Composer : Shri Kamalesha vittala ankita on shri Appavaru
Shri Ibharamapura appavaru
Period – 1789-1869
Janma nama – Ibharamapura Krishnacharyaru
Upadesha Gurugalu – Rayaru (Svapna)
Place – Ibharamapura near Mantralaya
Punya Tithi – Shravana Shudda Triteeya
hanumantaarchakam soumyam raaGavEndrO gurO: priyam |
appEti naamnaa viKyaatam kRuShNaachaarya gurum bhajE |
ಶ್ರೀ ರಾಘವೇಂದ್ರರಾಯರ ಪಾದಾಂಬುಜ |
ದಾರಾಧಕರ ಕೊಂಡಾಡಿರೋ || ಪ ||
ನಾರಾಯಣ ನಾಮ ಪಾರಾಯಣರ | ಪಾ
ದಾರವಿಂದ ಸುಧಾ ರಸವ ಬೀರುವಾ || ಅ. ಪ ||
ಅಲವಬೋಧ ಸತ್ಕುಲ ದೀಪರೆನಿಸಿದ |
ಹುಲುಗಿಯ ನರಸಪ್ಪಾಚಾರ್ಯರ |
ಕಲಿಯೊಳು ಕಲಿಕೃತ ಕಲ್ಮಶ ಕಳೆವೆ |
ನಿರ್ಮಲ ರಾಯ್ಚೂರು ಕೃಷ್ಣಾಚಾರ್ಯರ ||
ಇಳೆಯೊಳು ಚಷಷ್ಠಿ ಕಳದಿ ನಿಪುಣರಾದ |
ಯಳಮೇಲಿ ಹಯಗ್ರೀವಾಚಾರ್ಯರ |
ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ |
ಬಲವಂತ ಯೋಗಿ ನಾರಾಯಣಾರ್ಯರ |೧|
ಧರಣಿದೇವರಿಗೆ ನಿರುತಾನ್ನವನೀವ |
ವರ ಹರಿಹರ ಭೀಮಾಚಾರ್ಯರ |
ಹರಿದಾಸರಿಗೆ ಮಂದಿರವಾದ |
ಇಭರಾಂಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ||
ಶಿರಿಪಾದ ಪುತ್ರ ಪಂಡಿತರೊಳಗಗ್ರೇ |
ಸರ ಶ್ರೀ ರಂಗದ ರಾಮಾಚಾರ್ಯರ |
ಸುರಪುರ ಶ್ರೀ ನರಹರಿಯ ಪಾದಾಂಬುಜ |
ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ |೨|
ಶ್ರೀ ರಾಘವೇಂದ್ರರಾಯರ ಭೂಮಿಯೊಳವ |
ಮಾಡಿದ ಆರಂಭದಿಂ |
ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ |
ದಾರಾಧಿಸುವರಾನಂದದಿ ||
ಸಾರ ಭಕ್ತರ ಪಾದಾರವಿಂದಕೆ | ನಮ |
ಸ್ಕಾರ ಮಾಡಿರೋ ಸಾಷ್ಟಾಂಗದಿ |
ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ |
ಸಾರೂಪ್ಯವ ಕೊಟ್ಟು ಸಲಹುವ ಸಂತತಾ |೩|
SrI rAGavEMdrarAyara pAdAMbuja |
dArAdhakara koMDADirO || pa ||
nArAyaNa nAma pArAyaNara | pA
dAraviMda sudhA rasava bIruvA || a. pa ||
alavabOdha satkula dIparenisida |
hulugiya narasappAcAryara |
kaliyoLu kalikRuta kalmaSa kaLeve |
nirmala rAycUru kRuShNAcAryara ||
iLeyoLu caShaShThi kaLadi nipuNarAda |
yaLamEli hayagrIvAcAryara |
halavu sajjanaroLu tiLisi koLLadalippa |
balavaMta yOgi nArAyaNAryara |1|
dharaNidEvarige nirutAnnavanIva |
vara harihara BImAcAryara |
haridAsarige maMdiravAda |
iBarAMpuradalli mereva kRuShNAcAryara ||
SiripAda putra paMDitaroLagagrE |
sara SrI raMgada rAmAcAryara |
surapura SrI narahariya pAdAMbuja |
siriyoLmereva asmadguru rAjAcAryara |2|
SrI rAGavEMdrarAyara BUmiyoLava |
mADida AraMBadiM |
dArAru bRuMdAvana pUjA stOtradiM |
dArAdhisuvarAnaMdadi ||
sAra Baktara pAdAraviMdake | nama |
skAra mADirO sAShTAMgadi |
dhIra SrI kamalESaviThThala validu tanna |
sArUpyava koTTu salahuva saMtatA |3|
Leave a Reply