಂಘಿಸುತ ಕಡು ಕೋಪದಿಂದ |
ಮುಡಿವಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡು ಉದರ ಬಗೆದೆ ಕಡುಗಲಿ
ನಾರಸಿಂಹ ನಾರಸಿಂಹ ||೨||
ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಪೂಮಳೆಯಗರೆಯೆ |
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನು
ಕರುಣಿಸಿದೆ ಪುರಂದರವಿಠಲ
ನಾರಸಿಂಹ ನಾರಸಿಂಹ ||೩||
mahadAdidEva namO
mahA mahimane namO
prahallAdavarada ahObala nArasiMha ||pa.||
nArasiMha nArasiMha
taraNigubbasavAge tArApatavu naDuge
suraru kaMgeTTODe naBava biTTu |
tarugirigaLallADe SaradhigaLu kudidukke
uriyanuguLuta udbhaviside
nArasiMha nArasiMha ||1||
siDilaMte garjisuta kuDiya nAlige cAci
aDigaDige laMghisuta kaDu kOpadiMda |
muDiviDidu rakkasana keDahi naKadiMdotti
kaDu udara bagede kaDugali
nArasiMha nArasiMha ||2||
sarasijOdBava hara puraMdarAdi samasta
suraru aMbaradi pUmaLeyagareye |
sirisahita garuDAdriyali niMtu Bakutaranu
karuNiside puraMdaraviThala
nArasiMha nArasiMha ||3||
Leave a Reply