Composer : Shri Yellathoor vedagarbha Setumadhava Soori Acharyaru on Shri Vrundavanacharya [Sode Matha]
Shri Vishwapriya Tirtharu :
ArAdhanE: AshADa amAvAsE
Parampare: 32nd in soDE maTa
gurugaLu: shri vishvEsha tIrtharU
shishyarU: shri vishvAdIsha tIrtharU (sOdemaTa)
shri raghupravIra tIrtharU (bhImanakaTTe maTa)
BrindAvana: uDupi krishNa maTa
Period: 1774-1865
ವಂದೇ ವಂದಾರು ಮಂದಾರಮಿಂದಿರಾಬ್ಜ ಮಧುವ್ರತಂ |
ಶ್ರೀವಿಶ್ವಪ್ರಿಯ ಯೋಗೀಂದ್ರ ಹೃದಬ್ಜನಿಲಯಂ ಹರಿಂ ||
vaMdE vaMdAru maMdAramiMdirAbja madhuvrataM |
SrIviSvapriya yOgIMdra hRudabjanilayaM hariM ||
ಶ್ರೀಗುರುರಾಜಾಯಮಂಗಲಂ ||
[ಒಂದು ಒಂದು ಶ್ಲೋಕಕ್ಕೆ ಒಂದು ಒಂದು ಚರಣಾ ಎಂದು ಅಭಿಪ್ರಾಯ. ಒಂದು ಚರಣಕ್ಕೆ ನಾಲಕ್ಕುಪಾದ. ಒಂದು ಪಾದಕ್ಕೆ ಪ್ರಾಯೇಣ ಏಳು ಅಕ್ಷರ ಏತದತಿರಿಕ್ತವಾಗಿ ಎರಡು ರೇಖೆಯಲ್ಲಿ ಯಿದ್ದಾಕ್ಷರಗಳು ಕೊಸರೂ ಎಂತ ಅನಿಶಿಕೋತದೆ. ಹಾಗೆ ಉಚಿತವಾದ ಕೊಸರು ಮಧ್ಯೆಮಧ್ಯೆ ಸೇರಿಸಿಕೊತಕ್ಕದ್ದು. ಪ್ರತಿಪಾದಕ್ಕೂ ದ್ವಿತೀಯಾಕ್ಷರ ಪ್ರಾಸವೆಂಬ ನೇಮಾವಿ- ರುತ್ತದೆ.
||ರಾಗ ಪೂರಿ ಕಲ್ಯಾಣಿ || ಆದಿತಾಳ ||
ಮಾನಿಸಿರೋಲ್ಲ ಮಾನಿಸ ವಿಠಲಾ ಎಂಬ ದಾಸರ ಪದದಂತೆ ವರ್ಣವುಂಟು.
ಲಕ್ಷ್ಮೀಶೋಭಾನೆ ಧಾಟಿಯಿಂದಲ್ಲು ಹೇಳಬಹುದು. ಇನ್ನು ಆನಂದಭೈರವಿ ಮೊದಲಾದ ರಾಗಗಳಿಂದಲೂ ಹತ್ತು ಚರಣಕ್ಕೆ ಒಂದು ರಾಗ ಪ್ರಕಾರ ಹೇಳುತ್ತಾರೆ. ಉಚಿತ ಪ್ರಕಾರ ಆಜ್ಞಾಕೊಟ್ಟು ಪ್ರಚಯಮಾಡಿಸೋದಕ್ಕು ಶ್ರೀಶ್ರೀಗಳವರು ಸ್ವತಂತ್ರರು ಇದ್ದಾರೆ]
ಅಥ ಶ್ರೀ(ವೃಂದಾವನಾಚಾರ್ಯ) ಗುರುಲೀಲಾವಿಲಾಸ: ಪ್ರಾರಭ್ಯತೇ ||
(ಓಂ)|| ಕೇಳೇ ಇವನ ಲೀಲೆ | ಬಾಲೇ ಪೇಳುವನಲ್ಲೆ || ಪ ||
ಸಲ್ಲೋಕ ಗುರುಲೀಲೆ | ಕೆಲ್ಲಾವು ಕೇಳಿ ಬಲ್ಲೆ
ಯಲ್ಲಾವು ವರಲೋಲೆ | ಬಲ್ಲಾರ ಪೂರ್ವ ಯಲೆ || ಅ. ಪ||
ವಾದಿರಾಜರ ಪ್ರಿಯಾ | ನಂದ ತೀರ್ಥರ ಶುದ್ಧ
ಹೃದಯದಲ್ಲಿದ್ದ ಶ್ರೀ | ಸದನಗೇ ವಂದಿಪೇ || ೧ ||
ತೌಲವ ಮಂಡಲದಿ ಕುಲದ ಮಹೀಸುರ | ನಿಲಯಾದಿ ಜನಿಶಿ |
ಕಾಲಾದಿ ದ್ವಿಜನಾದ ||೨||
ವೇದವ ವಿಪ್ರನಲ್ಲಿ ವೋದಿದ ಬ್ರಂಹಚಾರಿ |
ಶುದ್ಧಕಾವ್ಯವನೋದಿ | ಸುಧಿಯಾದ ವಿನೋದಿ || ೩ ||
ವಿಶ್ವೇಶಪೂಜಗ್ಯಾಗಿ ವಿಶ್ವೇಶತೀರ್ಥರಿಂದ |
ವಿಶ್ವಪ್ರಿಯನು ಯೆಂದು | ವಿಶ್ವಾಸಿ ಯತಿಯಾದ ||೪ ||
ಶಿರದಲ್ಲಿ ನಿರ್ಮಾಲ್ಯ ಕೊರಳಲ್ಯಕ್ಷಮಾಲೆ |
ಉ(ದ)ರದಿ ಪದ್ಮಗಂಧ | ಕರದಿ ಜಪಸರ || ೫ ||
(ಉರದಿ: ವಕ್ಷಪ್ರದೇಶದಲ್ಲಿ)
ಕಟಿಸೂತ್ರಲಂಗೋಟಿ | ಶಾಟಿ ಸುದಂಡ ಝಾರಿ
ವದ್ದಿಗೇ ತಾ ಧರಿಶಿ | ಪಟು ಹಂಸ ತೋರಿದ ||೬||
ದಿನಕರನೋಪಾದಿ ಮಣೆಯಲ್ಲಿ ಪೊಳೆವ | ಮುದ್ದು | ಚಿನ್ನ
ಯತಿಯ ಕಂಡು | ಜನ ಬೆರಗಾಗಿತು ||೭||
(ಮುದ್ದು ಎಂಬ ಕೊಸರು)
ಯೆಲ್ಲಾರಿವನ ಪಾದ ಜಲಜವ ತೊಳಿದು | ಆ |
ಜಲವ ಶಿರದಲ್ಲಿ ತಳದುಕೊಂಡರಾಗ ||೮||
ಗುರುಗಳಿಟ್ಟಾಜ್ಞೆಯ | ಶಿರಬಾಗಿ ಧರಿಶಿ |
ವರಗುರುಸೇವೆಯ ಪೂರೈಶಿದನುದಿನ ||೯||
ವೃದ್ಧ ಪರಮಗುರು | ಶುದ್ಧಸನ್ನಿಧಿಯಲ್ಲಿ |
ಇದ್ದು ಕೆಲವು ಕಾಲ | ವೋದಿದ ಮಧ್ವಶಾಸ್ತ್ರ||೧೦||
ಭಕ್ತಿ ವಿರಕ್ತಿಯಲ್ಲಿ | ಯೀತಗೆ ಸಮ ಬಾಲ |
ಯತಿಯೂ ವಿಲ್ಲಾವೆಂದು | ಕೀರ್ತಿಯ ಬೆಳಗಿದ || ೧೧ ||
ಅನಶನ ನೇಮದಿ ಮೌನಿಯ್ಯಾಗಿದ್ದು ಮತ್ತು
ಅನ್ನವ ಸ್ವಲ್ಪವುಂಡು | ಜನಕ್ಕೆ ಪುಣ್ಯಾವಿತ್ತ ||೧೨||
ವೃದ್ಧರ ವಶನಾಗಿ | ಸಿದ್ಧನು ವೊಂದು ಭಾರಿ
ಮುದ್ದು ಕೃಷ್ಣ ಪಾದ ಮೊದಲು ಪೂಜಿಶಿದ ||೧೩||
ಯೆದ್ದು ಸೋದೇಗೆ ಪೋಗಿ | ರಾಜ | ವೃಂದಾವನದ ಮುಂದೆ
