Srihari Prarthana Suladi – Sheshadasaru

Raga:Bhairavi

Smt.Nandini Sripad , Blore..

ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
(ಗುರುವಿಜಯವಿಟ್ಠಲ ಅಂಕಿತ)
ಶ್ರೀಹರಿ ಪ್ರಾರ್ಥನಾ ಸುಳಾದಿ
( ಶ್ರೀಹರಿ ಸಕಲರಿಗೆ ಬಲಪ್ರದ. ಲಕುಮಿ,
ಜೇವ, ಕಾಲ, ಕರ್ಮಾದಿಗಳು ಅಸ್ವತಂತ್ರರು.
ಸಕಲ ಶಬ್ದ ವಾಚ್ಯನಾಗಿ ಹರಿಯೆ ನಿಯಾಮಕ, ಪ್ರೇರಕ.
ಭಾರತ ಕಥಾ ವಿಷಯ ಪ್ರಾರ್ಥನಾ.
ಐತಿಹಾಸಿಕ ದೃಷ್ಟಾಂತ, ಅನುಗ್ರಹ.)

ರಾಗ ಭೈರವಿ

ಧ್ರುವತಾಳ
ಬಲವುಳ್ಳ ವಸ್ತು ಮಧ್ಯ ನಿನಗಿಂದಧಿಕವಾದ
ಬಲವುಳ್ಳ ವಸ್ತು ಆವದಯ್ಯ ಪೇಳೊ
ಜಲಜ ಜಾಂಡಕ್ಕೆ ಬಲವೆಂದೆನಿಪ ಸಿರಿದೇವಿ
ಜಲಜಸಂಭವ ರುದ್ರಾಮ್ಯರ ತತಿಯು
ಕಲ್ಪಿಸಿ ಅವರವರ ಉಚಿತ ಪದಗಳಿತ್ತು ನಿ –
ರ್ಮಲವಾದ ಜ್ಞಾನವಿತ್ತು ಪ್ರಾಂತ್ಯದಲ್ಲಿ
ವಿಲಿಂಗರನ್ನು ಮಾಡಿ ಸ್ವ ಸ್ವಯೋಗ್ಯತೆ ಮುಕ್ತಿ
ಫಲ ಉಣಿಪೆನೆಂದು ಶ್ರುತಿ ವರಲುತಿಪ್ಪ
ಶ್ರೀಲಕುಮಿದೇವಿ ನಿನ್ನ ಅಪಾಂಗ ದೃಷ್ಟಿ ಬಲದಿ
ಚಲಿಸುವೆನೆಂದು ದೃಢದಿ ಪೇಳುತಲಿರೆ
ಬಲವುಳ್ಳ ವಸ್ತು ಮಧ್ಯ ಬಲ ಯಾವದುಂಟು ಪೇಳೊ
ನಳಿನನಾಭನೆ ನಿನ್ನ ವ್ಯತಿರಿಕ್ತವಾಗಿ
ಕಾಲ ಕರ್ಮಾದಿಗಳಿಗೆ ಸ್ವಾತಂತ್ರ ಎನಿತು ಪೇಳೊ
ಕಾಲ ಕರ್ಮಾದಿ ವಾಚ್ಯನಾಗಿ ನೀನೇ
ಲೀಲೆ ಮಾಡುವನಾಗಿ ತತ್ತದ್ವಸ್ತುಗಳಿಗೆ
ಒಲಿದು ತಂದಿತ್ತ ಮಹಿಮೆ ನಿನ್ನದಲ್ಲದೆ ಅ –
ಖಿಳ ಶಾಸ್ತ್ರದಲ್ಲಿ ಆಲೋಚಿಸಿ ನೋಡಿದರು
ಮೂಲ ನೀನೇವೆ ಸಕಲ ವಸ್ತುಗಳಿಗೆ
ಜಲಜ ನಯನನೆ ಇದನೆ ಸಿದ್ಧಾಂತವಾಗದಿರೆ
ಒಲಿದು ಎನಗೆ ನೀನೆ
‘ ಬೀಜಂ ತದಹಂ’ ಎಂದು ಪೇಳಿದ್ಯಾಕೆ
ಖಳದರ್ಪ ಹರಿ ಗುರುವಿಜಯವಿಟ್ಠಲ ನಿನ್ನ
ಸಲೆ ವಾಕ್ಯ ಎನ್ನ ಮನದಿ ಚಲಿಸದೆಂದು || ೧ ||

