Composer : Shri Gurugopala dasaru
- ಶ್ರೀ ಮಠದ ಪರಂಪರೆಯಲ್ಲಿ ಪೂಜಿಸಲ್ ಪಡುವ
ಶ್ರೀ ಅಷ್ಟ ಬಾಹುಯುತ ಲಕ್ಷ್ಮೀ ನಾರಾಯಣನನ್ನು
ಹೊತ್ತಿರುವ ಶ್ರೀ ಗರುಡ ದೇವರ ಸ್ತೋತ್ರ
ಶ್ರೀ ವರದೇಂದ್ರ ಸ್ವಾಮಿಗಳು ಪೂಜಿಸಿತಿರುವಾಗೆ ಸ್ತುತಿಸಿದ್ದು |**
ಪಕ್ಷಿರಾಜನ ಕಂಡೆನಾ | ಶ್ರೀಹರಿಯ ಲಕ್ಷ್ಮೀ ಸಾಹ
ವಹಿಸುವವನಾ | ಸುರವರನಾ | ಪ |
ವಿನುತ ಕಶ್ಯಪನಿಂದಲಿ ಜನಸೀದಾ |
ಕ್ಷಣ ಲೋಕ ನಡಗಿಸಿದನಾ ಅಂದು |
ಜನನಿಗೆ ಬಂದದಾಸೀ ಭಾವವನು |
ವಿನಯದಲಿ ಬಿಡಿಸಿದವನಾ | ವೈಷ್ಣವನಾ || ೧ ||
ವಾಲಿಖಿಲ್ಯರ ಪೊರದನಾ ಮಹರತ್ನ |
ಶೈಲ ಸ್ವರ್ಗಕ್ಕೆವೈದನಾ ಅಂದು |
ಗಾಲವನ ಪ್ರೀತಿ ಸಖನಾ ಸುರತರು |
ಮೂಲ ಸಹ ವಹಿಸಿದವನಾ | ತಾರ್ಕ್ಷನನಾ || ೨ ||
ಸುಂದರಸು ಪಂಚವರ್ನಾ ಹರಿಸ್ತೋತ್ರ |
ಛಂದೋಂಗಮಯಾದವನಾ ಅಂದು ಕು |
ಳಿಂದರನ ಭಕ್ತಿಸಿದನಾ ಕಂಠದಲಿ |
ಬಂದವಿಪ್ರನ ಪೊರದನಾ | ಶುಭಕರನ || ೩ ||
ಮಾರುತಾ ಸಖ ದಿಕ್ಕಿಲೀ ಪೀಠಕಾ |
ಧಾರ ರೂಪಿಲಿ ನಿಂದನಾ ಪ್ರೇರತಾ |
ಆರನೇ ಆವರಣದಿ ತನ್ನ ನಿಜ |
ನಾರಿ ಸಹಸೇವಿಸುವನಾ | ಜ್ಞಾನಮಯನ ||೪ ||
ಫಣಿರಾಜ ಫಣಿಭೂಷಣಾ ಸಮನೆನಿಪ |
ಫಣಿಹಾರ ಫಣಿ ಭೋಜನಾ ಅಂದೂ |
ಕ್ಷಣದೊಳಗ ಬಲಿಯ ಜೈಸೀ ಶ್ರೀ ಹರಿಯ |
ಮಣಿಮಯ ಮುಕುಟ ತಂದನ | ಮಹಬಲನ || ೫ ||
ಸುರಪತಿ ಜಿತನು ಕಪಿಗಳ ಜೈಸಿ ತಾ |
ಉರಗ ಪಾಶದಿ ಕಟ್ಟಿರೆ |
ರಾಮ ಸ್ಮರಿಸಿದಾಕ್ಷಣಕೆ ಬಂದೂ |
ಪಾಶವನು ಪರಿದು ಕಪಿಗಳ ಪೊರೆದನಾ | ಸುರವರನಾ || ೬ ||
ಮಾತುಳಿಗೆ ವರದಾತನ ಸುಮುಖನ್ನ |
ಪ್ರೀತಿಯಿಂದಲಿ ಪೊರೆದನಾ ಜಂಭಾ |
ರಾತಿಯ ಸುಕುಲಿಶವನ್ನು ತೃಣಮಾಡಿ |
ಮಾತಿಗೆ ಸುಧೆಯ ವೈದನಾ | ಜಯಪ್ರದನಾ || ೭ ||
ಶ್ವೇತ ದ್ವೀಪಾನಂತಾಸನಾ ವೈಕುಂಠ |
ಖ್ಯಾತಹರಿ ಧಾಮತ್ರಯಕೆ ಅಂದು |
ತಾ ತವಕದಿಂದೈದುವಾ ಹರಿಗೆ ನಿಜ |
ಕೇತ ರೂಪದಿ ಭಜಿಪನಾ | ಭಯಹರನಾ || ೮ ||
ಗುರುಗೋಪಾಲವಿಠ್ಠಲಾ ಶ್ರೀ ಹರಿಯ |
ಸಿರಿಸಹಿತ ಧರಿಸಿ ಬಂದು ನಮ್ಮ
ವರದೇಂದ್ರಯತಿರಾಜಗೆ ವಲಿದು ತಾ |
ಪರಮಭೀಷ್ಠಿಗಳೀವನಾ | ಕವಿವರನಾ || ೯ ||
- SrI maThada paraMpareyalli pUjisal paDuva
SrI aShTa bAhuyuta lakShmI nArAyaNanannu
hottiruva SrI garuDa dEvara stOtra –