ವೋದಿದ ಗಿವಗರ್ಥ ಶಬ್ದವು ಕೇಳಿತಂತೆ ||೧೪||
ದೇಶದೇಶದಿ ಬಂದ ದಾಸ ಜನರಿಗೆಲ್ಲಾ |
ಶ್ರೀಶನ ಮಹಿಮೋಪದೇಶವ ಮಾಡಿದನು ||೧೫||
ಮೂರುಲೋಕವನಾಳ್ವ ಸುರೇಂದ್ರನಂತೆ ತಪೋ |
ವರವ ಮಾಡಿ ಮುನಿ ಧೀರನೆಂದನಿಶಿದ ||೧೬||
ಧವಳಗಂಗಾ ತೀರ ತ್ರಿವಿಕ್ರಮನುತ್ಸವ ಅವಭೃಥ ನಡಿಶಿ |
ದಿವಜ ನಂತೊಪ್ಪಿದ ||೧೭||
ಗುರುವಾದಿರಾಜರ ವರದಿ ವಸದಿ ಭೂಸುರರಿಗೆನ್ನವಸ್ತ್ರ
ಸುರಿಶಿದ ನೂದಾರ ||೧೮||
ನಿತ್ಯದಲ್ಯನ್ನದಾನ ಮತ್ತು ನಡವುದಕ್ಕೆ ಸುತ್ತೂ ಭೂಮಿ
ಯ ವೃದ್ಧಿ ಯೀತಮಾಡಿದ ಧನ್ಯ ||೧೯||
ಭೂಮಿಯ ಸೀಮೆ ತಪ್ಪಿ ಕಾಮಿಶಿ ಬಂದವರ ವರ್ಮಾಸಿ ಚ
ರ್ಮಧಾರಿ ಸ್ತೋಮ ತೋರೋಡಿಶಿದ ||೨೦||
ಪರನಿಗ್ರಹದಲ್ಲಿ ಗುರುರಾಜರಿಟ್ಟ ಶ್ರೀ | ನಾರಾಯಣಾರ್ಯ
ಭೂತ ನಿರುತಾವಿಹಾನಿಲ್ಲಿ ||೨೧||
ದುರುಳಮಾಯಿಭಿಕ್ಷು ಬರದ ಪೂರ್ವಪಕ್ಷ ಸರಿನೋಡಿ ಸ್ವಪಕ್ಷ
ಬರಶಿದ ನೀ ದಕ್ಷ ||೨೨||
ಪಂಚ | ಬೃಂದಾವನಕ್ಕೆ ಗುರುವಂದನ ಮಾಡುವಾಗ
ವೊಂದ್-ಹಿಡಿ ಮಂತ್ರಾಕ್ಷತೆ ಬಂದು ಶಿರದಿ ಬಿತ್ತೇ ||೨೩||
ಗುರುರಾಜರ ಕರ ಸರಸಿಜ ಸಂಜಾತ ವರದ
ವೇದವೇದ್ಯ ಚರಣಕ್ಕೆರಗಿದ ||೨೪||
ವಂದಿಶಿ ಗುರುದ್ವಯ ಪಾದವ ಸಿದ್ಧನಾಗಿ ಬಂದನು
ಉಡುಪಿಗೆ ಯಾದವ ಪೂಜಗ್ಯಾಗಿ ||೨೫||
ಪಟ್ಟಸಿಂಹಾಸನದಿ ಇಟ್ಟು ರಾಜರ ಪಾದಪೀಠ ಭರತನಂತೆ |
ದಿಟ್ಟಸೇವಕನಾದ ||೨೬||
ಕೋಲಶ್ರೀವಾಜಿಮುಖಬಾಲಕೃಷ್ಣರಪೂಜೆ |
ಕಾಲತಪ್ಪದೆ ಮಾಡಿ ಬಾಳಿದ ಮಹಾರಾಯ ||೨೭||
ವೀಕ್ಷಿಸಿ ರಾಜ ಕೊಟ್ಟ ಲಕ್ಷದ್ರವ್ಯವ ಗುರು |
ಲಕ್ಷ್ಯಮಾಡದೆ ಧರ್ಮ | ಪಕ್ಷಕ್ಕೆ ಸುರೆಬಿಟ್ಟ||೨೮||
ಸರಳ ಭುವನೇಂದ್ರ ಗುರು ಮೊದಲೆಲ್ಲಾರೂ
ಧರಯೊಳಿವಗೆಣೆ ಯಾರಿಲ್ಲಾವೆಂದರಾಗ ||೨೯||
ಬದರೀವಾಸಕೊಟ್ಟ ಶುದ್ಧಶಿಲೆಯ ಮಧ್ವ | ಮುನಿ |
ಮಧ್ಯವಾಟದಲ್ಲಿಟ್ಟ ಸಿದ್ದಗೆ ಪೂಜೆಗಾಗಿ ||೩೦||
ಆ ದಿವ್ಯಸ್ಥಳ ಗುರು ವಾದಿರಾಜಗೆ ವಶವಾದ |
ಕಾರಣ ಅಲ್ಲಿ ಸಾದರ ನಿವ ಬಂದ ||೩೧||
ಮೇಲಾಗಿ ಹರಿರೂಪ ಪಾಲಿತ ಸಂಪುಟದಿ
ಶ್ರೀಲೋಲವೇದೇಶನ್ನ ಕಾಲಜ್ಞ ಬೇಡಿಗೊಂಡ ||೩೨||
ವಾಸವೀಸುತವೇದವ್ಯಾಸನು ದಯಮಾಡಿ
ದಾಸಯತಿಯ ಭಕ್ತಿಪಾಶಕ್ಕೆ ವಳಗಾದ ||೩೩||
ಮಧ್ಯವಾಟಮಠದ ಬಾದರಾಯಣಗುರು
ಶುದ್ಧಪೂಜೆಗೆ ಮೆಚ್ಚಿ ಸೋದಾಮಠಕ್ಕೆ ಬಂದ ||೩೪||
ಮಗನಿಗಾಗಮದ | ಜಗವ ತಂದ ವೇದ
ಭಾಗ ಮಾಡಿದ ಮುವ್ವಾ | ರೀಗ ಕೂಡಿದ ಭಾಗ್ಯ ||೩೫||
(ಆಗಮದ: ಆಗಮದಾನಮಾಡಿದವನೆಂದರ್ಥ. ’ದದಾತೀತಿ ದ:’)
ಬಂದ ದೇವರ ದಿವ್ಯವೇದ ಮಂಗಳ ವಾದ್ಯ
ಮಧುರ ಪಂಚಾಮೃತದಿಂದ ಪೂಜಿಪ ನಿತ್ಯ ||೩೬||
ನವಭಕ್ಷಭೋಜ್ಯವ ನವಮಾಡಿಶಿ
ಪ್ರತಿ ದಿವಸದಲ್ಲ್ಯೂ ವ್ಯಾಸಸೇವಕನಿವ ಸುಖಿ ||೩೭||
ಹಿಂದಕ್ಕೆ ವ್ಯಾಸಯೋಗಿ ತಂದಿದ್ದ ವ್ಯಾಸಪೂಜೆ
ಮಧ್ಯದ ಮಠದಲ್ಲ್ಯೂ ಯಂದಿಗೂ ನಡಿಶಿದ ||೩೮||
ಮೋಸ ಮಾಡಿದನೆಂಬ ಕಾಸುಬಾಳದವರ
ಯೇಸು ಮಾತುಗಳನ್ನು ಬಿಸಾಡೀಡಾಡಿದೂರ ||೩೯||
(ಬಿಸಾಡು,ಈಡಾಡಿ ದೂರ ಎಂದು ಪದಚ್ಛೇದ)
ಅವಧೂತಪ್ರಾಯನು ಅವನೀಲೀವನೆಂದು
ಭುವನೇಶರಾಣಿಯ ಭವನಕ್ಕೆ ಕರದ ||೪೦||
ಪ್ರಭುವರನೇಕತ್ರ [೧] ಉಭಯಸಮಸ್ಥಾನ
ಶುಭ ವ್ಯಾಸಪೂಜೆಯ | ಸಂಭ್ರಮ ಮಾಡಿಸಿದ ||೪೧||
(೧. ಪ್ರಾಯಶಃ ಉತ್ತರಾದಿಮಠ ಮತ್ತು ಸೋದೆ ಮಠ ಹೀಗೆ ಅಥವ, ಸುಬ್ರಹ್ಮಣ್ಯಮಠ ಮತ್ತು ಸೋದೆಮಠ ಹೀಗೆ ಎರಡು ಸಾಂಸ್ಥಾನಗಳ ವಾರವುಳ್ಳ ವೇದವ್ಯಾಸದೇವರನ್ನು ಸೇರಿಸಿ ಇಬ್ಬರು ಸ್ವಾಮಿಗಳನ್ನು ಕರೆಯಿಸಿ ಒಂದು ಸ್ಥಳದಲ್ಲಿ ರಾಜನು ಪೂಜೆ ಮಾಡಿಸಿದನು ಎಂದರ್ಥ, ಇದರ ಐತಿಹ್ಯ ವಿಚಾರಿಸಿ ತಿಳಿಯಬೇಕು. ’ಪ್ರಭುವರನು + ಏಕತ್ರ’ ಎಂದು ಪದಚ್ಛೇದ )
ಭೂಮಿಪತಿಯೂ ನೋಡೆ ಕಾಮಿಸೋಮಕೊಟ್ಟು
ನೇಮಾದಿ ವ್ಯಾಸಪೂಜೇ ಈ ಮುನಿ ಮಾಡಲೆಂದ ||೪೨||
(ಸ್ತೋಮ: ಸೈನ್ಯವನ್ನು ಎಂದರ್ಥ.)