ಮಟ್ಟತಾಳ

ಗರುಡಗೆ ಉರಗದ ಭಯ ತೋರಿಸಿದಂತೆ
ಕರುಣನಿಧಿಯೆ ಎನ್ನ ಸಲೆ ಮೋಹಿಪನಾಗಿ
ಪ್ರಾರಬ್ಧ ಕರ್ಮದ ಬಗೆ ಪೇಳಿದ ಮಾತು
ಪರಿಹಾಸ್ಯವಲ್ಲದೆ ಶ್ರುತಿ ಸಮ್ಮತವಲ್ಲ
ಸುರತರು ಸುರಧೇನು ಚಿಂತಾಮಣಿಯಲ್ಲಿ
ಪರಿಪರಿ ಕಾಮಗಳ ಪರಿಪೂರ್ತಿಪ ಶಕ್ತಿ
ಸ್ವರೂಪ ಭೂತವಾಗೆ ತತ್ತತ್ಸಮಯದಲಿ
ಇರದೆ ಪೋಯಿತು ಯಾಕೆ ಜಡದಲಿ ಚೇತನ
ಪರಮೇಷ್ಠಿ ಮೊದಲಾದ ಸುರನರ ಜಡದಲ್ಲಿ
ಪರಿವ್ಯಾಪ್ತವಾಗಿ ಅವರವರಿಗೆ ಕೀರ್ತಿ
ಹರಿ ನಿನ್ನಿಂದಲ್ಲೆ ತಂದಿತ್ತದಲ್ಲದೆ
ಬರಿದೆ ಕರ್ಮವ ತೋರಿ ನೀನೆ ಬಳಲಿಪದೇಕೆ
ನರ ಸಾರಥಿ ಗುರುವಿಜಯವಿಟ್ಠಲ ನಿನ್ನ
ಬಿರಿದಿಗೆ ಇದು ಘನತೆ ಕಠಿಣವ ಬಿಡು ಬಿಡು || ೨ ||

