Nambi bhajisu manava

Composer : Shri Lakumeesha

By Smt.Shubhalakshmi Rao

Shri Vijayeendra Tirtharu – 1517 – 1614
Vrundavana: Kumbakona
Aradhana: Jyesta Krishna Trayodashi
ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |
भक्तानां मानसांभोजभानवे कामधेनवे ।
नमतां कल्पतरवे जयींद्रगुरवे नम: ।


ನಂಬಿ ಭಜಿಸು ಮಾನವಾ ಶ್ರೀ ವಿಜಯೀಂದ್ರರ |
ಅಂಬುಜಾದ್ವಯ ಪಾದವಾ |ಪ|

ತುಂಬಿ ಮತಿಮತ ಶಾಸ್ತ್ರ | ಹಂಬಲ ಸತತ ಯಿತ್ತು |
ಕಂಬುಕಂಧರನ ತೋರಿ | ಕುಂಭಕೋಣದಿ ಮೆರೆವ |ಅ.ಪ|

ಸಿರಿ ವಿಠಲಾರ್ಯನೆನಿಸಿ | ಗುರುಗಳ ಸೇವಿಸಿ |
ಮರುತ ಶಾಸ್ತ್ರವ ಗ್ರಹಿಸಿ | ಗುರು ವ್ಯಾಸರಾಜ ಯತಿಗಳ ||
ಕರುಣೆಯ ಪೊಂದುತ – ಆಶ್ರಮವ ವಹಿಸುತ |
ಗುರು ವಿಷ್ಣುತೀರ್ಥರೆಂದು | ಧರೆಯೊಳು ಮೆರೆದವರ |೧|

ಸುರೇಂದ್ರ ತೀರ್ಥರಿಗೆ ಇವರನು ಒಪ್ಪಿಸಿ |
ಕರ ದಂಡ ಪಲ್ಲಟ ಗೈದು – ವಿಜಯೀಂದ್ರ ನಾಮ ವಿಡಲಾ |
ಭರದೀ ಘಟ ಕೋಣದಿ | ದುರುಳಾ ಎಮ್ಮೆ ಬಸವನಾ |
ಗರುವವ ಮುರಿಯುತ | ಧರೆಯೊಳು ಮೆರೆದವರ |೨|

ದುರ್ವಾದಿ ಅಪ್ಪಯ್ಯ ದೀಕ್ಷಿತನ – ಬಾರಿಬಾರಿಗೆ ಸೋಲಿಸಿ |
ನೂರಾನಾಲ್ಕು ಗ್ರಂಥ ರಚಿಸಿ |ನಾರೆ ಬಾಳೆಲೆ ನಡೆದನು |
ಧೀರ ಸುಧೀಂದ್ರರಿಗೆ – ಆಶ್ರಮ ನೀಡುತ |
ಶ್ರೀ ರಾಮ ಲಕುಮೀಶ – ಮೂರುತಿ ಇತ್ತವರ |೩|


naMbi Bajisu mAnavA SrI vijayIMdrara |
aMbujAdvaya pAdavA |pa|

tuMbi matimata SAstra | haMbala satata yittu |
kaMbukaMdharana tOri | kuMBakONadi mereva |a.pa|

siri viThalAryanenisi | gurugaLa sEvisi |
maruta SAstrava grahisi | guru vyAsarAja yatigaLa ||
karuNeya poMduta – ASramava vahisuta |
guru viShNutIrthareMdu | dhareyoLu meredavara |1|

surEMdra tIrtharige ivaranu oppisi |
kara daMDa pallaTa gaidu – vijayIMdra nAma viDalA |
BaradI GaTa kONadi | duruLA emme basavanA |
garuvava muriyuta | dhareyoLu meredavara |2|

durvAdi appayya dIkShitana – bAribArige sOlisi |
nUrAnAlku graMtha racisi |nAre bALele naDedanu |
dhIra sudhIMdrarige – ASrama nIDuta |
SrI rAma lakumISa – mUruti ittavara |3|

Leave a Reply

Your email address will not be published. Required fields are marked *

You might also like

error: Content is protected !!