ಬೇಡಿದವರದಗೆ | ಗುರು | ಮಾಡಿದ ಪೂಜೆ ಕಂಡು
ಕಾಡಿದ ಜನರೆಲ್ಲ | ಬೀಡಾದರಂಬಜಯ || ೪೩||
(ವರದಗೆ: ವ್ಯಾಸರಿಗೆ ಎಂದರ್ಥ. ಬೀಡಾಡಿದರು=ಆಶ್ರಯಕೊಟ್ಟರು. ಅಂಬಜಯ ಎಂದರೆ ಎಲೆ ಅಮ್ಮ ಜಯಾದೇವಿ ಎಂಬುದು ಸಂಬುದ್ಧಿ, ಕಥೆ ಹೆಂಗಸಿಗೆ ಹೇಳಿದ್ದು.)
ಭಕ್ತಿಸಾರಜ್ಞ ಸೂರಿ ತತಿಯಾ ಕೂಡಿ ವ್ಯಾಸ
ನುತಿಯಾ ಮಾಡಿ ನಿತ್ಯ ಸುತ್ತಿದೇಶದಿ ಬಂದ ||೪೪||
ವೇದವ್ಯಾಸರ ಮೂರ್ತಿ ಸಾಧಿಶಿತಂದು
ನಂದಕಂದನ ಕೂಡ ಇಟ್ಟು ನಂದದಿ ಪೂಜಿಶಿದ ||೪೫||
ವೇದಜ್ಞಜನಯುತ ವೇದಾಂತಿ ವಿಪ್ರನಿಂದ
ಶುದ್ಧಮಾಡಿಶಿ ಯಾಗ ಯಾದವಗರ್ಪಿಶಿದ ||೪೬||
ಬೃಂದಾವನಾಖ್ಯಾನ ದಿಂದೋಕ್ತ ಚಿಹ್ನದಿಂದ
ಬೃಂದಾವನಾರ್ಯನಿವನೆಂದು ಖ್ಯಾತಿ ಪೆತ್ತ ||೪೭||
ಹತ್ತೀತು ಮಠವೆಂದು ದೂತರು ಪೇಳೆ ಗುರು
ಯೆತ್ತಿದ ಹಸ್ತನೋಡಿ ಅತ್ತಲಾಗಿತು ಅಗ್ನಿ ||೪೯||
ಹರಿಯ ನಿರ್ಮಾಲ್ಯವ | ದೂರಿ ಬಿಸಾಟವಗೇ
ದೂರಪೋದನು ನೇತ್ರದಾರಿಯ ಬಿಟ್ಟು ವಿಶ್ವ ||೪೯||
ಕಾಟವ ಮಾಡುವರ ಮಟ್ಟುಮಾಡುವ ಶಕ್ತಿ
ಕೊಟ್ಟು ಇವನ ಕೂಡ ಘೋಟಾಸ್ಯ ಮೆರೆದನು ||೫೦||
ಚಿತ್ತಶುದ್ಧಿಯುವುಳ್ಳ ಉತ್ತಮ ವೃದ್ಧನಿಗೆ ಇತ್ತನು
ಸಮಸ್ತಾನ ಮತ್ತರೇನಂದರೇನೇ ||೫೧||
ಗುಪ್ತದಿ ಕೃಷ್ಣಪೂಜೆ ಆತಗು ಕೊಟ್ಟು ಗುರು
ಭಕ್ತವಶ್ಯನು ಯಂತ ಸ್ತುತಿಯ ವಳಗೊಂಡ ||೫೨||
ಶ್ರೀವಿಷ್ಣುತೀರ್ಥ ವೃದ್ಧ ಸುವಂಶದಲ್ಲಿ ಜಾತ
ಶ್ರೀವಾದಿರಾಜಪಟ್ಟದ ವಗಿದಷ್ಟೂ ಯುಕ್ತ ||೫೩||
ಅನ್ಯರ ರೀತಿ ನೋಡಿ ಮನ್ನಿಶಿ ಬಾಲಕಗೆ
ಸಂನ್ಯಾಸ ಕೊಡಿಶ್ಯೊಮ್ಮೆ ಕೃಷ್ಣನ ಪೂಜೆಗಿಟ್ಟ ||೫೪||
ಸಾಂಬನ ಪೆತ್ತವಗೆ ವೊಂಭತ್ತು ನಿತ್ಯಪೂಜೆ
ವೊಬ್ಬನೆ ಮತ್ತು ಮಾಡಿ ತುಂಬಕೀರ್ತಿಯನೈದ ||೫೫||
ಯೋಗಿ ಭೀಮನಕಟ್ಟೆ ರಘುವೀರ ಮುನಿಗೆ
ನಿಗಮಾರ್ಥವ ಪೇಳಿ ಮಗನಂತಿಟ್ಟುಗೊಂಡ ||೫೬ ||
ಕೋಟಿ ತುಲಸೀ ಪುಷ್ಪ ಕೋಟಿನಾಮವ ಪೇಳಿ |
ಕೀಟಕ್ಕೆ ರಾಜ್ಯವನ್ನ ಕೊಟ್ಟವ ಗರ್ಪಿಶಿದ ||೫೭||
ವೇಳೆಗೆ ಅನ್ನಪಾನ ಕೇಳುವರಿಗೆ ಧನ
ಪೇಳುವರಿಗೆ ಜ್ಞಾನ ಕೀಳಾಗದಿತ್ತಪೂರ್ಣ ||೫೮||
ಸಣ್ಣವನೊಬ್ಬರೂಪೀ ಅನ್ನವನುಂಡು ಪಾಪೀ
ಮಾನವಿಲ್ಲೆಂದು ಕೋಪೀ ಕಣ್ಣಕಳದ ತಾಪಿ ||೫೯||
ಮಶಕವಿಲ್ಲದಂತೆ ಶಿಶುವಿಗೆ ಪಾಲಂತೆ |
ಪಾಶವೂ ವಿಲ್ಲದಂತೆ ಪಶುವಿಗೆ ಹುಲ್ಲಂತೆ ||೬೦||
(ಕ್ರಿಮಿಕೀಟಾದಿ ಯಾವ ದೋಷವೂ ಇಲ್ಲದಂತೆ ಎಂದರ್ಥ.)
