Composer : Shri Pradyumna Tirtharu on Shri Rayaru
ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ
ಧ್ಯಾನಿಸಲೊಲ್ಲದೂ [ಪ]
ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನು
ನೀನೆ ದಯಮಾಡೋ ಗುರು ರಾಘವೇಂದ್ರ [ಅ.ಪ]
ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ ಮಾಡಿ
ಪಾರ್ಥಸಾರಥಿ ಮಾರ್ಗಕ್~ ಹೊರ್ತಾದೆ ನಾ
ಮರ್ತೆ ನಿಜಸೌಖ್ಯವನು ಬೆರ್ತೆ ಅನ್ಯರ ಸತಿಯ
ಸಾರ್ಥಕಾಗದೇ ಹೋಯಿತೆನ್ನ ಆಯು [೧]
ಮಾಂಸದಾಸೆಗೆ ಮೀನು ಹಿಂಸೆಪಡುತಿರುವಂತೆ
ಸಂಸಾರದಲಿ ಸಿಕ್ಕೆ ಕಂಸಾರಿ ಪ್ರಿಯ
ಹಂಸರೊಂದಿತ ಎನ್ನ ಸಂಶಯವ ಪರಿಹರಿಸಿ
ಸಂಶಾಂತ ಮತಿ ನೀಡೋ ಸಂಶಯ ದೂರನೇ [೨]
ಎಷ್ಟು ಪೇಳಲಿ ಎನ್ನ ದುಷ್ಟ ಕರ್ಮಗಳನ್ನು
ಜೇಷ್ಟ ದೂತನೆ ಎನ್ನ ಕಷ್ಟ ಬಿಡಿಸೋ
ವೃಷ್ಣಿ ಸಖಪ್ರಿಯ ಮನ ತೃಷ್ಣಗಳನೆ ಕಳೆದು
ಶ್ರೇಷ್ಠಾ ನರಹರಿ ಚರಣಾಭೀಷ್ಟವ ನೀಡೋ [೩]
nAnEnu mADalayya ennaya mana ninna
dhyAnisalolladU [pa]
SrInivAsana daya kANuvOdhhyAMginnu
nIne dayamADO guru rAGavEMdra [a.pa]
kIrtisade ninna vyartha ciMteya mADi
pArthasArathi mArgak~ hortAde nA
marte nijasauKyavanu berte anyara satiya
sArthakAgadE hOyitenna Ayu [1]
mAMsadAsege mInu hiMsepaDutiruvaMte
saMsAradali sikke kaMsAri priya
haMsaroMdita enna saMSayava pariharisi
saMSAMta mati nIDO saMSaya dUranE [2]
eShTu pELali enna duShTa karmagaLannu
jEShTa dUtane enna kaShTa biDisO
vRuShNi saKapriya mana tRuShNagaLane kaLedu
SrEShThA narahari caraNABIShTava nIDO [3]
Leave a Reply