ತ್ರಿವಿಡಿತಾಳ

ಜೀವ ಪ್ರಕೃತಿ ಕಾಲ ಕರ್ಮಾನುಸಾರವಾಗಿ
ದೇವ ದೈತ್ಯರ ದ್ವಾರವೆರಡರಿಂದ
ಸುವಿಹಿತಾವಿಹಿತ ಕರ್ಮ ಮಾಳ್ಪ ಕಾರಣದಿಂದ
ಕೇವಲ ನಿಘರ್ಲಣಾದಿ ಶೂನ್ಯನೆಂದು
ಆ ವೇದ ಶಾಸ್ತ್ರಗಳು ವರುಲುತಿವೆ ಸತತ
ಈ ವಿಧ ಕರ್ಮವನ್ನು ಕಳೆವದಕ್ಕೆ
ದೇವ ದೇವನೆ ನಿನ್ನಿಂದ ನಿರ್ಮಿಸಿದಂಥ
ಸುವಾಕ್ಯಗಳುಂಟು ಬಲು ವಿಧದಿ
” ವಿಷ್ಣೋರಂಗಾರಶೇಷೇಣ ಯೋಂ ಽ ಗಾನಿ ಪರಿಮಾರ್ಜಯೇತ್‍
ಕೋಟಿ ಜನ್ಮಾರ್ಜಿತಂ ಪಾಪಂ ತತ್‍ಕ್ಷಣಾ ದೇವನಸ್ಯತಿ
ಕೋಟ್ಯೆಂದು ಸಹಸ್ತ್ರೈಸ್ತು ಮಾಸೋ ಪೋಷಣ ಕೋಟಿಭಿಃ
ತತ್ಫಲಂ ಲಭತೇ ಪುಂಭಿಃ ವಿಷ್ಣೋರ್ನೈವೇದ್ಯ ಭಕ್ಷಣಾತ್ ||”
ಏವಮಾದಿಗಳು ಈ ಪರಿ ವರುಲುತಿರೆ
ಶ್ರೀವಿಷ್ಣು ಪ್ರೀತ್ಯರ್ಥ ಮಾಳ್ಪ ಕರ್ಮ
ಆವ ದುಷ್ಕರ್ಮದ ಫಲವು ಕಾಯದಿರೆ
ಸುವಾಕ್ಯಗಳಿಗೆಂತು ಪ್ರಾಮಾಣ್ಯ ಬರುವದೊ
ಆವ ವಸ್ತು ಧರ್ಮ ನಿನ್ನಿಂದಾಗುತಲಿರೆ
ಪೂರ್ವೋಕ್ತ ಕರ್ಮದಿ ವ್ಯಾಪ್ತನಲ್ಲವೇನು
ಸಾವಧಾನದಿ ಕೇಳೊ ವ್ರಜನಾರ್ದನನೆ ನಿನ್ನ
ಪವಿತ್ರವಾದ ನಾಮಸ್ಮರಣೆ ಮಾತ್ರ
” ಯತ ತೋಪಿಹರೆಃ ಪದಸಂಸ್ಮರಣೆ
ಸಕಲಂಹ್ಯಗಮಾಸುಲಯಂ ವ್ರಜತೀ” ಎಂದು ನುಡಿದ
ಆ ವೇದಶಾಸ್ತ್ರಗಳಿಗೆ ಪ್ರಾಮಾಣ್ಯವೆಂತು ಅರಿಯೆ
ಈ ವಸುಂಧರೆಯಲ್ಲಿ ಕೂಡಿದ ಅಘವೆಂಬೊ
ಆವ ಮೇರು ಸಮ ತೂಲ ರಾಸಿ
ದಾವಾಗ್ನಿ ಎನಿಪದು ನಿನ್ನ ನಾಮದ ಸ್ಮರಣಿ
ಸಾವಿರ ಮಾತಿಗೆ ಸಿದ್ಧಾಂತವೋ
ಭಾವಿ ಬ್ರಹ್ಮರಿಗೆಲ್ಲ ಇದೆ ಇದೆ ಸಿದ್ಧವೆಂದು
ಆ ವೇದ ಶಾಸ್ತ್ರಗಳು ವರಲಿ ದಣಿಯುತಲಿರೆ
ಶ್ರೀವಾಸುದೇವ ಗುರುವಿಜಯವಿಟ್ಠಲರೇಯಾ
ನೋವು ಕಳೆಯದಿರೆ ಹರಿ ಎಂದು ನುಡಿವದ್ಯಾಕೆ || ೩ ||

ಅಟ್ಟತಾಳ

ನೀನು ಎಂದಿಗೂ ಸತ್ಯ ನಿನ್ನ ಕ್ರೀಯವು ಸತ್ಯ
ನೀನು ನುಡಿದಂಥ ವಾಕ್ಯ ಎಂದಿಗೂ ಸತ್ಯ
ನೀನು ಮಾಡಿದ ಕ್ಲಪ್ತವೆಂಬೊ ಪಾಶದಿಂದ
ಪ್ರಾಣಾದ್ಯಮರರು ನಿರುತ ಬದ್ಧಿತರಾಗಿ
ಸಾನುರಾಗದಿಂದ ಸಂಚರಿಸುವರು
ದೀನನಾಥ ಗುರುವಿಜಯವಿಟ್ಠಲ ನಿನ್ನ
ಧೇನಿಪರಿಗೆ ಇಂತು ಕರ್ಮದ ಫಲವೋ || ೪ ||