ದೀಪಕ್ಕೆ ಲೆಖವಿಲ್ಲ | ಧೂಪಕ್ಕೆ ಸಂಖ್ಯ ವಿಲ್ಲಾ
ಮೆಪ್ಪಿಗೆ ಮಾಡಿದ್ದೆಲ್ಲಾ ವೊಪ್ಪುವ ಕೃಷ್ಣ ಬಲ್ಲ ||೬೧||
ನಿಜಗುರು ಶ್ರೀವಾದಿರಾಜರಿಟ್ಟ ಪವನ
ರಾಜಗು ನವವಿಧ ಪೂಜಮಾಡಿದಾನೇಕ ||೬೨||
ಈ ಶ್ವಾಸದೇವರಲ್ಲಿ ವಿಶ್ವಾಸಿ ವಿರಾಗಿಯೂ
ದ್ವೇಷಿಮಾನಿಸ ಕೊಟ್ಟ ವಿಷ ದಕ್ಕಿಶಿಗೊಂಡ ||೬೩||
ಸರ್ವಜ್ಞವಂಶಜಾತ ಭುವನದಲ್ಲೀಗಿದ್ದ
ಕವಿಗಳಷ್ಟರಲ್ಲಿ ಇವನಧಿಕನಾದ ||೬೪||
ಈ ಪರಿ ಪರ್ಯಾಯವ ಭೂಪತಿಯಂತೆ ಮಾಡಿ
ಶ್ರೀಪತಿ ಕೃಷ್ಣರಿಗೆ ತಾಪಸ ನರ್ಪಿಶಿದ ||೬೫||
ತಂತ್ರಸಾರದಿ ಪೇಳ್ವ ಮಂತ್ರ ಯಂತ್ರವ ಕೊಟ್ಟು
ಕ್ಷೇತ್ರತೀರ್ಥವ ಸುತ್ತಿ ಪಾತ್ರರ ಪಾಲಿಶಿದ ||೬೬||
ತಡೆಯು ಯಿಲ್ಲಾದಂತೆ ನಡೆಯು ಹಂಸದಂತೆ
ಮಡಿಯು ಯೋಗಿಯಂತೆ ನುಡಿಯು ಶುಕನಂತೆ ||೬೭||
ಹೆಗಲಿಲ್ಲಿ ದೇವರು ಬಗಲಲ್ಲಿ ಬ್ರಾಹ್ಮರು
ಪೊಗಳುತ ಹರಿಯ ಮಾರ್ಗವ ಸಾಗಿಸುವ ||೬೮||
ಯಿಳಿಯ ಕೂಡದಿಂದ ಘಳಿಗೆ ತಪ್ಪದೊಂದು
ಮಾಳಿಗೆ ಮನೆಯೊಂದೇ | ಘಾಳಿಗೆ ಹಾರಿತಲ್ಲೇ ||೬೯||
ನದೀಗೆ ಪೋಗುವಾಗ ಮದಿವೇ ತೇಜಿನೇರಿ
ಹಾದಿ ತಡೆದ ಮ್ಲೇಂಛ ಬೀದಿಯೊಳ್-ಬಿದ್ದನಲ್ಲೇ ||೭೦||
ಪುತ್ರಾರ್ಥಶ್ವೊಬ್ಬಳಿಗೆ ಯಂತ್ರಾರ್ಥವಿಲ್ಲಾವೆಂದು | ಗುರು |
ತಂತ್ರಾರ್ಥಪೇಳೆ ಪತಿ | ಹೋದ | ಪತ್ರಾರ್ಥ ಬಂತು ನೋಡೆ ||೭೧||
ಕ್ಷುಲ್ಲಕ ತನದಿಂದ ಬಾಲಕ ನಗಿದಾಡೇ ಜಲ್ಲದೊಳ್ವಿದ್ದವಗೇ
ಹಲ್ಲು ಪೋಗಿದ್ದು ಚಿತ್ರ ||೭೨||
ದಂಡ ಕಳದು ಬಂದ ಮುಂಡ ಯತಿಗೆ ಗುರು
ದಂಡವ ಬೇರೆ ಕೊಟ್ಟು ಮಂಡನ ಮಾಡಿಶಿದ ||೭೩||
ಕಟಾಹ ತೊಳೆದಾಳು | ಗುರು | ಮಠಕ್ಕೆ ಬರುವಾಗ
ಕೋಟೆಯ ಬಾಗಲಷ್ಟು ಘಟ್ಟಂತ ಬಿಟ್ಟಿತಲ್ಲೇ ||೭೪||
ದೂರದೇಶದಲ್ಲಿದ್ದ ಗುರುವರನ ಮತ್ತು
ಬ್ಯಾರೆ ದೇಶದ ರಾಜ ದಾರಿಲಿ ಕಂಡರಂತೆ ||೭೫||
(ರಾಜದಾರಿ: ರಾಜಮಾರ್ಗದಲ್ಲಿ ಎಂದರ್ಥ.)
ನಾನಾ ಪುಷ್ಪದಲ್ಲೊಂದು ತನಗಾಗಿ ಬಿತ್ತೆಂದು
ಮನದಿ ನೆನವಾಗ ವನಜಕೈಯ್ಯಲ್ಲಿತ್ತ ||೭೬||
ಪವನಾಂಶಪೂಜಿತ ದೇವರ ಮೂರ್ತಿಗಳ
ಪಾವನಶಿಷ್ಯರಿಗೆ ಸೇವಿಸಲೆಂದು ಕೊಟ್ಟ ||೭೭||
ಭಕ್ತ ಮಾಡುವ ಪೂಜೆ ಯೀತನೆ ಮಾಡಿದಾಗ
ಆತಗೆ ಪುತ್ರ ಪುಟ್ಟಿದಂತೆ ಪತ್ರವೂ ಬಂತೆ ||೭೮||
(ಭಕ್ತ = ಎಡಬಲಸೇವೆಯವನು ಎಂದರ್ಥ.)
ಪುಂಭಾವ ಇರನೊಬ್ಬ | ಇವ | ನಂಭೋಜಕರದಿಂದ
ಅಂಬು ತಳದುಗೊಂಡು ಸಂಭೋಗಶಾಲಿಯಾದ ೭೯||
ವೊಬ್ಬನು ವರ್ಷಭಾಳ ತುಂಬಿದ ಮ್ಯಾಲಿವನ
ಅಂಬುಜ ಪದವನ್ನೂ ನಂಬಿ ಸಪುತ್ರನಾದ ||೮೦||
ಭೂಕಾಂತ ಸೇವಕನ ಯೇಕಾಂತ ಭಕ್ತನೊಬ್ಬ
ಶ್ರೀಮ | ದಾಖ್ಯಾನ ನಿಜತತ್ವ | ಲೋಕಕ್ಕೆ ಮೆಪ್ಪಿಶಿದ||೮೧||
ಮುನಿಯ ಮನೋಭಾವ ಧನಿಕನು ತಿಳಿದು
ದೀನಗೆ ಕನ್ಯಾಧನ ಧಾನ್ಯವ ಬೀರಿದನು ||೮೨||
ಕಾಶಿಘ್-ಹೋಗಿ ಶ್ರೀಮುಷ್ಣವಾಸಿಯು ಗಂಗೆ ತಂದು
ಮೀಸಲಾಗಿಟ್ಟು ಸೋದಾ ವಾಸೀವಗರ್ಪಿಶಿದ ||೮೩||
( ಈ ಶ್ರೀಮುಷ್ಣವಾಸಿ ಸ್ವಾಮಿಗಳಿಂದ ಅಖ್ಯಾನ ಶ್ರವಣ ಮಾಡಿದ್ದ ಆಖ್ಯಾನ ಹೇಳಿಕೊಂಡೇ ಕಾಶಿಯಾತ್ರೆಮಾಡಿ ಗಂಗೆಯನ್ನು ಅಲ್ಲಿಂದ ತಂದು, ಆ ಗಂಗೆಯನ್ನು ಸ್ವಾದಿಯಲ್ಲಿದ್ದ ಸ್ವಾಮಿಗಳ ಸ್ನಾನಕ್ಕೆ ಕೊಟ್ಟು ಅದರಿಂದ ಸ್ವಾಮಿಗಳನ್ನು ಅಭಿಷೇಕಮಾಡಿದನು
ಎಂದರ್ಥ.)
ವೋದು ಬಾರದವಗೆ ಸಾಧಿಶಿ ಗ್ರಂಥ ಪೇಳಿ |
ವೊಂದು ಯಾಮದಿ ಭಾಷ್ಯ ವೋದುವ ಶಕ್ತಿ ಕೊಟ್ಟ ||೮೪||
ಜ್ಞಾನಿ ಕೊಟೊಂದು ರೂಪ್ಯ ಮನೆಯಲ್ಲಿ ಪೂಜಿಸೆ
ಮಾನಿ ತಗಿದ್ದ ಸಾಲ | ವೊಬ್ಬ ಧನಿಯೂ ತೀರಿಶಿದ ||೮೫||
(ಮಾನೀ ತಗಿದ್ದ: ಮನ್ಯಾತಗಿದ್ದ ಆ ಮನೆಯವನಿಗಿದ್ದ)
ವೊಂದು ಸ್ಥಳದಿ ಬಂದು ಮಂದರ ಪಾಲಿಸೆಂದು
ಸುಂದರ ಹನುಮನ್ತ ಛಂದದಿ ಸ್ಥಾಪಿಸಿದ ||೮೬||
(ಮಂದಿರ: ಹನುಮನ)
ಚೋಲದೇಶದಲ್ಯೊಬ್ಬ ಬಾಲನ್ನ ತನ್ನ ಮಠ |
ದಾಳಿನ್ನ ಮಾಡಿಗೊಂಡು ಇಳಯೊಳು ಮೆರದ ||೮೭||
ಗುರುರಾಜ ಹಾಟಕ ವರ ಪಾದ ಪೀಠವ
ಶಿರದಲ್ಲಿಟ್ಟೆನಗೆ ಹರಿತತ್ವ ಪೇಳಿದ ||೮೮||
