Vijayeendra Muneendra

Composer : Shri Purandara dasaru

By Smt.Shubhalakshmi Rao

Shri Vijayeendra Tirtharu – 1517 – 1614
Vrundavana: Kumbakona
Aradhana: Jyesta Krishna Trayodashi
ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |
भक्तानां मानसांभोजभानवे कामधेनवे ।
नमतां कल्पतरवे जयींद्रगुरवे नम: ।


ವಿಜಯೀಂದ್ರ ಮುನೀಂದ್ರರೆಂಬಾಶ್ಚರ್ಯದ
ಗಜೇಂದ್ರ ಬಂದದೆ ಸುಜನರು ನೋಡ ಬನ್ನಿ [ಪ]

ಕಲುಷವೆಂಬ ಪಂಕವ ನೀಡ್ಯಾಡಿ ವಿ
ಮಲ ಹರಿ ಪದ ತೀರ್ಥದ ಜಲಪಾನ ಮಾಡಿ
ಸಲೆ ಗುರು ಮಧ್ವಮತಾಂಬುಧಿಯೊಳು
ನಲಿ ನಲಿದು ಕುಣಿದಾಡುತಲಿ [೧]

ರಮೇಶನ ಧ್ಯಾನವೆಂಬ ಮದವೇರಿ
ಮಮತೆಯೆಂಬ ಕದಳಿ ಕಿತ್ತಾಡಿ
ವಿಮಲ ಶ್ರೀಹರಿ ಪದ ರಜ ಶಿರದಿ ಧರಿಸಿ
ಕುಮತಗಳೆಂಬ ತರುಗಳ ಮುರಿಯುತಲಿ [೨]

ಗುರು ಸುರೇಂದ್ರತೀರಥರೆಂಬ
ವರ ಮಾವಟಿಗನ ಆಜ್ಞೆಯೊಳಿದ್ದು
ಗುರು ಪುರಂದರವಿಠಲನ ಭಕ್ತಿಯೆಂಬ
ಸರಪಣಿಯೊಳು ನಲಿ ನಲಿದಾಡುತಲಿ [೩]


vijayIMdra munIMdrareMbAScaryada
gajEMdra baMdade sujanaru nODa banni [pa]

kaluShaveMba paMkava nIDyADi vi
mala hari pada tIrthada jalapAna mADi
sale guru madhvamatAMbudhiyoLu
nali nalidu kuNidADutali [1]

ramESana dhyAnaveMba madavEri
mamateyeMba kadaLi kittADi
vimala SrIhari pada raja Siradi dharisi
kumatagaLeMba tarugaLa muriyutali [2]

guru surEMdratIrathareMba
vara mAvaTigana Aj~jeyoLiddu
guru puraMdaraviThalana BaktiyeMba
sarapaNiyoLu nali nalidADutali [3]

Leave a Reply

Your email address will not be published. Required fields are marked *

You might also like

error: Content is protected !!