Composer : Shri Purandara dasaru
ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ
ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ (೧)
ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ
ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ (೨)
ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ
ಕಾನನಗಡ್ಡೆ ಬೇಡಪ್ಪ ಒಪ್ಪರ ಬೇರ ತಿನ್ನಪ್ಪ (೩)
ತಿನ್ನಪ್ಪ ತಿನ್ನಪ್ಪ ಭಕ್ತಿ ರಸದ ಹಣ್ಣಪ್ಪ
ಸಣ್ಣವ ನೀಡುವನಪ್ಪ ತೆರೆದ ಬಾಯ ತೋರಪ್ಪ (೪)
ತೋರಪ್ಪ ನೀ ತೋರಪ್ಪ ಮುದ್ದು ರೂಪವ ತೋರಪ್ಪ
ಇಂದ್ರ ಪದವ ನೀಡಪ್ಪ ಬಲಿಗೆ ಕಾವಲಾಗಪ್ಪ (೫)
ಆಗಪ್ಪ ಭೃಗು ರಾಮಪ್ಪ ವನಚರನು ಆಗಪ್ಪ
ಭಾಗವತ ಭಟನಪ್ಪ ಪಾದುಕೆ ಅವಗೆ ನೀಡಪ್ಪ (೬)
ನೀಡಪ್ಪ ನೀಡಪ್ಪ ಹೆಣ್ಣ ಅವಗೆ ನೀಡಪ್ಪ
ಬಡವನಾದರೇನಪ್ಪ ಸೋದರ ಅಳಿಯನು ಬಿಡನಪ್ಪ (೭)
ಬಿಡೆನಪ್ಪ ಬಿಡೆನಪ್ಪ ನಿನ್ನ ಚರಣವ ಬಿಡೇನಪ್ಪ
ಕಡಿವಾಣವ ಪಿಡಿಯಪ್ಪ ಪಾರ್ಥಗೆ ಸಾರಥ್ಯ ಮಾಡಪ್ಪ (೮)
ಮಾಡಪ್ಪ ನೀ ಮಾಡಪ್ಪ ಮೋಹ ಶಾಸ್ತ್ರವ ಕಲಿಸಪ್ಪ
ದಿಟ್ಟ ತೇಜಿಯನೇರಪ್ಪ ತಂದೆ ಪುರಂದರ ವಿಠಲಪ್ಪ (೯)
appappA nI nODappa maiyallavu kesarappa
kappu baDivudEnappa toLeveno nI bArappa (1)
bArappa nI bArappa BAra horuvudEnappa
BAravella ninadappA surara kAva ennappa (2)
ennappa ennappa mOre soTTu yAkappa
kAnanagaDDe bEDappa oppara bEra tinnappa (3)
tinnappa tinnappa Bakti rasada haNNappa
saNNava nIDuvanappa tereda bAya tOrappa (4)
tOrappa nI tOrappa muddu rUpava tOrappa
iMdra padava nIDappa balige kAvalAgappa (5)
Agappa BRugu rAmappa vanacaranu Agappa
BAgavata Barathanappa pAduke avage nIDappa (6)
nIDappa nee nIDappa heNNa avage nIDappa
baDavanAdarEnappa sOdara aLiyanu biDanappa (7)
biDenappa biDenappa ninna caraNava biDEnappa
kaDivANava piDiyappa pArthage sArathya mADappa (8)
mADappa nI mADappa mOha SAstrava kalisappa
diTTa tEjiyanErappa taMde puraMdara viThalappa (9)
Leave a Reply