Composer : Shri Purandara dasaru
ನಿನ್ನ ನೋಡಿ ಧನ್ಯನಾದೆನೋ ಹೇ ಶ್ರೀನಿವಾಸ
ನಿನ್ನ ನೋಡಿ ಧನ್ಯನಾದೆನೋ ||ಪ.||
ಪಕ್ಷಿವಾಹನ ಲಕ್ಷ್ಮಿರಮಣ
ಲಕ್ಷ್ಯವಿಟ್ಟು ನೋಡೊ ಪಾಂಡವ ಪಕ್ಷ
ಸರ್ವ ದೈತ್ಯ ಶಿಕ್ಷ
ರಕ್ಷಿಸೆನ್ನ ಕಮಲಾಕ್ಷ ||೧||
ದೇಶ ದೇಶ ತಿರುಗಿ ನಾನು
ಆಶಬದ್ಧನಾದೆನೊ ಸ್ವಾಮಿ
ದಾಸನು ನಾನಲ್ಲವೇ ಹೇ ಜಗದೀಶ
ಶ್ರೀಶ ಶ್ರೀನಿವಾಸ ||೨||
ಕಂತುಜನಕ ಕೇಳೊ ಎನ್ನ
ಅಂತರಂಗದ ಆಸೆಯನ್ನು
ಅಂತರವಿಲ್ಲದೆ ಪಾಲಿಸೊ ಶ್ರೀಕಾಂತ
ಪುರಂದರ ವಿಠ್ಠಲರಾಯ ||೩||
ninna nODi dhanyanAdenO hE SrInivAsa
ninna nODi dhanyanAdenO ||pa.||
pakShivAhana lakShmiramaNa
lakShyaviTTu nODo pAMDava pakSha
sarva daitya SikSha
rakShisenna kamalAkSha ||1||
dESa dESa tirugi nAnu
ASabaddhanAdeno svAmi
dAsanu nAnallavE hE jagadISa
SrISa SrInivAsa ||2||
kaMtujanaka kELo enna
aMtaraMgada Aseyannu
aMtaravillade pAliso SrIkAMta
puraMdara viThThalarAya ||3||
Leave a Reply