Composer : Shri Karpara Narahari dasaru
ಗುರುವರ್ಯ ಪುರಂದರ ಗುರುವರ್ಯ [ಪ]
ಗುರುವರ್ಯ ಕಾಯಬೇಕೆನ್ನ, ಮಧ್ವ
ಗುರುಕೃತ ಗ್ರಂಥಾರ್ಥ ಜ್ಞಾನ, ಕೊಟ್ಟು
ಕರಣತ್ರಯ ಗಳಿಂದಾಚರಿಸುವ ಕರ್ಮವ
ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ [ಅ.ಪ]
ಸುರಮುನಿ ನಿನ್ನ ಪ್ರಾರ್ಥನದಿ, ಶ್ರೀ ಮ
ದ್ಗುರು ವೇದವ್ಯಾಸರು ದಯದಿ, ಪಾ-
ಮರ ಪಂಡಿತರಿಗೆ ಸುಲಭದಿ, ಧರ್ಮ ತಿಳಿದಾ-
ಚರಿ ಪರೆಂದು ಮುದದಿ, ಅರಿತು
ನಿರುತ ಶೇವಿಪರಿಗೆ ಪರಮ ಮಂಗಳವೀವ
ವರ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ (೧)
ಕಲಿಯುಗದಲಿ ಹರಿನಾಮ, ಜನರ
ಕಲಿ ಕಲ್ಮಷಾದ್ರಿ ಸೂತ್ರಾಮ, ಎಂದು
ತಿಳಿದು ಕೀರ್ತಿಪರಿಗೆ ಪರಮ, ಮಂ
ಗಳ ಕರನಾಮದ ಮಹಿಮ, ಎನುತ
ಇಳಿಯೊಳು ವರ ಪುರಂದರ ಗಡ
ದಲಿ ಪುಟ್ಟಿ ಬಲು ವಿಧ ಹರಿನಾಮಂ-
ಗಳನು ವಿರಚಿಸಿದ (೨)
ಕಾಶ್ಯಾದಿ ಕ್ಷೇತ್ರ ಸಂಚರಿಸಿ, ಪದ
ರಾಶಿ ಸುಳಾದಿಗಳ ರಚಿಸಿ, ಸಂ-
ತೋಷ ತೀರ್ಥರ ಮತ ಬಲಿಸಿ, ಗುರು
ವ್ಯಾಸರಿಂದುಪದೇಶ ಗ್ರಹಿಸಿ, ಜಗದಿ
ಭೂಸುರ ಪಾಲಕ ಶ್ರೀಶಕಾರ್ಪರ ನರ
ಕೇಸರಿಗತಿ ಪ್ರಿಯ ದಾಸರೆಂದೆನಿಸಿದ (೩)
guruvarya puraMdara guruvarya [pa]
guruvarya kAyabEkenna, madhva
gurukRuta graMthArtha j~jAna, koTTu
karaNatraya gaLiMdAcarisuva karmava
harimADisuvaneMba smaraNeya karuNiso [a.pa]
suramuni ninna prArthanadi, SrI ma
dguru vEdavyAsaru dayadi, pA-
mara paMDitarige sulaBadi, dharma tiLidA-
cari pareMdu mudadi, aritu
niruta SEviparige parama maMgaLavIva
vara BAgavata graMtha nirmisidaru satya (1)
kaliyugadali harinAma, janara
kali kalmaShAdri sUtrAma, eMdu
tiLidu kIrtiparige parama, maM
gaLa karanAmada mahima, enuta
iLiyoLu vara puraMdara gaDa
dali puTTi balu vidha harinAmaM-
gaLanu viracisida (2)
kASyAdi kShEtra saMcarisi, pada
rASi suLAdigaLa racisi, saM-
tOSha tIrthara mata balisi, guru
vyAsariMdupadESa grahisi, jagadi
BUsura pAlaka SrISakArpara nara
kEsarigati priya dAsareMdenisida (3)
Leave a Reply