ಆದಿತಾಳ

ಎಮ್ಮ ನಿಮಿತ್ಯವಾಗಿ ಅವತಾರ ಮಾಡಿದಿ
ಎಮ್ಮ ನಿಮಿತ್ಯವಾಗಿ ಅನುಬಂಧ ಮಾಡಿದಿ
ಎಮ್ಮ ನಿಮಿತ್ಯವಾಗಿ ಸಖತನ ಮಾಡಿದಿ
ಎಮ್ಮ ನಿಮಿತ್ಯವಾಗಿ ಕ್ಷಣವಗಲದೆ ಇದ್ದಿ
ಎಮ್ಮ ನಿಮಿತ್ಯವಾಗಿ ದೂತ ಕೃತ್ಯ ಮಾಡಿದಿ
ಎಮ್ಮ ನಿಮಿತ್ಯವಾಗಿ ನೀಚೋಚ್ಚ ಮಾಡಿದಿ
ಎಮ್ಮ ನಿಮಿತ್ಯವಾಗಿ ಸ್ವರೂಪ ಚಿನ್ಹೆಯ ಬಿಟ್ಟು
ಆ ಮಹಾ ಕೈಯಲ್ಲಿ ಕಶವನ್ನು ಧರಿಸಿದಿ
ಎಮ್ಮ ನಿಮಿತ್ಯವಾಗಿ ಬಹು ಕೃತ್ಯ ಮಾಡಿ ಈಗ
ಜನ್ಮದೊಳಗೆ ಒಮ್ಮೆ ಕಣ್ಣಿಲೆ ನೋಡದಿರೆ
ಚಿನ್ಮಯ ನಿನ್ನ ಕೃತ್ಯ ವ್ಯಭಿಚಾರವಾಗದೇನೊ
ಸಮ್ಮತವೆ ನಿನಗೆ ಯಿದು ಶ್ರುತಿ ಸ್ಮೃತಿ ಸಂತತಿಗೆ
ಒಮ್ಮೆ ನೆನೆದ ಮಾತ್ರ ಮುಕುತಿಯನಿತ್ತವಂಗೆ
ಜನ್ಮವ ನಿನಗಾಗಿ ಸಮರ್ಪಣೆ ಮಾಡಿದವಗೆ
ಎಮ್ಮ ಅಭಿಮಾನ ಬಿಟ್ಟು ಈ ಪರಿ ಮಾಡುವಂಥ
ಹಮ್ಮು ಬಿಡು ಬಿಡು ಇನ್ನೆಂದಿಗಾದರು
ಖಮ್ಮಹಿಯೊಳಗಿದ್ದ ಸುರ ನರ ಜೀವಿಗಳಿಗೆ
ಸಮ್ಮತವಲ್ಲ ನೋಡು ಬಲು ಬಗೆ ನೋಡಿದರು
ಎಮ್ಮ ಪಾಲಿನ ದೈವ ಗುರುವಿಜಯವಿಟ್ಠಲರೇಯ
ಸಮ್ಮುಖನಾಗುವದು ಕ್ಷಣವಗಲದೆ ಎನ್ನ || ೫ ||

ಜತೆ

ದುರುಳನ್ನ ಪಕ್ಷ ಬಿಟ್ಟು ಎನ್ನ ಪಾಲಿಗೆ ಬಂದ
ಪರಿಯ ಮರಿಯದಿರು ಗುರುವಿಜಯವಿಟ್ಠಲ ||


SrImodalakallu SEShadAsArya viracita
(guruvijayaviTThala aMkita)
SrIhari prArthanA suLAdi
( SrIhari sakalarige balaprada. lakumi,
jEva, kAla, karmAdigaLu asvataMtraru.
sakala Sabda vAcyanAgi hariye niyAmaka, prEraka.
BArata kathA viShaya prArthanA.
aitihAsika dRuShTAMta, anugraha.)

rAga Bairavi

dhruvatALa
balavuLLa vastu madhya ninagiMdadhikavAda
balavuLLa vastu Avadayya pELo
jalaja jAMDakke balaveMdenipa siridEvi
jalajasaMBava rudrAmyara tatiyu
kalpisi avaravara ucita padagaLittu ni –
rmalavAda j~jAnavittu prAMtyadalli
viliMgarannu mADi sva svayOgyate mukti
Pala uNipeneMdu Sruti varalutippa
SrIlakumidEvi ninna apAMga dRuShTi baladi
calisuveneMdu dRuDhadi pELutalire
balavuLLa vastu madhya bala yAvaduMTu pELo
naLinanABane ninna vyatiriktavAgi
kAla karmAdigaLige svAtaMtra enitu pELo
kAla karmAdi vAcyanAgi nInE
lIle mADuvanAgi tattadvastugaLige
olidu taMditta mahime ninnadallade a –
KiLa SAstradalli AlOcisi nODidaru
mUla nInEve sakala vastugaLige
jalaja nayanane idane siddhAMtavAgadire
olidu enage nIne
` bIjaM tadahaM’ eMdu pELidyAke
KaLadarpa hari guruvijayaviTThala ninna
sale vAkya enna manadi calisadeMdu || 1 ||

