Nambideno Brahmanya

Composer : Shri Narasimha vittala

By Smt.Shubhalakshmi Rao

Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru


ನಂಬಿದೆನೋ ಬ್ರಹ್ಮಣ್ಯತೀರ್ಥಾರ್ಯ |
ಸನ್ನುತ ಚರಣ ಪಾವನ ಸುಚರ್ಯಾ || ಪ ||
ಘನ್ನ ಭವದ ಭಯವನ್ನು ಕಳೆದು ಯತಿ – |
ರನ್ನ ಯೆನ್ನನು ಧನ್ಯನ ಮಾಡೋ || ಅ.ಪ ||

ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ |
ದುರಿತೌಘ ಜೀಮೂತ ಚಂಡ ಸಮೀರ |
ಸುರರುಚಿ ತುಳಸೀ ಪಂಕಜಮಣಿ ಹಾರ |
ಧರಿಸಿ ಮೆರೆವೋ ದಿನಕರನವತಾರ |
ಕರುಣದಿ ತವ ಶ್ರೀಕರ ಚರಣಾಂಬುಜ |
ದರುಶನವ ಕೊಡು ಗುಣಗಣ ನಿಧಿಯೇ || ೧ ||

ಸೇವಿಪ ಜನರಿಗೆ ದೇವತರುವೆನಿಪ |
ಶ್ರೀವಿಠ್ಠಲ ತಾವರೆ ಮಧುಪಾ |
ಕೋವಿದ ಜನರು ಸಂಭಾವಿಸಿ ಸ್ತುತಿಪ |
ಪಾವನ್ನ ಪಾದಾರ್ಚಿತ ಭಾವಜ ಮುನಿಪಾ |
ಪಾವನ ಸುಮತನ ಜೀವರ ಚಂದ್ರನೆ |
ಪಾವನ ಮತಿ ಕೊಡು ನೀ ಒಲಿದೆನಗೆ || ೨ ||

ಹರಿಭಕ್ತಿ ವೈರಾಗ್ಯ ಪರ ತತ್ತ್ವಜ್ಞಾನ |
ವರದ ಪಾಲಿಸು ಸರ್ವವಿದ್ಯಾ ಪ್ರವೀಣ |
ನರಸಿಂಹವಿಠ್ಠಲ ಶ್ರೀಹರಿ ಸನ್ನಿಧಾನ |
ಕರುಣಾಪಾತ್ರನೇ ದಿವ್ಯವರ ಪೂರ್ಣ ಜ್ಞಾನ |
ಹರಿಗುರು ಭಜನ ತ್ವತ್ಪದ ವ್ಯಾಸಾರ್ಯರ |
ಗುರುವೆಂದೆನಿಸಿದೆ ಧರೆಯೊಳು ಮೆರೆದೆ || ೩ ||


naMbidenO brahmaNyatIrthArya |
sannuta caraNa pAvana sucaryA || pa ||
Ganna Bavada Bayavannu kaLedu yati – |
ranna yennanu dhanyana mADO || a.pa ||

puruShOttama sutIrthara priya sukumAra |
duritauGa jImUta caMDa samIra |
suraruci tuLasI paMkajamaNi hAra |
dharisi merevO dinakaranavatAra |
karuNadi tava SrIkara caraNAMbuja |
daruSanava koDu guNagaNa nidhiyE || 1 ||

sEvipa janarige dEvataruvenipa |
SrIviThThala tAvare madhupA |
kOvida janaru saMBAvisi stutipa |
pAvanna pAdArcita BAvaja munipA |
pAvana sumatana jIvara caMdrane |
pAvana mati koDu nI olidenage || 2 ||

hariBakti vairAgya para tattvaj~jAna |
varada pAlisu sarvavidyA pravINa |
narasiMhaviThThala SrIhari sannidhAna |
karuNApAtranE divyavara pUrNa j~jAna |
hariguru Bajana tvatpada vyAsAryara |
guruveMdeniside dhareyoLu merede || 3 ||

Leave a Reply

Your email address will not be published. Required fields are marked *

You might also like

error: Content is protected !!