ಶುದ್ದೀಕರಿಶಿ ಯನ್ನ ಸುಧೀ ಎಂದು ಮಾಡಿದ
ಸಿದ್ಧನುಪಕಾರವ ಯಂದಿಗ್ಯು ನಾ ಮರಿಯೇ ||೮೯||
ಕುಲಗುರುರಾಯನ ಕಾಲ ತೊಳ ಮಣ್ಣ |
ಬಾಲ ಹುಣ್ಣಿನ ಮ್ಯಾಲೆ ಕಲಿಶಿ ಸುಖಿಯಾದ ||೯೦||
ಗುರುವುಂಡ ಶೇಷವ ನರನೊಬ್ಬನುಂಡಾಗ
ದೂರ ಹೋಗಿತು ರೋಗ ದೂರೂವರಿಗೆ ಪಾಪ ||೯೧||
ಅಪೀನರಲ್ಲ ಗುರು ಕೌಪೀನವಗದು ಆ |
ಅಪ್ಪಿನ್ನವಳಗೊಂಡು ಸುಪೀನರಾದರಕ್ಕ ||೯೨||
(ಅಪ್ಪನ್ನವಳಗೊಂಡು: ಒಗೆದ ಜಲವನ್ನು ಪಾನಮಾಡಿ)
ಮಾಯಿಗೋ ಮಾಯುವೊಬ್ಬಾಮ್ಯಾಯಾರ್ಥ ಬಗೆ ಗುರುರಾಯ
ಪೇಳಿದ್ದು ಕೇಳಿ | ವಾದ | ಭಯದಿ ನುತಿಶಿದ ||೯೩||
ಜಯಿಪನಿವನೆಂದು ನ್ಯಾಯಾಧಿಪತಿಯೊಬ್ಬ
ಮಾಯಿ ಮಠದ ಮುಂದೆ | ಧೈರ್ಯದಿ ಮಾನಿಶಿದ ||೯೪||
ಅನ್ಯ ವೆಂಕಟಸೂರಿ ಆನಂದಸೂತ್ರದಲ್ಲಿ ಮುನೀಂದ್ರನು
ಪನ್ಯಾಸ ಸುನೀತಿ ಕೇಳಿ ನಿಂತ ||೯೫||
ಧನಿಯೊಬ್ಬ ಬೇಡಲು ಜ್ಞಾನಿಯ ವಚನವ
ಮಾನಿಶಿ ಅವಕೊಟ್ಟ ಅನ್ನಕ್ಕೆ ಕೈ ಪಿಡಿದ ||೯೬||
ಗುರುರಾಜರಲ್ಲಿದ್ದ ಹರಿದಾಸ ಭೂತನು
ದೂರ ದೇಶದ ವಾರ್ತೆ ಗುರು ಕರ್ಣಾದಿ ಪೇಳ್ವನಂತೇ ||೯೭||
ಕೊಚ್ಚಿಭೂಪನಘವ ಕೊಚ್ಚೇ ಬೇಕಾದ ಸೇವೆ
ಮೆಚ್ಚಿ ಸಾಮ್ರಾಜ್ಯವನು ಪೆಚ್ಚಿಶಿ ಧನಿಯಾದ ||೯೮||
ಮಂಡಲೇಶನ ಸಭೆ ಮಂಡಿಶಿ ವಾದ ಧೀರ
ಲಂಡ ಮಾಯಿಯ ಕಕ್ಷಿಖಂಡಿಸಿ ನುತನಾದ ||೯೯||
ರಾಜಮಂತ್ರಿಗೆ ಗುರುರಾಜನು ಭಾಷ್ಯ ಪೇಳಿ |
ರಾಜಮಾನಿತ ಘಾಳಿರಾಜನಲ್ಲಿದ್ದು ಬಂದ ||೧೦೦||
(ಘಾಳಿರಾಜನೆಂದು ಕೊಚ್ಚಿರಾಜನ ಸಾಮಂತರಾಜನ ಹೆಸರು)
ನಿದ್ರಾದಿ ದೋಷ ದೂರ ಭದ್ರಜನಕ್ಕೆ ತಪ್ತ
ಮುದ್ರೆಯನಿತ್ತು ಜ್ಞಾನಮುದ್ರೆಯ ತೋರಿದನು ||೧೦೧||
ಉನ್ನತವಾಗಿ ದಿವ್ಯ ಚಿನ್ನಮಂಟಪಮಾಡಿ
ಘನ್ನ ದೇವರ ಪೂಜೆ ಮನವುಬ್ಬಿ ಮಾಡಿದ ||೧೦೨||
ಲೆಕ್ಖವಿಲ್ಲದೇ ಗ್ರಂಥ ಲೇಖನಮಾಡಿ ಗುರು
ಬೇಕಾದ ಜನರಿಗೆ ಸಾಕೆಂದನಿಶಿ ಕೊಟ್ಟ ||೧೦೩||
ಕೃಷ್ಣಾದಿ ಮಂತ್ರಗಳ ವರ್ಣಕ್ಕೆ ಲಕ್ಷ ಜಪ
ನಿರ್ಣಯದಿಂದ ಮಾಡಿ ಮುನಿಗಳ ಮ್ಯಾಲಾದ ||೧೦೪||
ಪಿಶಾಚಭೂತಗಳು ಶ್ರೀಶದಾಸನ್ನ ಕಂಡು
ಆಶೆಯ ನೀಗಿ ದೂರ ದೇಶದಲ್ಯೋಡುವದು ||೧೦೫ ||
ಕಲಿಯ ದೂರ ಮಾಡಿ ಆಲಸ್ಯ ಬಿಟ್ಟು ಗುರು
ಮೂಲ ಮೂವತ್ತುಯೇಳು ಯಲ್ಲಿ ಕೇಳಲು ಪೇಳುವ ||೧೦೬||
ವಾದಿರಾಜರ ಪಂಚಬೃಂದಾವನ ಮಹಿಮೆ |
ಯೀ ಧರೆಯೊಳಗಿವ ಬೋಧಿಶಿ ಹರಿವಿದ ||೧೦೭||
ಮತ್ತು ಸುಧಾದಿ ಗ್ರಂಥ ಮುತ್ತು ಪೋಣಿಶಿದಂತೆ |
ನಿತ್ಯ ಪೇಳುವರಲ್ಲಿ | ಯೀತಗೆ ಸರಿಯಾರೇ ||೧೦೮||
ವೊಂದು ಗ್ರಾಮದಲ್ಲಿದ್ದು ಬಂದ ಭಕ್ತರಿಗೆಲ್ಲ
ವೊಂದು ತರವಾರ್ಥಪಾಠ ಬೋಧಾಬ್ಧಿ ಸಾಗಿಶಿದ ||೧೦೯||
ಯೀರೀತಿ ತನ್ನ ಪಾದ ಶೇರಿದ ಜನರಿಗೆ |
ಮೂರೊಂದು ಪುರುಷಾರ್ಥ ಬೀರಿದ ಬಹುಕಾಲ ||೧೧೦||
ವರಾಹತೀರ್ಥನಂಬ ಯರಡ್ಣೇ ಶ್ರೀಪಾದನು
ಪರಸಿದ್ಧಿನೈದಲು | ಹರಿಸಂಕಲ್ಪವೆಂದ ||೧೧೧||
ಯೀಡುಯಿಲ್ಲದೆ ಭೂಮಿಗೊಡೆಯಗೆ ಪೂಜಯ
ಬಿಡದೆ ಮಾಡಿ ಪುಣ್ಯ ಪಡದ ವಯೋವೃದ್ಧ ೧೧೨||
(ಯೀಡು: (ದ್ವಿತೀಯ) ಅನ್ಯಸಹಾಯ ಎಂದರ್ಥ. ಯೀಡು ಇಲ್ಲದೆ ಏಕಾಕಿಯಾಗಿ, ಅಥವಾ ಸಮರಿಲ್ಲದೆ ಅಸದೃಶವಾಗಿ ಎಂದರ್ಥ.)
ಸಡಗರ ಪೂಜಯ ಗುರು | ನಡೆಸಲ್ಲವೆಂತಂದ |
ಮೂಢನು ಪುರೋಭಾಗಿ ಕಡಿಗೆ ದೋಷಭಾಗಿ ||೧೧೩||
ಯಲ್ಲಿ ಬೇಡಿದರಲ್ಲಿ | ನಿಲ್ಲುವ ದಯಾನಿಧಿ | ಕ್ಷುಲ್ಲಕ
ರಲ್ಲಿ ಕಾಲು | ಘಳಿಗೇ ನಿಲ್ಲ ವೊಲ್ಲ || ೧೧೪||
ಯಲ್ಲಾ ದೇಶದಲ್ಲಿದ್ದ ಬಲ್ಲೀದ ಶಿಷ್ಯರಲ್ಲ |
ಸಲ್ಲೋಕಗುರುವಾಕ್ಯ ಸಲ್ಲಿಶಿ ಬಾಳುವರು ||೧೧೫||
ಕಂತುಪಿತನ ನಿತ್ಯ ಭೃತ್ಯರಾಜರ ಕೃಪೆ
ಯಿಂತು ಯೀ ಯತಿಯಲ್ಲಿ ಯಂತಿಹದೋ ತಿಳಿಯೇ ||೧೧೬||
(ಎಂತಿಹದೋ- ಎಷ್ಟಿಹದೋ ಎಂದರ್ಥ)
ದೂರದಲ್ಲಿರೆ ಯತಿ ಬೆರಗಾಗೊಮ್ಮೆ ಸೋದಾ
ಪುರಕ್ಕೆ ಬಂದು ಗುರು ಚರಣ ಗತಿಯೆಂದ ||೧೧೭||
(ನಿಮ್ಮ ಚರಣವೇ ನನಗೆ ಗತಿ, ಮುಂದೇನು ಮಾಡಲಿ ? ಎಂದು ಕೇಳಿದರು ಎಂದರ್ಥ.)