maTTatALa

garuDage uragada Baya tOrisidaMte
karuNanidhiye enna sale mOhipanAgi
prArabdha karmada bage pELida mAtu
parihAsyavallade Sruti sammatavalla
surataru suradhEnu ciMtAmaNiyalli
paripari kAmagaLa paripUrtipa Sakti
svarUpa BUtavAge tattatsamayadali
irade pOyitu yAke jaDadali cEtana
paramEShThi modalAda suranara jaDadalli
parivyAptavAgi avaravarige kIrti
hari ninniMdalle taMdittadallade
baride karmava tOri nIne baLalipadEke
nara sArathi guruvijayaviTThala ninna
biridige idu Ganate kaThiNava biDu biDu || 2 ||

triviDitALa

jIva prakRuti kAla karmAnusAravAgi
dEva daityara dvAraveraDariMda
suvihitAvihita karma mALpa kAraNadiMda
kEvala niGarlaNAdi SUnyaneMdu
A vEda SAstragaLu varulutive satata
I vidha karmavannu kaLevadakke
dEva dEvane ninniMda nirmisidaMtha
suvAkyagaLuMTu balu vidhadi
” viShNOraMgAraSEShENa yOM & gAni parimArjayEt^
kOTi janmArjitaM pApaM tat^kShaNA dEvanasyati
kOTyeMdu sahastraistu mAsO pOShaNa kOTiBiH
tatPalaM laBatE puMBiH viShNOrnaivEdya BakShaNAt ||”
EvamAdigaLu I pari varulutire
SrIviShNu prItyartha mALpa karma
Ava duShkarmada Palavu kAyadire
suvAkyagaLigeMtu prAmANya baruvado
Ava vastu dharma ninniMdAgutalire
pUrvOkta karmadi vyAptanallavEnu
sAvadhAnadi kELo vrajanArdanane ninna
pavitravAda nAmasmaraNe mAtra
” yata tOpihareH padasaMsmaraNe
sakalaMhyagamAsulayaM vrajatI” eMdu nuDida
A vEdaSAstragaLige prAmANyaveMtu ariye
I vasuMdhareyalli kUDida aGaveMbo
Ava mEru sama tUla rAsi
dAvAgni enipadu ninna nAmada smaraNi
sAvira mAtige siddhAMtavO
BAvi brahmarigella ide ide siddhaveMdu
A vEda SAstragaLu varali daNiyutalire
SrIvAsudEva guruvijayaviTThalarEyA
nOvu kaLeyadire hari eMdu nuDivadyAke || 3 ||

aTTatALa

nInu eMdigU satya ninna krIyavu satya
nInu nuDidaMtha vAkya eMdigU satya
nInu mADida klaptaveMbo pASadiMda
prANAdyamararu niruta baddhitarAgi
sAnurAgadiMda saMcarisuvaru
dInanAtha guruvijayaviTThala ninna
dhEniparige iMtu karmada PalavO || 4 ||

AditALa

emma nimityavAgi avatAra mADidi
emma nimityavAgi anubaMdha mADidi
emma nimityavAgi saKatana mADidi
emma nimityavAgi kShaNavagalade iddi
emma nimityavAgi dUta kRutya mADidi
emma nimityavAgi nIcOcca mADidi
emma nimityavAgi svarUpa cinheya biTTu
A mahA kaiyalli kaSavannu dharisidi
emma nimityavAgi bahu kRutya mADi Iga
janmadoLage omme kaNNile nODadire
cinmaya ninna kRutya vyaBicAravAgadEno
sammatave ninage yidu Sruti smRuti saMtatige
omme neneda mAtra mukutiyanittavaMge
janmava ninagAgi samarpaNe mADidavage
emma aBimAna biTTu I pari mADuvaMtha
hammu biDu biDu inneMdigAdaru
KammahiyoLagidda sura nara jIvigaLige
sammatavalla nODu balu bage nODidaru
emma pAlina daiva guruvijayaviTThalarEya
sammuKanAguvadu kShaNavagalade enna || 5 ||

jate

duruLanna pakSha biTTu enna pAlige baMda
pariya mariyadiru guruvijayaviTThala ||

Leave a Reply

Your email address will not be published. Required fields are marked *

You might also like

error: Content is protected !!