Composer : Shri Kamalesha vittala
ಬಾರೋ ಮನ್ಮನಕೆ ಮಂದಿರ
ಶ್ರೀ ರಾಘವೇಂದ್ರ [ಅ]
ಶರಣಾಗತ ನಾನು ಭಕ್ತವತ್ಸಲ ನೀನು
ಸುರತರುವಂದದಿ ಕಾಮಧೇನು ನೀ [ಅ.ಪ]
ಭಾಸುರಚರಿತನೆ ದಾಸನ ಮೊರೆ ಕೇಳಿ
ದೋಷಗಳೆಣಿಸದೆ ಪೋಷಿಸಲೆನ್ನನು [೧]
ಮನಸಿಜಪಿತ ಕಮಲೇಶ ಪದಾರ್ಚಕ
ಅನಂತ ಮಹಿಮ ನಿನ್ನ ಸೇವಕ ನಾನೆಂದು [೨]
bArO manmanake maMdira
SrI rAGavEMdra [a]
SaraNAgata nAnu Baktavatsala nInu
surataruvaMdadi kAmadhEnu nI [a.pa]
BAsuracaritane dAsana more kELi
dOShagaLeNisade pOShisalennanu [1]
manasijapita kamalESa padArcaka
anaMta mahima ninna sEvaka nAneMdu [2]
Leave a Reply