ಶ್ರೀರಾಜರಾಜ್ಞೆಯಂನು ಶಿರದಲ್ಲಿ ಧರಿಶಿ |
ಗುರು ಉಡುಪಿಯಲ್ಲಿ ಸ್ಥಿರವಾಗಿ ನಿಂತನು ||೧೧೮ ||
ಪುತ್ತಿಗೆ ಯತಿವರ ಯೀತಗೆ ಭಕ್ತನಾಗಿ
ಮತ್ತು ಸೇವೆಯಮಾಡಿ ಕೀರ್ತಿ ಪೆಚ್ಚಿಶಿಗೊಂಡ ||೧೧೯||
ಆ ವೇಳೆ ರಘುವೀರ ಭಾವಜ್ಞಯತಿ ಬಂದು |
ಪಾವನ ಗುರುಪಾದ ಸೇವಕನಾದ ನೋಡು ||೧೨೦||
ಮಜ್ಜನಮಾಡಿ ಹೊತ್ತು ಹೆಜ್ಜೆಯ ನೋಡಿ ದೇವ |
ಪೂಜೆ ನಡಿಶಿ ದ್ವಿಜ ಭೋಜನವಾಗಲೆಂದ ||೧೨೧||
ಜನರು ಮೊರೆಯಿಡೆ ಜ್ಞಾನಿ ಭೀಮನಕಟ್ಟೆ
ಮುನಿಯ ನೋಡಿ ಮುಂದೆ ಧನ್ಯರಾಗಲಿ ಯಂದ ||೧೨೨||
ಕಾಷಾಯದಂಡಧರ ಆಷಾಢ ದರ್ಶದಲ್ಲಿ
ದೋಷಿಗೆ ಮರೆಯಾದ ದಾಸಗೆ ತೋರುವನು ||೧೨೩||
ಚಿನ್ನ ಮೂರಣೆ ಯತಿ ಉನ್ನತ ದೇವಪೂಜೆ |ಆ |
ದಿನ್ನಾದಲ್ಯೊಪ್ಪುಗೊಂಡ ಘನ್ನರಾಜರ ಚಿತ್ತ ||೧೨೪||
ಅನುತಾಪಪೂರ್ವಕ ಮುನಿ ವಿಶ್ವಾಧೀಶೇಂದ್ರ | ಆಗ |
ಜನಕ್ಕೆ ಅನ್ನವಸ್ತ್ರಧನವ ಸುರಿಶಿದ ||೧೨೫||
ಈ ಸುದ್ದಿ ಕೇಳಿ ಗುರುಶಿಷ್ಯರು ಅಲ್ಲಿಗಲ್ಲಿ
ವಾಸನಾನ್ನ ದಕ್ಷಿಣೆ ದಾಸರಿಗಿತ್ತರಮ್ಮ ||೧೨೬||
ವಾಗೀಶತೀರ್ಥರಿದ್ದ ಭಾಗದಿ ಕೃಷ್ಣಸಂಗೀ
ಯೋಗಿ ಬೃಂದಾವನದಿ ಈಗ ಸೇವೆಯಗೊಂಬ ||೧೨೭||
ಕನಶಿನಲ್ಯಾದರೂ ಯೆನ್ನ ಕಣ್ಣಿಗೆ ಗುರು
ಅನುದಿನ ತೋರಲಿ ಯೆನ್ನುತ ಬೇಡಿಕೊಂಬೆ ||೧೨೮||
ಆಡಿದ್ದು ವೇದಮಂತ್ರ | ಗುರು | ಮಾಡಿದ್ದು ಪುಣ್ಯಕರ್ಮ |
ನೋಡಿದ್ದು ದಯಾವೃಷ್ಟಿ ನೀಡಿದ್ದು ವರಗಳು || ೧೨೯||
ಪಾಂಡುರಂಗನ್ನ ಸದಾ ಕೂಡಿದ್ದ ಪಾಂಡವರನ್ನ
ಪುಂಡರು ಕಂಡಮಾತ ನಾಡಲೇನಾಗಿತಮ್ಮ ||೧೩೦||
ಯಿನ್ನಿಂತ ಗುರುಗೆಣೆ ಯಿನ್ನೊಬ್ಬನಾರು ಕಾಣೆ |
ಉನ್ನಂತವರನಾಣೆ ಯಿನ್ನಾರು ತಿಳಿ ಜಾಣೆ ||೧೩೧||
ಯಷ್ಟೋ ಮಹಿಮೆಯೀತ ಗುಂಟವಾದರೂ ತಿಳಿ |
ದಷ್ಟು ಪೇಳುವುದಕ್ಕೆ ದುಷ್ಟರು ಭಾಳವಷ್ಟೆ||೧೩೨||
ಯಿಲ್ಲಿ ಪೇಳಿದ ಕಥೆ ಅಲ್ಯಲ್ಲಿರುವ ಜನ
ರೆಲ್ಲಾರು ಬಲ್ಲರಿದು ಸುಳ್ಳಲ್ಲ ನಿಜ ತಂಗಿ ||೧೩೩||
ನಿತ್ಯದಲ್ಲಿ ಪದವ ಪ್ರಾತಃ ಕಾಲದಲೆದ್ದು
ಚಿತ್ತವಿಟ್ಟು ಪಠಿಸೆ ಚಿತ್ತಜನೈಯ್ಯ ಕಾವ ||೧೩೪||
ಯೀತಗೆ ಪಾದಸೇವಿ | ಸೇತುಮಾಧವನೆಂಬ | ಭಕ್ತ
ಮಾಡಿದ ಕೃತಿ | ಕ್ಷಿತಿಯೊಳ್ ಮೆರೆಯಲಿ ||೧೩೫||
ಸುಜನರಿಗೋಸುಗ ವಿಜಯ ಹಯಗ್ರೀವ
ಯೀ ಜಗದ್ಗುರು ಗುಣ | ರಾಜೀಯ್ಯ ನುಡಿಶಿದ ||೧೩೬ ||
ಇತಿ ಶ್ರೀಗುರುಲೀಲಾವಿಲಾಸಃ ಸಂಪೂರ್ಣಮ್ ||
ಶ್ರೀಸೇತೂಮಾಧವಾಚಾರ್ಯಾಂತರ್ಗತ ವಿಶ್ವಪ್ರಿಯತೀರ್ಥಗುರ್ವಂತರ್ಗತ ವಾದಿರಾಜಾಂತರ್ಗತ ಮಧ್ವೇಶಾರ್ಪಣಮಸ್ತು ||
SrIgururAjAyamaMgalaM ||
[oMdu oMdu SlOkakke oMdu oMdu caraNA eMdu aBiprAya. oMdu caraNakke nAlakkupAda. oMdu pAdakke prAyENa ELu akShara EtadatiriktavAgi eraDu rEKeyalli yiddAkSharagaLu kosarU eMta aniSikOtade. hAge ucitavAda kosaru madhyemadhye sErisikotakkaddu. pratipAdakkU dvitIyAkShara prAsaveMba nEmAvi- ruttade.
||rAga pUri kalyANi || AditALa ||
mAnisirOlla mAnisa viThalA eMba dAsara padadaMte varNavuMTu.
