Composer : Shri Harapanahalli Bheemavva
ಅಮ್ಮ ನೀ ಕರೆತಾರೆ ಅರವಿಂದ ನಯನ
ಒಮ್ಯಾದರು ಬಾರ ನಮ್ಮನೆಗೆ [ಪ]
ಬ್ರಹ್ಮನ ಪಡೆದನಗಮ್ಯ ಮಹಿಮನೆ ತಾ
ಕಾಮ್ಯಾರ್ಥ ಕರೆವ ಶ್ರೀ ರಮ್ಮೆ ರಮಣನ [ಅ.ಪ]
ಘನ ಉದಕದಿ ನೋಡೆ ಗ್ರಂಥ ಚೋರನ ಕೊಂದು
ವೇದವ ತಂದಜಗಿತ್ತು ಬರುವೊನೊ
ಪಯಾಬ್ಧಿಯೊಳು ಸುಧೆ ಸುರಜನರಿಗೆ ನೀಡಿ
ಮೇರು ಮಂದರದಲ್ ಅಡಗಿಕೊಂಡಿಹನೊ (೧)
ಭೂಮಿ ಬಗಿದು ನೋಡ್ಹೇಮಾಕ್ಷನಂತಕನಾಗಿ
ಕೋಡಿಂದಲಾ ಧರೆನೆತ್ತಿ ಬರುವೊನೊ
ಉಗುರಿನಿಂದಲಿ ಉರಬಗಿದು ಕರುಳನ್ ಹಾಕಿ
ಮೃಗರೂಪ ಧರಿಸಿ ಕಂಬದಲಿ ಬರುವೊನೊ (೨)
ಗೊತ್ತನ್ ಹೇಳುವೆ ಈ ಜಗತ್ತು ಸಾಲದಲ್ಹೋಗಿ
ಒತ್ತಿ ಬಲಿಯ ಬಾಗಿಲ್ಹತ್ತಿಲಿರುವೊನೊ
ಹೈಹಯ ಮೊದಲಾದ ಸರುವ ರಾಜರನೆಲ್ಲ ಗೆಲಿದು
ಕಾಮಧೇನು ಕೊಂಡು ಬರುವನೊ (೩)
ಒಬ್ಬ ಸತಿಯನಾಳಲಾರದೆ ಗರ್ಭಿಣಿಯ
ದಟ್ಟಿ ಕಾನನಗೊಬ್ಬೆಲ್ಲಿರುವೊನೊ
ತೋಷ್ಟಪುತ್ರಿಯರು ಮೇಲಷ್ಟಭಾರ್ಯರು
ಶತಪತ್ನೇರನಾಳದಿನ್ನೆತ್ತ ಪೋಗಿಹನೊ (೪)
ಬತ್ತಲೆ ತಿರುಗುವನಿತ್ತ ಬರುವನ್ಹ್ಯಾಗೆ
ವಸ್ತ್ರವ ಕೊಟ್ಟು ನಮ್ಮ್ಹತ್ತಿಲೆ ಹರಿಯ
ಖಡ್ಗ ಪಿಡಿದು ಕಲಿಗಳ ಕೊಲ್ಲಲ್ಹೋಗುವ
ಬಿದ್ದು ಪಾದಾರವಿಂದಕ್ಕೆರಗಿ
ಭೀಮೇಶಕೃಷ್ಣನ (೫)
amma nI karetAre araviMda nayana
omyAdaru bAra nammanege [pa]
brahmana paDedanagamya mahimane tA
kAmyArtha kareva SrI ramme ramaNana [a.pa]
Gana udakadi nODe graMtha cOrana koMdu
vEdava taMdajagittu baruvono
payAbdhiyoLu sudhe surajanarige nIDi
mEru maMdaradal aDagikoMDihano (1)
BUmi bagidu nOD~hEmAkShanaMtakanAgi
kODiMdalA dharenetti baruvono
uguriniMdali urabagidu karuLan hAki
mRugarUpa dharisi kaMbadali baruvono (2)
gottan hELuve I jagattu sAladalhOgi
otti baliya bAgilhattiliruvono
haihaya modalAda saruva rAjaranella gelidu
kAmadhEnu koMDu baruvano (3)
obba satiyanALalArade garBiNiya
daTTi kAnanagobbelliruvono
tOShTaputriyaru mElaShTaBAryaru
SatapatnEranALadinnetta pOgihano (4)
battale tiruguvanitta baruvanhyAge
vastrava koTTu nammhattile hariya
KaDga piDidu kaligaLa kollalhOguva
biddu pAdAraviMdakkeragi
BImESakRuShNana (5)
Leave a Reply