Composer : Shri Vijayeendra Tirtharu
Shri Vijayeendra Tirtharu – 1517 – 1614
Vrundavana: Kumbakona
Aradhana: Jyesta Krishna Trayodashi
ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |
भक्तानां मानसांभोजभानवे कामधेनवे ।
नमतां कल्पतरवे जयींद्रगुरवे नम: ।
ಚಂದಿರ ರಾಮನ ರಾಣಿ ಸೀತೆಯ ಮುಖ
ದಂದಕೆ ಸೋತು ಲಜ್ಜೆಯಿಂದ ರಾತ್ರಿಚರನಾದ [ಪ]
ಭಾರತಿ ಮೊದಲಾದ ಸತಿಯರಕ್ಷಿ ಕುಮುದ
ಕೋರಿಕೆ ಬಿರಿಯೆ ರಾಜಿತ ಚಕೋರ
ಪಾರವಾರವೆಂಬ ಸುರನಿಕರ ನಲಿಯೆ
ವಾರಿಜ ಮುಖಿಯ ಆನಂದ ಶರಧಿಯುಕ್ಕೆ [೧]
ನೊಸಲಲೊಪ್ಪುವ ಕಸ್ತೂರಿ ತಿಲಕ ಕಲಂಕ
ಹೊಸ ಮುತ್ತಿನೋಲೆ ವರಹಾರದ
ಕುಸುಮ ತಾರೆಗಳಾಗೆ ಆ ಕಿರಣ ಲೋಕಂಗಳು
ನಸುನಗು ಬೆಳದಿಂಗಳಾಗೆ ನಗೆಗೀಡಾಯಿತೆಂದು [೨]
ನಂದ ಮೂರುತಿ ವಿಜಯೀಂದ್ರಸ್ವಾಮಿ ರಾಮ
ಚಂದ್ರ ಸೀತೆಯ ಮುಖದೊಳು ಮುಖವ
ಸಂದಿಸೆ ಉಪರಾಗದಿ ಪೋಲ್ವ ಈಶ್ವರ ಹಾರ
ಮಂದಾಕಿನಿ ಯಮುನ ಎಂದಾಗ ಅವರು ಮೀಯೆ [೩]
caMdira rAmana rANi sIteya muKa
daMdake sOtu lajjeyiMda rAtricaranAda [pa]
BArati modalAda satiyarakShi kumuda
kOrike biriye rAjita cakOra
pAravAraveMba suranikara naliye
vArija muKiya AnaMda Saradhiyukke [1]
nosalaloppuva kastUri tilaka kalaMka
hosa muttinOle varahArada
kusuma tAregaLAge A kiraNa lOkaMgaLu
nasunagu beLadiMgaLAge nagegIDAyiteMdu [2]
naMda mUruti vijayIMdrasvAmi rAma
caMdra sIteya muKadoLu muKava
saMdise uparAgadi pOlva ISvara hAra
maMdAkini yamuna eMdAga avaru mIye [3]
Leave a Reply