lakShmISOBAne dhATiyiMdallu hELabahudu. innu AnaMdaBairavi modalAda rAgagaLiMdalU hattu caraNakke oMdu rAga prakAra hELuttAre. ucita prakAra Aj~jAkoTTu pracayamADisOdakku SrISrIgaLavaru svataMtraru iddAre]
atha SrI(vRuMdAvanAcArya) gurulIlAvilAsa: prArabhyatE ||
(OM)|| kELE ivana lIle | bAlE pELuvanalle || pa ||
sallOka gurulIle | kellAvu kELi balle
yallAvu varalOle | ballAra pUrva yale || a. pa||
vAdirAjara priyA | naMda tIrthara Suddha
hRudayadallidda SrI | sadanagE vaMdipE || 1 ||
taulava maMDaladi kulada mahIsura | nilayAdi janiSi |
kAlAdi dvijanAda ||2||
vEdava vipranalli vOdida braMhacAri |
SuddhakAvyavanOdi | sudhiyAda vinOdi || 3 ||
viSvESapUjagyAgi viSvESatIrthariMda |
viSvapriyanu yeMdu | viSvAsi yatiyAda ||4 ||
Siradalli nirmAlya koraLalyakShamAle |
u(da)radi padmagaMdha | karadi japasara || 5 ||
(uradi: vakShapradESadalli)
kaTisUtralaMgOTi | SATi sudaMDa JAri
vaddigE tA dhariSi | paTu haMsa tOrida ||6||
dinakaranOpAdi maNeyalli poLeva | muddu | cinna
yatiya kaMDu | jana beragAgitu ||7||
(muddu eMba kosaru)
yellArivana pAda jalajava toLidu | A |
jalava Siradalli taLadukoMDarAga ||8||
gurugaLiTTAj~jeya | SirabAgi dharishi |
varagurusEveya pUraiSidanudina ||9||
vRuddha paramaguru | Suddhasannidhiyalli |
iddu kelavu kAla | vOdida madhvaSAstra||10||
Bakti viraktiyalli | yItage sama bAla |
yatiyU villAveMdu | kIrtiya beLagida || 11 ||
anaSana nEmadi mauniyyAgiddu mattu
annava svalpavuMDu | janakke puNyAvitta ||12||
vRuddhara vaSanAgi | siddhanu voMdu BAri
muddu kRuShNa pAda modalu pUjishida ||13||
yeddu sOdEge pOgi | rAja | vRuMdAvanada muMde
vOdida givagartha Sabdavu kELitaMte ||14||
dESadESadi baMda dAsa janarigellA |
SrISana mahimOpadESava mADidanu ||15||
mUrulOkavanALva surEMdranaMte tapO |
varava mADi muni dhIraneMdaniSida ||16||
dhavaLagaMgA tIra trivikramanutsava avabhRutha naDiSi |
divaja naMtoppida ||17||
guruvAdirAjara varadi vasadi BUsurarigennavastra
suriSida nUdAra ||18||
nityadalyannadAna mattu naDavudakke suttU BUmi
ya vRuddhi yItamADida dhanya ||19||
BUmiya sIme tappi kAmiSi baMdavara varmAsi ca
rmadhAri stOma tOrODishida ||20||
paranigrahadalli gururAjariTTa SrI | nArAyaNArya
BUta nirutAvihAnilli ||21||
duruLamAyiBikShu barada pUrvapakSha sarinODi svapakSha
baraSida nI dakSha ||22||
paMca | bRuMdAvanakke guruvaMdana mADuvAga
voMd-hiDi maMtrAkShate baMdu Siradi bittE ||23||
gururAjara kara sarasija saMjAta varada
vEdavEdya caraNakkeragida ||24||
vaMdiSi gurudvaya pAdava siddhanAgi baMdanu
uDupige yAdava pUjagyAgi ||25||
paTTasiMhAsanadi iTTu rAjara pAdapITha BaratanaMte |
diTTasEvakanAda ||26||
kOlaSrIvAjimuKabAlakRuShNarapUje |
kAlatappade mADi bALida mahArAya ||27||
vIkShisi rAja koTTa lakShadravyava guru |
lakShyamADade dharma | pakShakke surebiTTa||28||
saraLa BuvanEMdra guru modalellArU
dharayoLivageNe yArillAveMdarAga ||29||
badarIvAsakoTTa SuddhaSileya madhva | muni |
madhyavATadalliTTa siddage pUjegAgi ||30||
A divyasthaLa guru vAdirAjage vaSavAda |
kAraNa alli sAdara niva baMda ||31||
mElAgi harirUpa pAlita saMpuTadi
SrIlOlavEdESanna kAlaj~ja bEDigoMDa ||32||
vAsavIsutavEdavyAsanu dayamADi
dAsayatiya BaktipASakke vaLagAda ||33||
madhyavATamaThada bAdarAyaNaguru
SuddhapUjege mecci sOdAmaThakke baMda ||34||
maganigAgamada | jagava taMda vEda
BAga mADida muvvA | rIga kUDida BAgya ||35||
(Agamada: AgamadAnamADidavaneMdartha. ‘dadAtIti da:’)
baMda dEvara divyavEda maMgaLa vAdya
madhura paMcAmRutadiMda pUjipa nitya ||36||
navaBakShaBOjyava navamADiSi
prati divasadallyU vyAsasEvakaniva suKi ||37||
hiMdakke vyAsayOgi taMdidda vyAsapUje
madhyada maThadallyU yaMdigU naDiSida ||38||
mOsa mADidaneMba kAsubALadavara
yEsu mAtugaLannu bisADIDADidUra ||39||
(bisADu,IDADi dUra eMdu padacCEda)
avadhUtaprAyanu avanIlIvaneMdu
BuvanESarANiya Bavanakke karada ||40||
praBuvaranEkatra [1] uBayasamasthAna
SuBa vyAsapUjeya | saMBrama mADisida ||41||
(1. prAyaSaH uttarAdimaTha mattu sOde maTha hIge athava, subrahmaNyamaTha mattu sOdemaTha hIge eraDu sAMsthAnagaLa vAravuLLa vEdavyAsadEvarannu sErisi ibbaru svAmigaLannu kareyisi oMdu sthaLadalli rAjanu pUje mADisidanu eMdartha, idara aitihya vicArisi tiLiyabEku. ‘praBuvaranu + Ekatra’ eMdu padacCEda )
BUmipatiyU nODe kAmisOmakoTTu
nEmAdi vyAsapUjE I muni mADaleMda ||42||
(stOma: sainyavannu eMdartha.)
bEDidavaradage | guru | mADida pUje kaMDu
kADida janarella | bIDAdaraMbajaya || 43||
(varadage: vyAsarige eMdartha. bIDADidaru=ASrayakoTTaru. aMbajaya eMdare ele amma jayAdEvi eMbudu saMbuddhi, kathe heMgasige hELiddu.)
BaktisAraj~ja sUri tatiyA kUDi vyAsa
nutiyA mADi nitya suttidESadi baMda ||44||
vEdavyAsara mUrti sAdhiSitaMdu
naMdakaMdana kUDa iTTu naMdadi pUjiSida ||45||
vEdaj~jajanayuta vEdAMti vipraniMda
shuddhamADishi yAga yAdavagarpiSida ||46||
bRuMdAvanAKyAna diMdOkta cihnadiMda
bRuMdAvanAryanivaneMdu KyAti petta ||47||
hattItu maThaveMdu dUtaru pELe guru
yettida hastanODi attalAgitu agni ||49||
hariya nirmAlyava | dUri bisATavagE
dUrapOdanu nEtradAriya biTTu viSva ||49||
kATava mADuvara maTTumADuva Sakti
koTTu ivana kUDa GOTAsya meredanu ||50||
cittaSuddhiyuvuLLa uttama vRuddhanige ittanu
samastAna mattarEnaMdarEnE ||51||
guptadi kRuShNapUje Atagu koTTu guru
BaktavaSyanu yaMta stutiya vaLagoMDa ||52||
SrIviShNutIrtha vRuddha suvaMSadalli jAta
SrIvAdirAjapaTTada vagidaShTU yukta ||53||
anyara rIti nODi mannishi bAlakage
saMnyAsa koDishyomme kRuShNana pUjegiTTa ||54||
sAMbana pettavage voMBattu nityapUje
vobbane mattu mADi tuMbakIrtiyanaida ||55||
yOgi BImanakaTTe raGuvIra munige
nigamArthava pELi maganaMtiTTugoMDa ||56 ||
kOTi tulasI puShpa kOTinAmava pELi |
kITakke rAjyavanna koTTava garpiSida ||57||
vELege annapAna kELuvarige dhana
pELuvarige j~jAna kILAgadittapUrNa ||58||
saNNavanobbarUpI annavanuMDu pApI
mAnavilleMdu kOpI kaNNakaLada tApi ||59||
maSakavilladaMte SiSuvige pAlaMte |
pASavU villadaMte paSuvige hullaMte ||60||
(krimikITAdi yAva dOShavU illadaMte eMdartha.)
dIpakke leKavilla | dhUpakke saMKya villA
meppige mADiddellA voppuva kRuShNa balla ||61||
nijaguru SrIvAdirAjariTTa pavana
rAjagu navavidha pUjamADidAnEka ||62||
I SvAsadEvaralli viSvAsi virAgiyU
dvEShimAnisa koTTa viSha dakkiSigoMDa ||63||
sarvaj~javaMSajAta BuvanadallIgidda
kavigaLaShTaralli ivanadhikanAda ||64||
I pari paryAyava BUpatiyaMte mADi
SrIpati kRuShNarige tApasa narpiSida ||65||
taMtrasAradi pELva maMtra yaMtrava koTTu
kShEtratIrthava sutti pAtrara pAliSida ||66||
taDeyu yillAdaMte naDeyu haMsadaMte
maDiyu yOgiyaMte nuDiyu SukanaMte ||67||
hegalilli dEvaru bagalalli brAhmaru
pogaLuta hariya mArgava sAgisuva ||68||
yiLiya kUDadiMda GaLige tappadoMdu
mALige maneyoMdE | GALige hAritallE ||69||
nadIge pOguvAga madivE tEjinEri
hAdi taDeda mlEMCa bIdiyoL-biddanallE ||70||
putrArthashvobbaLige yaMtrArthavillAveMdu | guru |
taMtrArthapELe pati | hOda | patrArtha baMtu nODe ||71||
kShullaka tanadiMda bAlaka nagidADE jalladoLviddavagE
hallu pOgiddu citra ||72||
daMDa kaLadu baMda muMDa yatige guru
daMDava bEre koTTu maMDana mADishida ||73||
kaTAha toLedALu | guru | maThakke baruvAga
kOTeya bAgalaShTu GaTTaMta biTTitallE ||74||
dUradESadallidda guruvarana mattu
byAre dESada rAja dArili kaMDaraMte ||75||
(rAjadAri: rAjamArgadalli eMdartha.)