SrI varadEMdra svAmigaLu pUjisitiruvAge stutisiddu |**
pakShirAjana kaMDenA | SrIhariya lakShmI sAha
vahisuvavanA | suravaranA | pa |
vinuta kaSyapaniMdali janasIdA |
kShaNa lOka naDagisidanA aMdu |
jananige baMdadAsI BAvavanu |
vinayadali biDisidavanA | vaiShNavanA || 1 ||
vAliKilyara poradanA maharatna |
Saila svargakkevaidanA aMdu |
gAlavana prIti saKanA surataru |
mUla saha vahisidavanA | tArkShananA || 2 ||
suMdarasu paMcavarnA haristOtra |
CaMdOMgamayAdavanA aMdu ku |
LiMdarana BaktisidanA kaMThadali |
baMdaviprana poradanA | SuBakarana || 3 ||
mArutA saKa dikkilI pIThakA |
dhAra rUpili niMdanA prEratA |
AranE AvaraNadi tanna nija |
nAri sahasEvisuvanA | j~jAnamayana ||4 ||
PaNirAja PaNiBUShaNA samanenipa |
PaNihAra PaNi BOjanA aMdU |
kShaNadoLaga baliya jaisI SrI hariya |
maNimaya mukuTa taMdana | mahabalana || 5 ||
surapati jitanu kapigaLa jaisi tA |
uraga pASadi kaTTire |
rAma smarisidAkShaNake baMdU |
pASavanu paridu kapigaLa poredanA | suravaranA || 6 ||
mAtuLige varadAtana sumuKanna |
prItiyiMdali poredanA jaMBA |
rAtiya sukuliSavannu tRuNamADi |
mAtige sudheya vaidanA | jayapradanA || 7 ||
SvEta dvIpAnaMtAsanA vaikuMTha |
KyAtahari dhAmatrayake aMdu |
tA tavakadiMdaiduvA harige nija |
kEta rUpadi BajipanA | BayaharanA || 8 ||
gurugOpAlaviThThalA SrI hariya |
sirisahita dharisi baMdu namma
varadEMdrayatirAjage validu tA |
paramaBIShThigaLIvanA | kavivaranA || 9 ||
Leave a Reply