nAnA puShpadalloMdu tanagAgi bitteMdu
manadi nenavAga vanajakaiyyallitta ||76||
pavanAMSapUjita dEvara mUrtigaLa
pAvanaSiShyarige sEvisaleMdu koTTa ||77||
Bakta mADuva pUje yItane mADidAga
Atage putra puTTidaMte patravU baMte ||78||
(Bakta = eDabalasEveyavanu eMdartha.)
puMBAva iranobba | iva | naMBOjakaradiMda
aMbu taLadugoMDu saMBOgaSAliyAda 79||
vobbanu varShaBALa tuMbida myAlivana
aMbuja padavannU naMbi saputranAda ||80||
BUkAMta sEvakana yEkAMta Baktanobba
SrIma | dAKyAna nijatatva | lOkakke meppiSida||81||
muniya manOBAva dhanikanu tiLidu
dInage kanyAdhana dhAnyava bIridanu ||82||
kASiG-hOgi SrImuShNavAsiyu gaMge taMdu
mIsalAgiTTu sOdA vAsIvagarpiSida ||83||
( I SrImuShNavAsi svAmigaLiMda aKyAna SravaNa mADidda AKyAna hELikoMDE kASiyAtremADi gaMgeyannu alliMda taMdu, A gaMgeyannu svAdiyallidda svAmigaLa snAnakke koTTu adariMda svAmigaLannu aBiShEkamADidanu
eMdartha.)
vOdu bAradavage sAdhiSi graMtha pELi |
voMdu yAmadi BAShya vOduva Sakti koTTa ||84||
j~jAni koToMdu rUpya maneyalli pUjise
mAni tagidda sAla | vobba dhaniyU tIriSida ||85||
(mAnI tagidda: manyAtagidda A maneyavanigidda)
voMdu sthaLadi baMdu maMdara pAliseMdu
suMdara hanumanta CaMdadi sthApisida ||86||
(maMdira: hanumana)
cOladESadalyobba bAlanna tanna maTha |
dALinna mADigoMDu iLayoLu merada ||87||
gururAja hATaka vara pAda pIThava
SiradalliTTenage haritatva pELida ||88||
SuddIkariSi yanna sudhI eMdu mADida
siddhanupakArava yaMdigyu nA mariyE ||89||
kulagururAyana kAla toLa maNNa |
bAla huNNina myAle kaliSi suKiyAda ||90||
guruvuMDa SEShava naranobbanuMDAga
dUra hOgitu rOga dUrUvarige pApa ||91||
apInaralla guru kaupInavagadu A |
appinnavaLagoMDu supInarAdarakka ||92||
(appannavaLagoMDu: ogeda jalavannu pAnamADi)
mAyigO mAyuvobbAmyAyArtha bage gururAya
pELiddu kELi | vAda | Bayadi nutiSida ||93||
jayipanivaneMdu nyAyAdhipatiyobba
mAyi maThada muMde | dhairyadi mAniSida ||94||
anya veMkaTasUri AnaMdasUtradalli munIMdranu
panyAsa sunIti kELi niMta ||95||
dhaniyobba bEDalu j~jAniya vacanava
mAniSi avakoTTa annakke kai piDida ||96||
gururAjarallidda haridAsa BUtanu
dUra dESada vArte guru karNAdi pELvanaMtE ||97||
kocciBUpanaGava koccE bEkAda sEve
mecci sAmrAjyavanu pecciSi dhaniyAda ||98||
maMDalESana saBe maMDiSi vAda dhIra
laMDa mAyiya kakShiKaMDisi nutanAda ||99||
rAjamaMtrige gururAjanu BAShya pELi |
rAjamAnita GALirAjanalliddu baMda ||100||
(GALirAjaneMdu koccirAjana sAmaMtarAjana hesaru)
nidrAdi dOSha dUra Badrajanakke tapta
mudreyanittu j~jAnamudreya tOridanu ||101||
unnatavAgi divya cinnamaMTapamADi
Ganna dEvara pUje manavubbi mADida ||102||
lekkhavilladE graMtha lEKanamADi guru
bEkAda janarige sAkeMdaniSi koTTa ||103||
kRuShNAdi maMtragaLa varNakke lakSha japa
nirNayadiMda mADi munigaLa myAlAda ||104||
piSAcaBUtagaLu SrISadAsanna kaMDu
ASeya nIgi dUra dESadalyODuvadu ||105 ||
kaliya dUra mADi Alasya biTTu guru
mUla mUvattuyELu yalli kELalu pELuva ||106||
vAdirAjara paMcabRuMdAvana mahime |
yI dhareyoLagiva bOdhiSi harivida ||107||
mattu sudhAdi graMtha muttu pONiSidaMte |
nitya pELuvaralli | yItage sariyArE ||108||
voMdu grAmadalliddu baMda Baktarigella
voMdu taravArthapATha bOdhAbdhi sAgishida ||109||
yIrIti tanna pAda shErida janarige |
mUroMdu puruShArtha bIrida bahukAla ||110||
varAhatIrthanaMba yaraDNE SrIpAdanu
parasiddhinaidalu | harisaMkalpaveMda ||111||
yIDuyillade BUmigoDeyage pUjaya
biDade mADi puNya paDada vayOvRuddha 112||
(yIDu: (dvitIya) anyasahAya eMdartha. yIDu illade EkAkiyAgi, athavA samarillade asadRuSavAgi eMdartha.)
saDagara pUjaya guru | naDesallaveMtaMda |
mUDhanu purOBAgi kaDige dOShaBAgi ||113||
yalli bEDidaralli | nilluva dayAnidhi | kShullaka
ralli kAlu | GaLigE nilla volla || 114||
yallA dESadallidda ballIda SiShyaralla |
sallOkaguruvAkya sallishi bALuvaru ||115||
kaMtupitana nitya bhRutyarAjara kRupe
yiMtu yI yatiyalli yaMtihadO tiLiyE ||116||
(eMtihadO- eShTihadO eMdartha)
dUradallire yati beragAgomme sOdA
purakke baMdu guru caraNa gatiyeMda ||117||
(nimma caraNavE nanage gati, muMdEnu mADali ? eMdu kELidaru eMdartha.)
SrIrAjarAj~jeyaMnu Siradalli dhariSi |
guru uDupiyalli sthiravAgi niMtanu ||118 ||
puttige yativara yItage BaktanAgi
mattu sEveyamADi kIrti pecciSigoMDa ||119||
A vELe raGuvIra BAvaj~jayati baMdu |
pAvana gurupAda sEvakanAda nODu ||120||
majjanamADi hottu hejjeya nODi dEva |
pUje naDiSi dvija BOjanavAgaleMda ||121||
janaru moreyiDe j~jAni BImanakaTTe
muniya nODi muMde dhanyarAgali yaMda ||122||
kAShAyadaMDadhara AShADha darSadalli
dOShige mareyAda dAsage tOruvanu ||123||
cinna mUraNe yati unnata dEvapUje |A |
dinnAdalyoppugoMDa GannarAjara citta ||124||
anutApapUrvaka muni viSvAdhISEMdra | Aga |
janakke annavastradhanava suriSida ||125||
I suddi kELi guruSiShyaru alligalli
vAsanAnna dakShiNe dAsarigittaramma ||126||
vAgISatIrtharidda BAgadi kRuShNasaMgI
yOgi bRuMdAvanadi Iga sEveyagoMba ||127||
kanaSinalyAdarU yenna kaNNige guru
anudina tOrali yennuta bEDikoMbe ||128||
ADiddu vEdamaMtra | guru | mADiddu puNyakarma |
nODiddu dayAvRuShTi nIDiddu varagaLu || 129||
pAMDuraMganna sadA kUDidda pAMDavaranna
puMDaru kaMDamAta nADalEnAgitamma ||130||
yinniMta gurugeNe yinnobbanAru kANe |
unnaMtavaranANe yinnAru tiLi jANe ||131||
yaShTO mahimeyIta guMTavAdarU tiLi |
daShTu pELuvudakke duShTaru BALavaShTe||132||
yilli pELida kathe alyalliruva jana
rellAru ballaridu suLLalla nija taMgi ||133||
nityadalli padava prAtaH kAladaleddu
cittaviTTu paThise cittajanaiyya kAva ||134||
yItage pAdasEvi | sEtumAdhavaneMba | Bakta
mADida kRuti | kShitiyoL mereyali ||135||
sujanarigOsuga vijaya hayagrIva
yI jagadguru guNa | rAjIyya nuDiSida ||136 ||
iti SrIgurulIlAvilAsaH saMpUrNam ||
SrIsEtUmAdhavAcAryAMtargata viSvapriyatIrthagurvaMtargata vAdirAjAMtargata madhvEshArpaNamastu ||
Leave a Reply